ಕರ್ನಾಟಕದ ಮಾಜಿ ಆಟಗಾರ್ತಿ ಮತ್ತು ಹಾಲಿ ಜರ್ಮನಿ ತಂಡದ ನಾಯಕಿ ಅನುರಾಧ ದೊಡ್ಡಬಳ್ಳಾಪುರ ಆಸ್ಟ್ರಿಯಾ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಗಳಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಆಗಸ್ಟ್ 14ರಂದು ಲೋಯರ್ ಆಸ್ಟ್ರಿಯಾದಲ್ಲಿ ನಡೆದ ನಾಲ್ಕನೇ ಮಹಿಳಾ ಟಿ20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರ ಈ ಅಮೋಘ ಆಟದ ನೆರವಿನಿಂದ ಜರ್ಮನಿಯು ಆಸ್ಟ್ರಿಯಾವನ್ನು 137 ರನ್‌ಗಳಿಂದ ಮಣಿಸಿದೆ. ಆ ಮೂಲಕ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ಅನುರಾಧ ದೊಡ್ಡಬಳ್ಳಾಪುರ ಭಾಜನರಾಗಿದ್ದಾರೆ.

ಶ್ರೀಲಂಕಾದ ಲಸಿತ್ ಮಾಲಿಂಗ ಮತ್ತು ಆಫ್ಘಾನಿಸ್ಥಾನದ ರಶೀದ್‌ ಖಾನ್‌ರವರ ಈ ಸಾಧನೆಯ ಅಪರೂಪದ ಪಟ್ಟಿಗೆ 33 ವರ್ಷದ ಅನುರಾಧ ದೊಡ್ಡಬಳ್ಳಾಪುರ ಸೇರಿದ್ದಾರೆ. ಲಸಿತ್ ಮಾಲಿಂಗ 2007ರ ಐಸಿಸಿ ವಿಶ್ವಕಪ್‌ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಗಳಿಸಿ ಸಾಧನೆಗೈದರೆ, 2019ರ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ರಶೀದ್ ಖಾನ್ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಜರ್ಮನಿ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 198 ರನ್ ಗಳಿಸಿದರೆ, ಉತ್ತರವಾಗಿ ಆಸ್ಟ್ರಿಯಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 61 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆಸ್ಟ್ರಿಯಾದ ಜೋ-ಆಂಟೊನೆಟ್ ಸ್ಟಿಗ್ಲಿಟ್ಜ್ (1), ಟಗ್ಸೆ ಕಜಾಂಸಿ (0), ಅನಿಷಾ ನೂಕಲಾ (0) ಮತ್ತು ಪ್ರಿಯಾ ಸಾಬು (0) ಅನುರಾಧ ದಾಳಿಗೆ ತತ್ತರಿಸಿದ ಆಟಗಾರರಾಗಿದ್ದಾರೆ.

ಅನುರಾಧ ದೊಡ್ಡಬಳ್ಳಾಪುರ 3 ಒವರ್‌ಗಳಲ್ಲಿ ಕೇವಲ 1 ರನ್ ನೀಡಿ  5 ವಿಕೆಟ್‌ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದು ಕೂಡ ದಾಖಲೆ ಪಟ್ಟಿಗೆ ಸೇರಿದೆ.

ಈ ಹಿಂದೆ ಕರ್ನಾಟಕ ತಂಡದ ಪರವಾಗಿದ್ದ ಆಡಿದ್ದ ಅನುರಾಧ, ಮಧ್ಯಮವೇಗಿಯಾಗಿ ಹೆಸರು ಗಳಿಸಿದ್ದರು. ಈಗ ಜರ್ಮನಿ ತಂಡವನ್ನು ಮುನ್ನೆಡೆಸುತ್ತಿದ್ದು ವಿಶಿಷ್ಠ ಸಾಧನೆ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ ಧೋನಿ-ರೈನಾ!

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts