ಭಾರತೀಯ ಉಮ್ರಾ ಯಾತ್ರಿಕರನ್ನು ಹೊತ್ತು ಮಕ್ಕಾದಿಂದ ಮದೀನಾದತ್ತ ತೆರಳುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿರುವ ದುರಂತ ಘಟನೆ ಸೌದಿ ಅರೇಬಿಯಾದ ಮದೀನಾ ಸಮೀಪದ ಮುಫ್ರಿಹತ್ ಎಂಬಲ್ಲಿ ಸೋಮವಾರ (ನವೆಂಬರ್ 17) ಬೆಳಗ್ಗಿನ ಜಾವ 1.30ರ ಸುಮಾರಿಗೆ (ಭಾರತೀಯ ಕಾಲಮಾನ) ನಡೆದಿದೆ.
ಅವಘಡದಲ್ಲಿ ಹೈದರಾಬಾದ್ ಮೂಲದ 42 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೆಲ ಮಾಧ್ಯಮಗಳು ಎಲ್ಲರೂ ಸಜೀವ ದಹನವಾಗಿದ್ದಾರೆ ಎಂದು ವರದಿ ಮಾಡಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.
ಅಪಘಾತ ಸಂಭವಿಸುವಾಗ 20 ಮಹಿಳೆಯರು ಮತ್ತು 11 ಮಂದಿ ಮಕ್ಕಳು ಸೇರಿದಂತೆ 45ರಷ್ಟು ಜನರು ಬಸ್‌ನಲ್ಲಿದ್ದರು. ಎಲ್ಲರೂ ನಿದ್ರೆಯಲ್ಲಿದ್ದರು ಎಂದು ವರದಿಗಳು ಹೇಳಿವೆ.
ಮಕ್ಕಾದಲ್ಲಿ ಉಮ್ರಾದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ, ಪ್ರವಾದಿಯವರ ರೌಳಾ ಶರೀಫ್ (ಸಮಾಧಿ) ಝಿಯಾರತ್‌ಗೆ ( ಪ್ರಾರ್ಥನೆಗೆ) ಯಾತ್ರಾರ್ಥಿಗಳು ತೆರಳುತಿದ್ದರು ಎಂದು ತಿಳಿದು ಬಂದಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಘಟನೆಯ ಬಗ್ಗೆ ತೀವ್ರ ದುಖಃ ವ್ಯಕ್ತಪಡಿಸಿದ್ದಾರೆ. ದುರಂತದ ಕುರಿತು ಖಚಿತ ಮಾಹಿತಿ ಸಂಗ್ರಹಿಸಲು ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಾಧಿಸುತ್ತಿರುವುದಾಗಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಹೈದರಾಬಾದ್ ಮೂಲದ ಎರಡು ಟ್ರಾವೆಲ್ ಏಜೆನ್ಸಿಗಳ ಜೊತೆ ಮಾತನಾಡಿದ್ದೇನೆ. ಯಾತ್ರಾರ್ಥಿಗಳ ಮಾಹಿತಿ ಸಂಗ್ರಹಿಸಿ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತೀಯ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಜೊತೆ ಹಂಚಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಡೆಪ್ಯೂಟಿ ಚೀಫ್ ಮಿಶನ್ (ಡಿಸಿಎಂ) ಅಬೂ ಮತೇನ್ ಜಾರ್ಜ್ ಜೊತೆ ಓವೈಸಿ ಮಾತನಾಡಿದ್ದಾರೆ.
#WATCH | Delhi | On the bus accident in Saudi Arabia, Hyderabad MP Asaduddin Owaisi says, "…Forty-two Hajj pilgrims who were travelling from Mecca to Medina were on a bus that caught fire…I spoke to Abu Mathen George, Deputy Chief of Mission (DCM) at the Indian Embassy in… https://t.co/oiPCgAz4tZ pic.twitter.com/jTuf2kCZPf
— ANI (@ANI) November 17, 2025
ಮೆಕ್ಸಿಕೊದಾದ್ಯಂತ ತೀವ್ರಗೊಂಡ ‘ಜೆನ್ ಝೀ’ ಪ್ರತಿಭಟನೆ : ಬೀದಿಗಿಳಿದ ಸಾವಿರಾರು ಯುವಜನತೆ


