ಮೊಗದಿಶು: (ಕ್ಸಿನ್ಹುವಾ) ಕಳೆದ 10 ತಿಂಗಳಲ್ಲಿ ಸೊಮಾಲಿಯಾದಲ್ಲಿ 427,000 ಕ್ಕೂ ಹೆಚ್ಚು ಜನರನ್ನು ಆಂತರಿಕವಾಗಿ ಸ್ಥಳಾಂತರಗೊಳಿಸಲಾಗಿದೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ (UNHCR) ಮಂಗಳವಾರ ತಿಳಿಸಿದೆ.
ದೇಶದಲ್ಲಿನ ಸಂಘರ್ಷ ಮತ್ತು ಅಭದ್ರತೆಯ ಕಾರಣದಿಂದಾಗಿ ಆಂತರಿಕ ಸ್ಥಳಾಂತರದ ಪ್ರಮಾಣವು ಅಕ್ಟೋಬರ್‌ನಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ದಕ್ಷಿಣ ಸೊಮಾಲಿಯಾದ ಗೆಡೋ, ಬೇ ಮತ್ತು ಬನಾದಿರ್ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರಗೊಂಡ ಪ್ರದೇಶಗಳಾಗಿ ದಾಖಲಾಗಿವೆ ಎಂದು ಯುಎನ್ ಹೆಚ್ ಸಿ ಆರ್ ನೇತೃತ್ವದ ರಕ್ಷಣೆ ಮತ್ತು ಪರಿಹಾರಗಳ ಮಾನಿಟರಿಂಗ್ ನೆಟ್‌ವರ್ಕ್ (PSMN) ಹೇಳಿದೆ.
ಕಳೆದ 17 ವರ್ಷಗಳಿಂದ ಸ್ಥಳಾಂತರದ ಪ್ರವೃತ್ತಿಯನ್ನು ಪತ್ತೆಹಚ್ಚುತ್ತಿರುವ PSMN, ಕಳೆದ ಅಕ್ಟೋಬರ್‌ನಲ್ಲಿ ಸುಮಾರು 66,000 ಸ್ಥಳಾಂತರಗಳನ್ನು ದಾಖಲಿಸಿದೆ. ಅದರಲ್ಲಿ 50,000 ಜನರ ಸ್ಥಳಾಂತರಕ್ಕೆ ಸಂಘರ್ಷ ಮತ್ತು ಅಭದ್ರತೆ ಕಾರಣವಾಗಿದೆ. 3,000 ಜನರ ಸ್ಥಳಾಂತರಕ್ಕೆ ಬರ ಮತ್ತು ಪ್ರವಾಹಗಳು ಕಾರಣವಾಗಿವೆ ಎಂದು ಸೊಮಾಲಿಯಾದ ರಾಜಧಾನಿ ಮೊಗಾದಿಶುನಲ್ಲಿ ಯುಎನ್ ಹೆಚ್ ಸಿಆರ್ ನಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ…ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಆಹಾರ, ಆಶ್ರಯ, ನೀರು, ಜೀವನೋಪಾಯಕ್ಕೆ ಸಹಕಾರ ಮತ್ತು ಆರೋಗ್ಯ ರಕ್ಷಣೆಯು ಸ್ಥಳಾಂತರಗೊಂಡ ಕುಟುಂಬಗಳ ಪ್ರಮುಖ ಅಗತ್ಯಗಳಾಗಿವೆ ಎಂದು ಯುಎನ್ ಹೆಚ್ ಸಿ ಆರ್ ಹೇಳಿದೆ.
ಅಧಿಕಾರಿಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ, ಯುಎನ್ ನಿರಾಶ್ರಿತರ ಏಜೆನ್ಸಿಯು ಆಂತರಿಕವಾಗಿ ಸ್ಥಳಾಂತರಗೊಂಡ ದುರ್ಬಲ ವ್ಯಕ್ತಿಗಳಿಗೆ (IDPs) ಮತ್ತು ಸಂಘರ್ಷ, ಅಭದ್ರತೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಬಾಧಿತ ಸಮುದಾಯಗಳಿಗೆ ಆದ್ಯತೆ ಮೇರೆಗಿನ ರಕ್ಷಣೆಯ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಅದು ಹೇಳಿದೆ.
ಸೊಮಾಲೀಯಾ ಸರ್ಕಾರ ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ಸ್ಥಳಾಂತರಗೊಂಡವರಿಗೆ ಉಪಯೋಗಕ್ಕೆ ಬರುವ ಪರಿಹಾರಗಳನ್ನು ಕಂಡುಹಿಡಿಯುವುದು ಅದರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ…ದಲಿತ್ ವಾಯ್ಸ್ ಸ್ಥಾಪಕ ಸಂಪಾದಕ ವಿ.ಟಿ.ರಾಜಶೇಖರ ಶೆಟ್ಟಿ ನಿಧನ


