- Advertisement -
- Advertisement -
ಕರ್ನಾಟಕದಲ್ಲಿ ಇಂದು 4,169 ಹೊಸ ಕೋವಿಡ್-19 ಪ್ರಕರಣಗಳು ಮತ್ತು 104 ಸಾವುಗಳು ವರದಿಯಾಗಿವೆ. ಅಲ್ಲಿಗೆ ಒಟ್ಟು ಪ್ರಕರಣಗಳ ಸಂಖ್ಯೆ 51,422 ಕ್ಕೆ ತಲುಪಿವೆ. ಬೆಂಗಳೂರು ಒಂದೇ ನಗರದಲ್ಲಿ 70 ಸಾವುಗಳು ವರದಿಯಾಗಿವೆ.
ಒಟ್ಟು ಪ್ರಕರಣಗಳಲ್ಲಿ 19,729 ಜನ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1032 ಕ್ಕೆ ಏರಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 2344 ಹೊಸ ಪ್ರಕರಣಗಳು ಪತ್ತೆಯಾಗಿವೆ, 497 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಇದುವರೆಗೂ ಬೆಂಗಳೂರಿನಲ್ಲಿ 507 ಸಾವುಗಳು ವರದಿಯಾಗಿದ್ದು, ಇಂದು ಒಂದೇ ದಿನ 70 ಸಾವುಗಳು ದಾಖಲಾಗಿವೆ. ಸದ್ಯ ಬೆಂಗಳೂರಿನಲ್ಲಿ 18,828 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಕೊರೊನಾದಿಂದ ದೇವರೆ ಕಾಪಾಡುವುದಾದರೆ ನೀವು ಯಾಕೆ ? ರಾಜಿನಾಮೆ ಕೊಟ್ಟು ಹೋಗಿ: ಡಿ. ಕೆ. ಶಿವಕುಮಾರ್
ಇದನ್ನೂ ಓದಿ: ಕ್ರಾಂತಿಕಾರಿ ಕವಿ ವರವರ ರಾವ್ ಅವರಿಗೆ ಕೊರೊನಾ ಪಾಸಿಟಿವ್ ದೃಢ


