ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಲಕ್ಷದ್ವೀಪಕ್ಕೆ ಮಾಡಿದ ಪ್ರತಿ ಟ್ರಿಪ್‌ಗೆ ಲಕ್ಷದ್ವೀಪ ಆಡಳಿತವು ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ.
ದ್ವೀಪವಾಸಿಗಳು ಪಟೇಲ್ ಹೊರಡಿಸಿದ ‘ಅತಿರೇಕದ ಆದೇಶಗಳನ್ನು’ ಮರುಪಡೆಯಬೇಕು ಮತ್ತು ಅವರನ್ನು ಆ ಸ್ಥಾನದಿಂದ ಕೈ ಬಿಡಬೇಕು ಎಂದು ಸೋಮವಾರ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ, ಪಟೇಲ್ ಅವರು ಕೋಸ್ಟ್‌ಗಾರ್ಡ್ ಡಾರ್ನಿಯರ್ ವಿಮಾನದಲ್ಲಿ ಲಕ್ಷದ್ವೀಪದ ಅಗತ್ತಿ ನಗರಕ್ಕೆ ತಲುಪಿದರು.
ಫೆಬ್ರವರಿ 21ರಂದು ಕೋಸ್ಟ್‌ಗಾರ್ಡ್ ಡಾರ್ನಿಯರ್ ವಿಮಾನದಲ್ಲಿ ಪಟೇಲ್ ಮತ್ತು ಮೂವರು ಅಧಿಕಾರಿಗಳು ದಮನ್‌ನಿಂದ ಕೈಗೊಂಡ ಒಂದು ರಿಟರ್ನ್ ಪ್ರಯಾಣಕ್ಕಾಗಿ ಲಕ್ಷದ್ವೀಪ ಆಡಳಿತವು 23,21,280 ರೂ ಬಾಡಿಗೆ ಪಾವತಿ ಮಾಡಿದೆ!
ಇದು ರಕ್ಷಣಾ ಸಚಿವಾಲಯ ಕೇಳಿದ ಪ್ರತಿಕ್ರಿಯೆಗೆ ದೊರೆತ ಉತ್ತರವಾಗಿದೆ.
ಇದು ಲಕ್ಷದ್ವೀಪದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಪಟೇಲ್ ಅವರು ನೂರಾರು ತಾತ್ಕಾಲಿಕ ಕಾರ್ಮಿಕರು ಮತ್ತು ಗುತ್ತಿಗೆ ಕೆಲಸಗಾರರನ್ನು ವೆಚ್ಚ ಕಡಿಮೆ ಮಾಡುವ ಅಗತ್ಯವನ್ನು ಉಲ್ಲೇಖಿಸಿ ವಜಾಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಾಗಿ, ಅವರ ಬಗ್ಗೆ ವಿಪರೀತ ಅಸಮಾಧಾನವಿದೆ ಎಂದು ಕವರಟ್ಟಿ ಗ್ರಾಮ ಪಂಚಾಯತ್ ಸದಸ್ಯ ಕೆ.ಐ. ನಿಜಾಮುದ್ದೀನ್ ಆರೋಪಿಸುತ್ತಾರೆ.
ಎಸ್‌ಎಲ್‌ಎಫ್‌ನಿಂದ ಬಿಜೆಪಿ ಹೊರಕ್ಕೆ
ಏತನ್ಮಧ್ಯೆ, ವಿವಾದಾತ್ಮಕ ಕರಡು ಅಧಿಸೂಚನೆಗಳು ಮತ್ತು ಆಡಳಿತ ಹೊರಡಿಸಿದ ಆದೇಶಗಳ ವಿರುದ್ಧ ಹೋರಾಡುತ್ತಿರುವ ಬಹುಪಕ್ಷಗಳ ಸೇವ್ ಲಕ್ಷದ್ವೀಪ ವೇದಿಕೆ (ಎಸ್‌ಎಲ್‌ಎಫ್) ಬಿಜೆಪಿಯನ್ನು ತನ್ನ ಸಮಿತಿಯಿಂದ ಉಚ್ಚಾಟಿಸಿದೆ.
ಲಕ್ಷದ್ವೀಪದ ಬಿಜೆಪಿ ಉಸ್ತುವಾರಿ ಅಬ್ದುಲ್ಲ ಕ್ಕುಟ್ಟಿ ‘ಎಸ್‌ಎಲ್‌ಎಫ್‌ನೊಂದಿಗೆ ಸಹಕರಿಸಬಾರದೆಂದು ಅವರ ಪಕ್ಷದವರನ್ನು ಕೇಳಿಕೊಳ್ಳುತ್ತಿರುವ ಆಡಿಯೋ ಕೂಡ ಈಗ ಬಹಿರಂಗವಾಗಿದೆ.. ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರ ವಿರುದ್ಧದ ದೇಶದ್ರೋಹ ಪ್ರಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬಿಜೆಪಿ ಸಮರ್ಥ ನಿಲುವು ತಳೆಯಲಿಲ್ಲ. ಹೀಗಾಗಿ ಹೋರಾಟದ ವೇದಿಕೆಯಿಂದ ಬಿಜೆಪಿಯನ್ನು ಉಚ್ಛಾಟಿಸಿದ್ದೇವೆ ಎಂದು ಸೇವ್ ಲಕ್ಷದ್ವೀಪ ವೇದಿಕೆಯ ಸದಸ್ಯರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ನಿರ್ಮಾಪಕಿ ಆಯಿಷಾ ಸುಲ್ತಾನಗೆ ಬಂಧನದಿಂದ ರಕ್ಷಣೆ ನೀಡಿದ ಕೇರಳ ಹೈಕೋರ್ಟ್


