2022 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರು ಭಾಜನರಾಗಿದ್ದಾರೆ. ಸ್ಟಾಕ್‌ಹೋಮ್‌ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2021ರಲ್ಲಿ ಹವಾಮಾನ ಬದಲಾವಣೆಯ ತಿಳುವಳಿಕೆಗೆ ಸಹಾಯ ಮಾಡುವ ಪ್ರಕೃತಿಯ ಸಂಕೀರ್ಣ ಶಕ್ತಿಗಳನ್ನು ವಿವರಿಸುವ ಮತ್ತು ಊಹಿಸುವ ಕೆಲಸಕ್ಕಾಗಿ ಸ್ಯುಕುರೊ ಮನಬೆ, ಕ್ಲಾಸ್ ಹ್ಯಾಸೆಲ್ಮನ್ ಮತ್ತು ಜಾರ್ಜಿಯೊ ಪ್ಯಾರಿಸಿಯವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
ಈ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆ ಸೋಮವಾರದಿಂದ ಆರಂಭವಾಗಿದೆ. ನಿಯಾಂಡರ್ತಲ್ ಡಿಎನ್‌ಎಯಲ್ಲಿನ ಸಂಶೋಧನೆಗಳಿಗಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
ನಾಳೆ ರಸಾಯನಶಾಸ್ತ್ರದ ನೊಬೆಲ್, ಗುರುವಾರ ನೊಬೆಲ್ ಸಾಹಿತ್ಯ ಪ್ರಶಸ್ತಿ ಮತ್ತು ಅಕ್ಟೋಬರ್ 10 ರಂದು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ – ಡಿ ಉಮಾಪತಿ


