ಅಹ್ಮದ್‌ನಗರ ಮತ್ತು ಬೀಡ್ ಲೋಕಸಭಾ ಸ್ಥಾನಗಳನ್ನು ಎನ್‌ಸಿಪಿ(ಎಸ್‌ಸಿಪಿ) ಅಭ್ಯರ್ಥಿಗಳಾದ ನೀಲೇಶ್ ಲಂಕೆ ಮತ್ತು ಬಜರಂಗ್ ಸೋನಾವಾನೆ ಗೆದ್ದ ಬೆನ್ನಲ್ಲೇ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಕೈಜೋಡಿಸಲು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಕೆಲವು ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ನೀಲೇಶ್ ಲಂಕೆ ಮತ್ತು ಬಜರಂಗ್ ಸೋನಾವಾನೆ ಅವರು ಅಜಿತ್ ಪವಾರ್ ಬಣ ತೊರೆದು ಶರದ್ ಪವಾರ್ ಅವರ ಪಾಲಯಕ್ಕೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಕರ್ಜತ್-ಜಮಖೇಡ್ ಶಾಸಕ ರೋಹಿತ್ ಪವಾರ್ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಸುಮಾರು 18 ರಿಂದ 19 ಶಾಸಕರು ಶರದ್ ಪವಾರ್ ಪಕ್ಷಕ್ಕೆ ಮರಳಲು ಆಸಕ್ತಿ ಹೊಂದಿದ್ದಾರೆ. ಆದರೆ, ಪಕ್ಷಕ್ಕೆ ಕಷ್ಟದ ಸಮಯದಲ್ಲಿ ಶರದ್ ಪವಾರ್ ಅವರೊಂದಿಗೆ ಉಳಿದಿದ್ದ ಶಾಸಕರು ಅವರಿಗೆ ಮುಖ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಎನ್‌ಸಿಪಿ(ಎಸ್‌ಸಿಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರವನ್ನು ಶರದ್ ಪವಾರ್ ಅವರು ತೆಗೆದುಕೊಳ್ಳಲಿದ್ದಾರೆ. ಲೋಕಸಭೆ ಫಲಿತಾಂಶಗಳು ಹೊರ ಬಂದ ಬೆನ್ನಲ್ಲಿ ಕೆಲವು ಶಾಸಕರು ತಮ್ಮ ನಿರ್ಧಾರಗಳನ್ನು ಬದಲಿಸಿದ್ದಾರೆ. ಆದರೆ ನಾವು ಇನ್ನೂ ಶಾಸಕರ ವಾಪಸಾತಿ ಬಗ್ಗೆ ಚಿಂತನೆ ನಡೆಸಿಲ್ಲ. ಶರದ್ ಪವಾರ್ ಅವರೊಂದಿಗೆ ಸಮಾಲೋಚಿಸಿದ ನಂತರ ಪಕ್ಷವು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಅಜಿತ್ ಅವರ ಎನ್‌ಸಿಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ. ಮಹಾಯುತಿ ಸರ್ಕಾರಕ್ಕೆ ಸೇರಿದ ನಂತರ ಪಕ್ಷವು ಬೆಳೆಯುತ್ತದೆ ಎಂಬ ಭರವಸೆಯೊಂದಿಗೆ ನಾಯಕರು ಅಜಿತ್ ಪವಾರ್ ಅವರನ್ನು ಬೆಂಬಲಿಸಿದ್ದರು, ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
Some MLAs of #AjitPawar-led NCP are trying to re-establish a connection with #SharadPawar’s party ahead of the assembly poll in the state after NCP (SCP) candidates Nilesh Lanke and Bajrang Sonawane won the Ahmednagar and Beed #LokSabha seats.
Details here 🔗… pic.twitter.com/ekoI5rAKxt
— The Times Of India (@timesofindia) June 6, 2024
ಇದನ್ನು ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸಚಿವ ಬಿ ನಾಗೇಂದ್ರ ರಾಜೀನಾಮೆ ಸಾಧ್ಯತೆ


