ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ತೀವ್ರಗೊಂಡಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ 70 ಸ್ಥಾನಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿವೆ. ಇದೇ ವೇಳೆ ಆರ್‌ಜೆಡಿ ಮತ್ತು ಎಡಪಕ್ಷಗಳಿಗೆ 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಈ ಘೋಷಣೆಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯಸಭಾ ಸಂಸದ ಮನೋಜ್ ಝಾ ಈ ನಿರ್ಧಾರವನ್ನು ಟೀಕಿಸಿದ್ದು, “ಎರಡು ನಿಮಿಷಗಳ ನೂಡಲ್ಸ್” ನಂತೆ ಎಲ್ಲಾ ಆಯ್ಕೆಗಳನ್ನು ತ್ವರಿತವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಲ್ಲವನ್ನೂ 2 ನಿಮಿಷದ ನೂಡಲ್ಸ್‌ನಂತೆ
ಮುಖ್ಯಮಂತ್ರಿ ಹೇಮಂತ್ ಸೊರೆನ್, ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಮತ್ತು ಹೇಮಂತ್ ಸೊರೆನ್ ಅವರ ಸಂಪುಟದ ಹಿರಿಯ ಕ್ಯಾಬಿನೆಟ್ ಸಚಿವ ರಾಮೇಶ್ವರ್ ಓರಾನ್ ಶನಿವಾರ ಈ ಘೋಷಣೆ ಮಾಡಿದ್ದರು. “ಜೆಎಂಎಂ ಮತ್ತು ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದವುಗಳನ್ನು ಇಂಡಿಯಾ ಒಕ್ಕೂಟದ ಇತರ ಮೈತ್ರಿ ಪಕ್ಷಕ್ಕೆ ನೀಡಲಾಗುವುದು” ಎಂದು ಸೊರೆನ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದಾಗ್ಯೂ, ಆರ್‌ಜೆಡಿ ಸೀಟು ಹಂಚಿಕೆ ಸೂತ್ರದ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ರಾಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ಝಾ, “ಕಾಂಗ್ರೆಸ್ ಮತ್ತು ಜೆಎಂಎಂ ಏಕಪಕ್ಷೀಯವಾಗಿ 70 ಸ್ಥಾನಗಳಲ್ಲಿ ಮೈತ್ರಿ ಘೋಷಿಸಿ, ನಮಗೆ ಕೆಲವೇ ಕೆಲವು ಸೀಟುಗಳನ್ನು ಮಾತ್ರ ನೀಡುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ 2 ನಿಮಿಷದ ನೂಡಲ್ಸ್‌ನಂತೆ
2019 ರಲ್ಲಿ, ನಮ್ಮ ಅಭ್ಯರ್ಥಿಗಳು ಐದು ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಇದ್ದರು. ಇದು ಶೇಕಡಾವಾರು ಪ್ರಮಾಣದಲ್ಲಿ ಇತರ ಮೈತ್ರಿ ಪಕ್ಷಗಳ ಕಾರ್ಯಕ್ಷಮತೆಗಿಂತ ಉತ್ತಮವಾಗಿದೆ. ನಾವು 12 ಕ್ಷೇತ್ರಗಲ್ಲಿ ಏಕಾಂಗಿಯಾಗಿ ನಿಲ್ಲಲು ಪ್ರಾಬಲ್ಯ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
“ನಿನ್ನೆಯಿಂದ, ನಮ್ಮ ನಾಯಕ ತೇಜಸ್ವಿ ಯಾದವ್ ರಾಂಚಿಯಲ್ಲಿ ಇಲ್ಲಿದ್ದಾರೆ. ಎಲ್ಲರೂ ಇಲ್ಲೇ ಇದ್ದರೂ ಮೈತ್ರಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮನ್ನು ತೊಡಗಿಸದೇ ಇರುವುದು ಬೇಸರವಾಗಿದೆ… ನಮ್ಮ ಬಲ ಬಹುಶಃ ತುಂಬಾ ಹೆಚ್ಚಿರುವುದರಿಂದ ನೋವೂ ಆಗಿದೆ.. ಅಂತಹ 15ರಿಂದ 18 ಸ್ಥಾನಗಳನ್ನು ನಾವು ಗುರುತಿಸಿದ್ದೇವೆ. ಇಲ್ಲಿ ಏಕಾಂಗಿಯಾಗಿಯೂ ಬಿಜೆಪಿಯನ್ನು ಸೋಲಿಸಲು ಸಮರ್ಥರಾಗಿದ್ದೇವೆ. ಎರಡು ನಿಮಿಷಗಳ ನೂಡಲ್ಸ್‌ನಂತೆ ಎಲ್ಲಾ ನಿರ್ಧಾರಗಳನ್ನು ತಕ್ಷಣವೇ ಮಾಡಲು ಸಾಧ್ಯವಿಲ್ಲ” ಎಂದು ಮನೋಜ್ ಝಾ ಹೇಳಿದ್ದಾರೆ.
ಈ ಘೋಷಣೆಗೆ ಆರ್‌ಜೆಡಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೆನ್ ಅವರು ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುಡಾ ಕಡತ ಸುಟ್ಟು ಭಸ್ಮ; ಸಚಿವ ಬೈರತಿ ಸುರೇಶ್ ಬಂಧಿಸಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ
ಮುಡಾ ಕಡತ ಸುಟ್ಟು ಭಸ್ಮ; ಸಚಿವ ಬೈರತಿ ಸುರೇಶ್ ಬಂಧಿಸಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ


