Homeಮುಖಪುಟ18 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ‘ದಿ ಕಾಶ್ಮೀರ್‌ ಫೈಲ್ಸ್‌’ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ

18 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ‘ದಿ ಕಾಶ್ಮೀರ್‌ ಫೈಲ್ಸ್‌’ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ

ಬಿಜೆಪಿ ಆಡಳಿತದ ಹಲವು ರಾಜ್ಯಗಳು ಅವರ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದವು

- Advertisement -
- Advertisement -

ದ್ವೇಷ ಪೂರಿತ ಸಿನಿಮಾ ‘ದಿ ಕಾಶ್ಮೀರ್‌‌ ಫೈಲ್ಸ್‌’ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮತ್ತು ಅವರ ಪತ್ನಿ, ನಟಿ ಪಲ್ಲವಿ ಜೋಶಿ ಮುಂಬೈನ ವಾರ್ಸೋವಾದಲ್ಲಿ 17.92 ಕೋಟಿ ರೂ.ಗಳ ಮೌಲ್ಯದ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ ಎಂದು ಹಿಂದೂಸ್ತಾನ್‌ ಎಕ್ಸ್‌‌ಪ್ರೆಸ್‌ ವರದಿ ಮಾಡಿದೆ.

ಮನೆ ಖರೀದಿ ಒಪ್ಪಂದದ ನೋಂದಣಿಗಾಗಿ 1.07 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅವರು ನಿರ್ದೇಶಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಜೊತೆಗೆ ಬಿಜೆಪಿ ಆಡಳಿತದ ಹಲವು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದ್ದವು. ಅಲ್ಲದೆ, ಬಿಜೆಪಿ ನಾಯಕರು ಚಿತ್ರ ನೋಡುವಂತೆ ಸಿನಿಮಾದ ಪ್ರಚಾರವನ್ನೂ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾರ್ಥೆನಾನ್ ಹೆಸರಿನ ಕಟ್ಟಡದಲ್ಲಿರುವ ಪಲ್ಲವಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ಹೊಸ ಅಪಾರ್ಟ್ಮೆಂಟ್ 30 ನೇ ಮಹಡಿಯಲ್ಲಿದೆ ಎಂದು ವರದಿಯು ಹೇಳಿದೆ. ಮನೆಯು 3,258 ಚದರ ಅಡಿ ಹೊಂದಿದ್ದು, ಮೂರು ಕಾರ್ ಪಾರ್ಕಿಂಗ್ ಸ್ಲಾಟ್‌ಗಳೊಂದಿಗೆ ಇದೆ. ದಂಪತಿಗಳು ನೇರವಾಗಿ ಪ್ರಾಜೆಕ್ಟ್ ಡೆವಲಪರ್ ಎಕ್ಸ್ಟಸಿ ರಿಯಾಲ್ಟಿಯಿಂದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.

ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಸೆಪ್ಟೆಂಬರ್ 27 ರಂದು ಒಪ್ಪಂದದ ನೋಂದಣಿ ಸಮಯದಲ್ಲಿ ವಿವೇಕ್ ಮತ್ತು ಪಲ್ಲವಿ 1.07 ಕೋಟಿ ರೂ. ಮೌಲ್ಯದ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಅಪಾರ್ಟ್ಮೆಂಟ್ ಮೌಲ್ಯವು ಪ್ರತಿ ಚದರ ಅಡಿಗೆ 55,000 ರೂ.ಗಿಂತ ಕ್ಕಿಂತ ಸ್ವಲ್ಪ ಹೆಚ್ಚು ಎಂದು ವರದಿ ಹೇಳಿದೆ.

ಇದನ್ನೂ ಓದಿ: EXCLUSIVE | ‘ಕಾಶ್ಮೀರ್‌ ಫೈಲ್ಸ್‌’ ಫ್ರೀ ತೋರಿಸ್ತಾರಂತೆ, ‘ಜೇಮ್ಸ್‌’ ಷೋ ಕಡಿತಗೊಳಿಸಿ ಅಂದ್ರು, ಆಗಲ್ಲ ಅಂದೆ: ಜೇಮ್ಸ್‌ ನಿರ್ಮಾಪಕ

ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ‘ದಿ ಕಾಶ್ಮೀರ್ ಫೈಲ್ಸ್’ 252 ಕೋಟಿ ರೂ.ಗಳ ನಿವ್ವಳ ಲಾಭವನ್ನು ಭಾರತದಲ್ಲಿ ಬಾಚಿಕೊಂಡಿತ್ತು. ಚಿತ್ರವು ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರವು ಇಸ್ಲಾಮೋಫೊಬಿಯಾವನ್ನು ಹೊಂದಿದ್ದು, ಸುಳ್ಳು ಮತ್ತು ದ್ವೇಷವನ್ನು ಹೆಚ್ಚಿಸುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...