2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ, ರಾಜ್ಯದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಸರ್ಕಾರ ರಚನೆ ಮಾಡುವ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ತಮ್ಮ ನಿವಾಸದಲ್ಲಿ ಸಭೆಯನ್ನು ಆಯೋಜಿಸಿದ್ದರು ಎಂಬ ವರದಿಗಳನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶುಕ್ರವಾರ ನಿರಾಕರಿಸಿದ್ದಾರೆ. ಶರದ್ ಮತ್ತು
“ನಾನು ಮತ್ತು ನನ್ನ ಸೋದರ ಸಂಬಂಧಿ ಅಜಿತ್ ಪವಾರ್ ಉದ್ಯಮಿ ಅದಾನಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದೆವು” ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಡ್ನವಿಸ್, ಅದಾನಿ ಈ ಹಿಂದೆ ನಮ್ಮ ಯಾವುದೇ ಸಭೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಶರದ್ ಮತ್ತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯೂಸ್‌ಲಾಂಡ್ರಿ ಮತ್ತು ದಿ ನ್ಯೂಸ್ ಮಿನಿಟ್‌ಗೆ ನೀಡಿದ ಸಂದರ್ಶನಗಳಲ್ಲಿ ಮಾತನಾಡಿರುವ ಶರದ್ ಪವಾರ್ ಅವರು, ಅದಾನಿ ಅವರು 2019 ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿಯ ಬೆಂಬಲವನ್ನು ಕೋರುವ ಎನ್‌ಸಿಪಿಯ ಸಾಧ್ಯತೆಯ ಕುರಿತು ಚರ್ಚೆ ನಡೆಸಲಾಗಿತ್ತು ಆರೋಪಿಸಿದ್ದರು, ಇದರ ನಂತರ ಫಡ್ನವೀಸ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ತಾನು, ಅಜಿತ್ ಪವಾರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅದಾನಿ ಉಪಸ್ಥಿತರಿದ್ದರು ಎಂದು ಶರದ್ ಪವಾರ್ ಹೇಳಿಕೊಂಡಿದ್ದಾರೆ. ಅದಕ್ಕೂ ಮುಂಚೆ ಅಜಿತ್ ಪವಾರ್ ಅವರು ಕೂಡಾ ಈ ಸಭೆಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
2019ರ ಚುನಾವಣೆಯ ನಂತರ ಶರದ್ ಪವಾರ್ ಅವರ ಎನ್‌ಸಿಪಿಯಿಂದ ಬಂಡೆದ್ದಿದ್ದ ಅಜಿತ್ ಪವಾರ್ ಅವರ ಬಣದೊಂದಿಗೆ ಬಿಜೆಪಿ ರಚಿಸಿದ್ದ 3 ದಿನಗಳ ಸರ್ಕಾರಕ್ಕೆ ಮುನ್ನವೆ ಈ ಸಭೆ ನಡೆದಿತ್ತು. ಮೂರೂವರೆ ದಿನಗಳ ಅವಧಿಯ ಅಲ್ಪಾವಧಿ ಸರ್ಕಾರದಲ್ಲಿ ಫಡ್ನವಿಸ್ ಮುಖ್ಯಮಂತ್ರಿ ಮತ್ತು ಅಜಿತ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಅದಾಗ್ಯೂ, ನಾಟಕೀಯ ಬೆಳವಣಿಗೆಯ ನಂತರ, ಅಜಿತ್ ಪವಾರ್ ಅವರು ಮತ್ತೆ ಅವಿಭಜಿತ ಎನ್‌ಸಿಪಿಗೆ ಮರಳಿದ್ದು ಮೂರು ದಿನಗಳ ಸರ್ಕಾರ ಉರುಳಿತ್ತು. ಅದರ ನಂತರ ಎನ್‌ಸಿಪಿಯು ಕಾಂಗ್ರೆಸ್ ಮತ್ತು ಅವಿಭಜಿತ ಶಿವಸೇನೆಯೊಂದಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿತ್ತು. ಆದಾಗ್ಯೂ, 2022ರ ಜೂನ್ ತಿಂಗಳಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರ ಗುಂಪು ಬಂಡಾಯವೆದ್ದು, ಬಿಜೆಪಿ ಜೊತೆಗೆ ಸೇರಿದ ನಂತರ ಸರ್ಕಾರವು ಪತನವಾಯಿತು.
ಇದರ ನಂತರ ಶಿಂಧೆ ಅವರು ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದು ಇದರಲ್ಲಿ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅದಾಗಿ ಒಂದು ವರ್ಷದ ನಂತರ, ಹಲವಾರು ಎನ್‌ಸಿಪಿ ಶಾಸಕರೊಂದಿಗೆ ಅಜಿತ್ ಪವಾರ್ ಮತ್ತೆ ಬಂಡಾಯವೆದ್ದು ಆಡಳಿತರೂಢ ಸಮ್ಮಿಶ್ರ ಸರ್ಕಾರಕ್ಕೆ ಸೇರಿ, ಅವರೂ ಉಪಮುಖ್ಯಮಂತ್ರಿಯಾದರು.
ಅಜಿತ್ ಪವಾರ್ ಅವರ ವಿಭಜನೆಯ ಪರಿಣಾಮವಾಗಿ ಎನ್‌ಸಿಪಿಯ ಒಂದು ಬಣ ಅವರನ್ನು ಬೆಂಬಲಿಸಿದ್ದರೆ, ಇನ್ನೊಂದು ಬಣ ಶರದ್ ಪವಾರ್ ಅವರನ್ನು ಬೆಂಬಲಿಸಿತು.
288 ಅಸೆಂಬ್ಲಿ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮೂರು ದಿನಗಳ ನಂತರ ನಡೆಯಲಿದೆ. ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆಯ ನಂತರ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.
ಇದನ್ನೂ ಓದಿ: ಗ್ರೇಟರ್ ಹೈದರಾಬಾದ್‌ನ ಟ್ರಾಫಿಕ್ ಸ್ವಯಂಸೇವಕರಾಗಿ ಟ್ರಾನ್ಸ್‌ಜೆಂಡರ್‌ಗಳ ನೇಮಕ
ಗ್ರೇಟರ್ ಹೈದರಾಬಾದ್‌ನ ಟ್ರಾಫಿಕ್ ಸ್ವಯಂಸೇವಕರಾಗಿ ಟ್ರಾನ್ಸ್‌ಜೆಂಡರ್‌ಗಳ ನೇಮಕ


