Homeಚಳವಳಿಪರ್ಯಾಯ ಕಾನೂನು ವೇದಿಕೆಗೆ 22 ವರ್ಷ: ದಣಿವರಿಯದ ನಿರಂತರ ಕಾನೂನು ಹೋರಾಟ

ಪರ್ಯಾಯ ಕಾನೂನು ವೇದಿಕೆಗೆ 22 ವರ್ಷ: ದಣಿವರಿಯದ ನಿರಂತರ ಕಾನೂನು ಹೋರಾಟ

ಎಎಲ್‌ಎಫ್ ಆರಂಭದಿಂದಲೂ ಸ್ಲಂ ನಿವಾಸಿಗಳ ಹಕ್ಕುಗಳ ಪರವಾಗಿ ಕೆಲಸ ಮಾಡಿದೆ. ಅಕ್ರಮವಾಗಿ ಸ್ಲಂ ತೆರವು ಕಾರ್ಯಾಚರಣೆಗಳ ಸಂದರ್ಭದಲ್ಲಿ, ಇತರ ಸಮಸ್ಯೆಗಳಾದಾಗ ಅವರಿಗೆ ಕಾನೂನಿನ ನೆರವು ನೀಡಿದೆ.

- Advertisement -
- Advertisement -

ಅಂಚಿನಲ್ಲಿರುವ, ತುಳಿತಕ್ಕೊಳಗಾದ ಸಮುದಾಯಗಳಿಗೆ ಕಾನೂನಿನ ಅರಿವು ಮತ್ತು ನೆರವು ನೀಡುವ, ಜನಚಳವಳಿಗಳಿಗೆ ಒತ್ತಾಸೆಯಾಗಿ ನಿಲ್ಲುವ, ಸರ್ಕಾರದ ನೀತಿ ನಿರೂಪಣೆಗಳ ಸಾಧಕ ಬಾಧಕಗಳನ್ನು ಚರ್ಚಿಸುವ, ಸಂಶೋಧನೆಗೊಳಪಡಿಸುವ, ಮಾನವ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿ ದುಡಿಯುತ್ತಿರುವ ಮತ್ತು ಹತ್ತು ಹಲವು ಜನಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಗೆ (Alternative Law Forum- ALF) 22 ವರ್ಷ ತುಂಬಿದೆ.

ಈಗ ತನ್ನ 22ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಸಾಮಾಜಿಕ ಸುಧಾರಣೆಯ ಕೈಪಿಡಿ ಸಂವಿಧಾನ: ಮುಂದಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಚರ್ಚೆ ಹಮ್ಮಿಕೊಂಡಿದೆ. ಒರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಎಸ್.ಮುರಳೀಧರ್‌ರವರು ವಿಷಯದ ಕುರಿತು ಮಾತನಾಡಲಿದ್ದಾರೆ. ಹೋರಾಟಗಾರ್ತಿ ಮತ್ತು ಚಿಂತಕಿ ದು.ಸರಸ್ವತಿಯವರು ಸಭೆಯಲ್ಲಿ ಮಾತನಾಡಲಿದ್ದಾರೆ.

ಕಾರ್ಯಕ್ರಮವು ಡಿಸೆಂಬರ್ 17ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ALF ಕುರಿತು

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಾನೂನಿಕ ಮೂಲಕ ಎದುರಿಸುವುದನ್ನು ಅಭ್ಯಸಿಸುವ ಮತ್ತು ಹೋರಾಟನಿರತ ಶೋಷಿತ ಸಮುದಾಯಗಳು, ಜನಚಳವಳಿಗೆ ನೆರವಾಗುವ ಕೆಲಸವನ್ನು ALF ಇಷ್ಟು ವರ್ಷಗಳಲ್ಲಿ ನಿರಂತರವಾಗಿ ಮಾಡುತ್ತಾ ಬಂದಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಮತ್ತು ಸಮಗ್ರ ಕಾನೂನು ಪುಸ್ತಕಗಳ, ಸಂಶೋಧನೆಗಳ, ವರದಿಗಳ ಬೃಹತ್ ಗ್ರಂಥಾಲಯ ಹೊಂದಿರುವ ALF ಇದುವರೆಗೆ 85ಕ್ಕೂ ಹೆಚ್ಚು ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ಚರ್ಚೆ ಸಂವಾದಗಳನ್ನು ಏರ್ಪಡಿಸಿದೆ. ಹತ್ತಾರು ಪ್ರಚಾರಾಂದೋಲನಗಳನ್ನು ನಡೆಸಿದೆ. ನೂರಾರು ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದೆ. ಸಹಸ್ರಾರು ಶೋಷಿತ ಜನರಿಗೆ ಕಾನೂನು ನೆರವು ನೀಡಿದ ಹೆಗ್ಗಳಿಕೆ ಹೊಂದಿದೆ.

ಸಲಿಂಗ ಪ್ರೇಮವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 377ರ ವಿರುದ್ಧ ನಿರಂತರ ಪ್ರಚಾರಾಂದೋಲನವನ್ನು ALF ನಡೆಸಿದೆ. ಈ ಕುರಿತು ಪ್ರಧಾನಿಗಳಿಗೆ ಪತ್ರ ಬರೆದಿದೆ. ಅಲ್ಲದೆ ಆ ಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ.

ಎಎಲ್‌ಎಫ್ ಆರಂಭದಿಂದಲೂ ಸ್ಲಂ ನಿವಾಸಿಗಳ ಹಕ್ಕುಗಳ ಪರವಾಗಿ ಕೆಲಸ ಮಾಡಿದೆ. ಅಕ್ರಮವಾಗಿ ಸ್ಲಂ ತೆರವು ಕಾರ್ಯಾಚರಣೆಗಳ ಸಂದರ್ಭದಲ್ಲಿ, ಇತರ ಸಮಸ್ಯೆಗಳಾದಾಗ ಅವರಿಗೆ ಕಾನೂನಿನ ನೆರವು ನೀಡಿದೆ.

ಅಲ್ಲದೆ ಮಹಿಳೆಯರ ಕಾನೂನು ಸಂಬಂಧಪಟ್ಟಂತೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಆಂತರೀಕ ದೂರು ಸಮಿತಿಗಳ ಭಾಗವಾಗಿರುವ ಎಎಲ್ಎಫ್ ಅದರ ಬಗ್ಗೆ ತರಬೇತಿ ಶಿಬಿರಗಳನ್ನು ನಡೆಸಿದೆ. ಬಾಲ್ಯವಿವಾಹದ ವಿರುದ್ಧ ಅಭಿಯಾನ ನಡೆಸಿದೆ.

ಗಾರ್ಮೆಂಟ್ಸ್ ಕಾರ್ಮಿಕರ ಕನಿಷ್ಠ ವೇತನ ಸೇರಿದಂತೆ ಅವರ ಹಕ್ಕುಗಳು, ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ ಅವರು ಅನುಭವಿಸಿದ ಸಂಕಷ್ಟಗಳ ಕುರಿತು ಸಂಶೋಧನೆ ನಡೆಸಿ ಹಲವು ವರದಿಗಳನ್ನು ಹೊರತಂದಿದೆ.

ಸ್ಲಂ ಸಮುದಾಯಗಳ ಮತ್ತು ವಲಸೆ ಕಾರ್ಮಿಕರ ಹಕ್ಕುಗಳು, ಸಂವಿಧಾನದ ಅರಿವು, ಲಿಂಗ ಆಧಾರಿತ ಹಿಂಸೆ ಮತ್ತು ತಾರತಮ್ಯ, ದೌರ್ಜನ್ಯಗಳಲ್ಲಿನ ಸಂತ್ರಸ್ತರಿಗೆ ನ್ಯಾಯ, ಬೀದಿಬದಿ ವ್ಯಾಪಾರಿಗಳ ಹಕ್ಕುಗಳ ಕುರಿತು ಕಾರ್ಯಾಗಾರಗಳನ್ನು ALF ಹಮ್ಮಿಕೊಂಡಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಯಲ್ಲಿ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ, ಕೋಮುಗಲಭೆಗಳ ಸಂತ್ರಸ್ತರ ಹಕ್ಕುಗಳಿಗಾಗಿ ಎಎಲ್‌ಎಫ್ ಕೆಲಸ ಮಾಡಿದೆ.

ಹಿಜಾಬ್ ವಿವಾದ ತಲೆತೋರಿದಾಗ ಎಎಲ್‌ಎಫ್ ಸಕ್ರಿಯ ಮಧ್ಯಪ್ರವೇಶ ಮಾಡಿದೆ. ಈ ವಿವಾದದಿಂದ ಉಂಟಾದ ಹೆಣ್ಣುಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳ ಕುರಿತು ಅಧ್ಯಯನ ಮಾಡಿ ಸಲ್ಲಿಸಿದೆ. ಹಿಜಾಬ್ ಅನ್ನು ಕೇವಲ ಧಾರ್ಮಿಕ ಸಮಸ್ಯೆಯಾಗಿ ಪರಿಗಣಿಸದೆ ಶೈಕ್ಷಣಿಕ ಹಿನ್ನೆಲೆಯಲ್ಲಿ ನೋಡಬೇಕು ಎಂದು ವಾದಿಸಿದೆ.

ಜನಚಳವಳಿಗಳಿಗೆ ಕಾನೂನು ನೆರವು ನೀಡುವುದಕ್ಕೆ ನಮ್ಮ ಆದ್ಯತೆ- ವಿನಯ್ ಶ್ರೀನಿವಾಸ್

ಸಂವಿಧಾನವು ನಮ್ಮ ದೇಶ ಹೇಗಿರಬೇಕೆಂಬ ಕನಸು ಮತ್ತು ಅದನ್ನು ಸಾಧಿಸುವ ದಾರಿಯಾಗಿದೆ. ಆದರೆ ಅದು ಹೆಚ್ಚಾಗಿ ಕೋರ್ಟುಗಳು ಮತ್ತು ವಕೀಲರ ಕೈಯಲ್ಲಿ ಸಿಕ್ಕಿಕೊಂಡಿದೆ ಹೊರತು ಜನಸಾಮಾನ್ಯರಿಗೆ ಅದರ ಮಹತ್ವ ಮತ್ತು ಮೌಲ್ಯಗಳ ಅರಿವಿಲ್ಲ. ಹಾಗಿದ್ದಾಗ ಅವರು ತಮ್ಮ ಹಕ್ಕುಗಳನ್ನು ಚಲಾಯಿಸಲು, ಸಂವಿಧಾನವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎಎಲ್‌ಎಫ್ ಸಂವಿಧಾನ ಅರಿವು ಪ್ರಚಾರಾಂದೋಲವನ್ನು ಹಮ್ಮಿಕೊಂಡಿದೆ ಮತ್ತು ಸಂವಿಧಾನ ಪೀಠಿಕೆ ಪುಸ್ತಕವನ್ನು ಹೊರತಂದಿದೆ ಎನ್ನುತ್ತಾರೆ ವಕೀಲರಾದ ವಿನಯ್ ಕೂರಗಾಯಲ ಶ್ರೀನಿವಾಸರವರು.

2014ರಲ್ಲಿ ಬೀದಿ ವ್ಯಾಪಾರಿಗಳ ಕುರಿತು ಕಾನೂನು ಬಂದಿತು. ಅದಕ್ಕೂ ಮುಂಚೆಯೇ ಮಸೂದೆಯನ್ನು ಹೇಗೆ ಬಲಪಡಿಸಬಹುದು ಎಂಬುದಕ್ಕೆ ನಮ್ಮ ಒಳನೋಟಗಳನ್ನು ನೀಡಿದ್ದೆವು. ಕಾನೂನು ಬಂದರೂ ಸಹ ಬೀದಿ ವ್ಯಾಪಾರಿಗಳಿಗೆ ಅದರ ಅರಿವಿರಲಿಲ್ಲ ಮತ್ತು ಅದು ಓದಲು ಕಷ್ಟವಿತ್ತು. ಆಗ ಎಎಲ್‌ಎಫ್‌ ಬೀದಿ ವ್ಯಾಪಾರಿಗಳ ಪರ ನಿಂತು ಕಾನೂನು ಅರಿವು ಶಿಬಿರಗಳನ್ನು ನಡೆಸಿದೆವು. ಅದೇ ರೀತಿ ಹಲವಾರು ಸಮುದಾಯಗಳಿಗೆ ತಮ್ಮನ್ನು ರಕ್ಷಿಸುವ ಕಾನೂನುಗಳ ಬಗ್ಗೆ ಅರಿವಿಲ್ಲ. ಇದ್ದರೂ ಅವನ್ನು ಜಾರಿಗೊಳಿಸಲು ಸಾಧ್ಯವಿಲ್ಲದಾಗ ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಎನ್ನುತ್ತಾರೆ.

ಬಹಳಷ್ಟು ಜನರಿಗೆ ದೂರು ಹೇಗೆ ಬರೆಯಬೇಕು ಎಂಬುದು ಗೊತ್ತಿಲ್ಲ. ಹಾಗಾಗಿ ಸಣ್ಣ ಸಣ್ಣ ಪೋಸ್ಟರ್‌ಗಳ ಮೂಲಕ ಅರಿವು ಮೂಡಿಸುವುದು, ಕಾರ್ಯಾಗಾರ ಮಾಡುವುದನ್ನು ಮಾಡುತ್ತಾ ಬಂದಿದ್ದೇವೆ. ಅಲ್ಲದೆ 2014ರ ನಂತರ ಬೆಂಗಳೂರಿನ ಮಾಸ್ಟರ್ ಪ್ಲಾನ್ ನವೀಕರಣಗೊಂಡಿಲ್ಲ. ಅದು ನವೀಕರಿಸುವ ಸಂದರ್ಭದಲ್ಲಿ ನಾವು ಹಲವು ಗುಂಪುಗಳ ಜೊತೆ ಸೇರಿಕೊಂಡು ಬೆಂಗಳೂರಿನ ಮಾಸ್ಟರ್ ಪ್ಲಾನ್ ಅನ್ನು ಸಾಮಾಜಿಕ ನ್ಯಾಯ ದೃಷ್ಟಿಯಿಂದ ಹೇಗೆ ನೋಡಬೇಕು ಎಂಬ ವರದಿಯನ್ನು ಸಹ ನೀಡಿದ್ದೇವೆ ಎಂದರು.

ಯುವಜನರ ಜೊತೆ ಕೆಲಸ ಮಾಡಲು ಹಲವು ಸಂಸ್ಥೆಗಳ ಜೊತೆ ಸೇರಿ ಸಂವಿಧಾನ ಸಾಕ್ಷರತೆ, ಕ್ರಿಮಿನಲ್ ಜಸ್ಟೀಸ್, ಮೀಡಿಯಾ ಕ್ರಿಟಿಕ್ ಸೇರಿದಂತೆ ಹಲವು ಕೋರ್ಸ್‌ಗಳನ್ನು ಅಭಿವೃದ್ದಿಪಡಿಸಿದ್ದೇವೆ. ಮಹಿಳಾ ಚಳವಳಿ- ದಲಿತ ಚಳವಳಿ- ಕಾರ್ಮಿಕ ಚಳವಳಿ ಚಳವಳಿಗಳ ಆಂತರಿಕ ಅನುಸಂಧಾನದ ಚಳವಳಿಗಳ ಅಂತರ್‌ಸಂಬಂಧಗಳ ಬಗ್ಗೆ ಚರ್ಚಾಸರಣಿ ಆರಂಭವಾಗಿದೆ ಎಂದರು.

ತಾರತಮ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ. ಭಾರತದಲ್ಲಿ ತಾರತಮ್ಯ ಎದುರಿಸಲು ಇರುವ ಕಾನೂನುಗಳಿವೆ, ಅವು ಹೇಗೆ ಕೆಲಸ ಮಾಡುತ್ತಿವೆ, ಕಾನೂನನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಕೆಲಸ ಮಾಡುತ್ತಿದ್ದೇವೆ. ಒಟ್ಟಿನಲ್ಲಿ ಬೇರೆ ಬೇರೆ ಜನಚಳವಳಿಗಳಿಗೆ, ಕಾನೂನು ನೆರವು ಕೊಡುವುದು ಹೇಗೆ ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ವಿನಯ್ ಶ್ರೀನಿವಾಸ್.

ಇದನ್ನೂ ಓದಿ: ವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....