ಬಿಹಾರದ ಮುಂಗೇರ್‌ನಲ್ಲಿ 25 ಕೆ.ಜಿ ಬಟಾಣಿ ಕದ್ದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಹಗ್ಗದಿಂದ ಪರಸ್ಪರ ಕಟ್ಟಿಹಾಕಿ ಥಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಮುಂಗೇರ್‌ನ ಜೋವಾಬಹಿಯಾರ್ ಗ್ರಾಮದಲ್ಲಿ ಶನಿವಾರ ನಡೆದ ಈ ಘಟನೆಯ 20 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ವೈರಲ್ ವಿಡಿಯೋದಲ್ಲಿ ಬಾಲಕರ ಕೈಗಳನ್ನು ಪರಸ್ಪರ ಕಟ್ಟಿ, ಗ್ರಾಮದಲ್ಲಿ ಮೆರವಣಿಗೆ ಮಾಡಿರುವುದು ಮತ್ತು ಬಾಲಕರು ಅಳುತ್ತಿರುವುದನ್ನು ನೋಡಬಹುದು.
ಒಬ್ಬ ಬಾಲಕ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು, ಇತರ ಮೂವರ ಹೆಸರು ಹೇಳಿದ್ದ. ಆ ಬಳಿಕ ನಾಲ್ವರನ್ನೂ ಥಳಿಸಿ, ಸಾರ್ವಜನಿಕವಾಗಿ ಅವಮಾನಿಸಲಾಗಿದೆ. ಬಾಲಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ, ಅವರ ಕುಟುಂಬ ಸದಸ್ಯರಾಗಲಿ, ಗ್ರಾಮಸ್ಥರಾಗಲಿ ತಡೆಯಲು ಮುಂದಾಗಿಲ್ಲ ಎಂದು ವರದಿಗಳು ಹೇಳಿವೆ.
ಬಾಲಕರ ಮೇಲೆ ದೌರ್ಜನ್ಯ ನಡೆಯುವಾಗ ಕೆಲ ಅಂಗಡಿಯವರು ಮತ್ತು ಇತರ ಸ್ಥಳೀಯರು ಬೇರೆ ಕಳ್ಳತನ ಘಟನೆಗಳ ಬಗ್ಗೆ ನೆನಪಿಸಿ ಹೆಚ್ಚು ಹಲ್ಲೆ ನಡೆಯುವಂತೆ ಮಾಡಿದ್ದಾರೆ. ಮುಂದೆ ಕಳ್ಳತನ ಮಾಡದಂತೆ ತಡೆಯಲು ಈ ರೀತಿ ಶಿಕ್ಷೆ ಕೊಡಲಾಗಿದೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಝಾ | ಹಸಿವಿನಿಂದ ಮತ್ತೆ ಐವರು ಸಾವು: ಆಹಾರ ಖರೀದಿಸಲು ಕ್ಯಾಮರಾ, ಪ್ರೆಸ್ ಶೀಲ್ಡ್ ಮಾರಾಟಕ್ಕಿಟ್ಟ ಪತ್ರಕರ್ತ


