2024ರ ಲೋಕಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಮಗೆ ಪ್ರಧಾನಿ ಹುದ್ದೆಯನ್ನು ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೆ, ಈ ಪ್ರಸ್ತಾಪವು ತನ್ನ ನಂಬಿಕೆಗೆ ವಿರುದ್ಧವಾಗಿದೆ ಎಂದು ತಾನು ತಿರಸ್ಕರಿಸಿದ್ದಾಗಿ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಪ್ರಧಾನಿ ಹುದ್ದೆಯ ಪ್ರಸ್ತಾಪದೊಂದಿಗೆ ನನ್ನನ್ನು ಸಂಪರ್ಕಿಸಿದರು. ನಾನು ಒಪ್ಪಿಗೆ ನೀಡಿದರೆ, ಅವರು ನನನಗೆ ಪ್ರಧಾನಿ ಹುದ್ದೆ ಸಿಗುವಂತೆ ಕೆಲಸ ಮಾಡುವುದಾಗಿ ನನಗೆ ತಿಳಿಸಿದ್ದರು” ಎಂದು ಹೇಳಿದ್ದಾರೆ.
“ನಾನು ತಕ್ಷಣ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ನಾನು ಆ ನಾಯಕನಿಗೆ ಸ್ಪಷ್ಟವಾಗಿ, ನಾನು ತತ್ವ ಸಿದ್ಧಾಂತವನ್ನು ನಂಬುವ ವ್ಯಕ್ತಿ ಎಂದು ಹೇಳಿದ್ದೆ. ನಾನು ಯಾವಾಗಲೂ ತತ್ವ ಸಿದ್ದಾತಗಳ ಮೇಲೆ ಕೆಲಸ ಮಾಡಿದ್ದೇನೆ ಮತ್ತು ಬದುಕಿದ್ದೇನೆ. ನಾನು ಎಂದಿಗೂ ದೇಶದ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರಲಿಲ್ಲ ಎಂದು ನಾನು ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಯಾವುದೇ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಪಾಲನೆ ಮಾಡಿಕೊಂಡು ಬರುತ್ತಿರುವ ತತ್ವ ಸಿದ್ದಾಂತ ಗಳ ಮೇಲೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಮಾದಿಗ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ : ಪ್ರಕರಣ ದಾಖಲು
ತಮಗೆ ಪ್ರಧಾನಿ ಹುದ್ದೆಯ ಭರವಸೆ ನೀಡಿದ ವಿಪಕ್ಷ ನಾಯಕ ಯಾರು ಎಂಬ ಬಗ್ಗೆ ಗಡ್ಕರಿ ಅವರು ಹೇಳಿಲ್ಲ. ಜೊತೆಗೆ ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಹಂಚಿಕೊಳ್ಳಲಿಲ್ಲ. ಆದರೆ ಬಿಜೆಪಿಯ ಅನೇಕ ನಾಯಕರಿಗೆ ಇದು ಆಶ್ಚರ್ಯವನ್ನುಂಟು ಮಾಡಿದೆ ಎಂದು ವರದಿಯಾಗಿದೆ. ಗಡ್ಕರಿ ಅವರು ಮೂಲ ಆರೆಸ್ಸೆಸ್-ಬಿಜೆಪಿಗನಾಗಿದ್ದರೂ, ಅವರಿಗೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧವಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಇಬ್ಬರೊಂದಿಗೆ ಉತ್ತಮ ಅವರು ಸಂಬಂಧ ಹೊಂದಿದ್ದಾರೆ.
ಸಾಮಾನ್ಯವಾಗಿ ಪವಾರ್ ಮತ್ತು ಗಡ್ಕರಿ, ಎರಡು ಸೈದ್ಧಾಂತಿಕವಾಗಿ ವಿಭಿನ್ನ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರೂ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡು ಹಲವು ಭಾರಿ ಪರಸ್ಪರ ಹೊಗಳಿಕೊಂಡಿದ್ದಾರೆ.
ಕಮ್ಯುನಿಸ್ಟ್ ನಾಯಕ ಎ ಬಿ ಬರ್ಧನ್ ಅವರೊಂದಿಗಿನ ತಮ್ಮ ದೀರ್ಘಕಾಲದ ಸ್ನೇಹವನ್ನು ಪುನರುಚ್ಚರಿಸಿದ ಗಡ್ಕರಿ, “ನನ್ನ ಸ್ನೇಹ ಮತ್ತು ಬರ್ಧನ್ ಬಗ್ಗೆ ನನಗೆ ಆಗಾಗ್ಗೆ ಕೇಳಲಾಗುತ್ತದೆ. ಅವರ ಪಕ್ಷಕ್ಕೆ ಅವರ ಬದ್ಧತೆ ಮತ್ತು ವಿಶ್ವಾಸ ನನಗೆ ಇಷ್ಟವಾಯಿತು. ಅದು ರಾಜಕೀಯವಾಗಲಿ ಅಥವಾ ಯಾವುದೇ ವೃತ್ತಿಯಾಗಲಿ ತತ್ವ ಸಿದ್ದಾಂತ ಮುಖ್ಯವಾದುದು” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


