ಕರ್ನಾಟಕದ ಮಾಜಿ ಆಟಗಾರ್ತಿ ಮತ್ತು ಹಾಲಿ ಜರ್ಮನಿ ತಂಡದ ನಾಯಕಿ ಅನುರಾಧ ದೊಡ್ಡಬಳ್ಳಾಪುರ ಆಸ್ಟ್ರಿಯಾ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಗಳಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ.
ಆಗಸ್ಟ್ 14ರಂದು ಲೋಯರ್ ಆಸ್ಟ್ರಿಯಾದಲ್ಲಿ ನಡೆದ ನಾಲ್ಕನೇ ಮಹಿಳಾ ಟಿ20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರ ಈ ಅಮೋಘ ಆಟದ ನೆರವಿನಿಂದ ಜರ್ಮನಿಯು ಆಸ್ಟ್ರಿಯಾವನ್ನು 137 ರನ್‌ಗಳಿಂದ ಮಣಿಸಿದೆ. ಆ ಮೂಲಕ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ಅನುರಾಧ ದೊಡ್ಡಬಳ್ಳಾಪುರ ಭಾಜನರಾಗಿದ್ದಾರೆ.
@Anuradha_D_18 has become the first bowler ever to take 4️⃣ wickets in 4️⃣ balls in women's T20Is @Cricket_Germany @GoldenEagles_DE pic.twitter.com/mAXma3MWjJ
— Akash Mule (@im_akash196) August 14, 2020
ಶ್ರೀಲಂಕಾದ ಲಸಿತ್ ಮಾಲಿಂಗ ಮತ್ತು ಆಫ್ಘಾನಿಸ್ಥಾನದ ರಶೀದ್ ಖಾನ್‌ರವರ ಈ ಸಾಧನೆಯ ಅಪರೂಪದ ಪಟ್ಟಿಗೆ 33 ವರ್ಷದ ಅನುರಾಧ ದೊಡ್ಡಬಳ್ಳಾಪುರ ಸೇರಿದ್ದಾರೆ. ಲಸಿತ್ ಮಾಲಿಂಗ 2007ರ ಐಸಿಸಿ ವಿಶ್ವಕಪ್ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಗಳಿಸಿ ಸಾಧನೆಗೈದರೆ, 2019ರ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ರಶೀದ್ ಖಾನ್ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಜರ್ಮನಿ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 198 ರನ್ ಗಳಿಸಿದರೆ, ಉತ್ತರವಾಗಿ ಆಸ್ಟ್ರಿಯಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 61 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆಸ್ಟ್ರಿಯಾದ ಜೋ-ಆಂಟೊನೆಟ್ ಸ್ಟಿಗ್ಲಿಟ್ಜ್ (1), ಟಗ್ಸೆ ಕಜಾಂಸಿ (0), ಅನಿಷಾ ನೂಕಲಾ (0) ಮತ್ತು ಪ್ರಿಯಾ ಸಾಬು (0) ಅನುರಾಧ ದಾಳಿಗೆ ತತ್ತರಿಸಿದ ಆಟಗಾರರಾಗಿದ್ದಾರೆ.
•WWWW• | •1•••• | •W••••
Germany's @Anuradha_D_18 claimed incredible figures of 5️⃣/1️⃣ against Austria earlier, becoming the first woman to take four wickets in four balls in T20Is ? pic.twitter.com/EDPx5FBL4E
— ICC (@ICC) August 14, 2020
ಅನುರಾಧ ದೊಡ್ಡಬಳ್ಳಾಪುರ 3 ಒವರ್‌ಗಳಲ್ಲಿ ಕೇವಲ 1 ರನ್ ನೀಡಿ 5 ವಿಕೆಟ್‌ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದು ಕೂಡ ದಾಖಲೆ ಪಟ್ಟಿಗೆ ಸೇರಿದೆ.
ಈ ಹಿಂದೆ ಕರ್ನಾಟಕ ತಂಡದ ಪರವಾಗಿದ್ದ ಆಡಿದ್ದ ಅನುರಾಧ, ಮಧ್ಯಮವೇಗಿಯಾಗಿ ಹೆಸರು ಗಳಿಸಿದ್ದರು. ಈಗ ಜರ್ಮನಿ ತಂಡವನ್ನು ಮುನ್ನೆಡೆಸುತ್ತಿದ್ದು ವಿಶಿಷ್ಠ ಸಾಧನೆ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ ಧೋನಿ-ರೈನಾ!


