Homeಮುಖಪುಟದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI ಆಯೋಗದ ಉಪಾಧ್ಯಕ್ಷ

ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI ಆಯೋಗದ ಉಪಾಧ್ಯಕ್ಷ

- Advertisement -
- Advertisement -

ದೇಶದಲ್ಲಿ ಶೇ. 45ರಷ್ಟು ಮ್ಯಾನೇಜ್‌ಮೆಂಟ್ ಮತ್ತು ಶೇ.48ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಎಂದು NITI ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಗುರುವಾರ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಸಂವಾದ’ವನ್ನು ಉದ್ದೇಶಿಸಿ ಮಾತನಾಡಿದ ಡಾ.ಕುಮಾರ್, ಉನ್ನತ ಶಿಕ್ಷಣದಲ್ಲಿ ನಿರ್ದಿಷ್ಟವಾಗಿ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧಿಸಲು ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಶಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದಲ್ಲಿ ಉನ್ನತ ಶಿಕ್ಷಣ ಕುಂಠಿತವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮ್ಯಾನೇಜ್‌ಮೆಂಟ್ ಕಾಲೇಜುಗಳು ಉದ್ಯಮದ ಅಗತ್ಯತೆಗಳನ್ನು ಪೂರೈಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡೀಪ್ ಲರ್ನಿಂಗ್, ರೋಬೋಟಿಕ್ಸ್ ಮುಂತಾದ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಪ್ರಾರಂಭಿಸಬೇಕು ಸಲಹೆ ನೀಡಿದ್ದಾರೆ.

US UK, ಜಪಾನ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳ ಸಾಲಿನಲ್ಲಿ ಇರುವ ಕೋರ್ಸ್ ಗಳನ್ನು ಸಹ ಅಳವಡಿಸಿಕೊಳ್ಳಿ ಎಂದಿರುವ ಅವರು, ನಮ್ಮ ದೇಶದ ಶೈಕ್ಷಣಿಕ ನೀತಿಯನ್ನು ಸುಧಾರಿಸಬೇಕು. ಅಂದು ಮಾತ್ರ ನಾವು ಉತ್ತಮ ಪಲಿತಾಂಶ ನೀರಿಕ್ಷಿಸಲು ಸಾಧ್ಯ ಎಂದು ಹೇಳಿದ್ದಾರೆ.

ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಒತ್ತು ನೀಡಿದ ಡಾ.ಕುಮಾರ್, ಭಾರತವು ವಾರ್ಷಿಕವಾಗಿ ತನ್ನ ಬಜೆಟ್‌ನ 0.8 ಪ್ರತಿಶತವನ್ನು ಆರ್ & ಡಿಗೆ ಖರ್ಚು ಮಾಡುತ್ತದೆ. ಇದರ ಪರಿಣಾಮವಾಗಿ ದೇಶವು ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ದಕ್ಷಿಣ ಕೊರಿಯಾದಂತಹ ದೇಶಗಳು ತಮ್ಮ ಬಜೆಟ್ ನಲ್ಲಿ 4.5 ಪ್ರತಿಶತವನ್ನು ಖರ್ಚು ಮಾಡುತ್ತವೆ. ಈ ಕಾರಣಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಅಂತಾರಾಜ್ಯ ಜಲವಿವಾದ ಸಂಬಂಧ ಫೆಬ್ರವರಿಯಲ್ಲಿ ಸರ್ವ ಪಕ್ಷ ಸಭೆ: ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ರಾಜಕಾರಣಿಗಳು ಮೊದಲು ವಿದ್ಯಾವಂಥರಾಗಬೇಕು ಏಕೆಂದರೆ ಆವರಿಗೆ ಶಿಕ್ಷಣ ಎಷ್ಟು ಮುಖ್ಯ ತಿಳಿಯ ಬೇಕು .
    ಆದರೆ ನಮ್ಮ ನೆಚ್ಚಿನ ಪ್ರಧಾನಿಯ ವರು ಉದ್ಯೋಗ ಕೇಳಿದರೆ ಪಕೋಡ ಬಜ್ಜಿ ಮಾಡು ಅನ್ನುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ

  2. ನಮ್ಮನೆಚ್ಚಿನ ಪ್ರಧಾನಿಯವರ ಪ್ರಕಾರ ನಿರುದ್ಯೋಗಿಗಳಾದ ನಾವು ಪಕೋಡಮಾಡುವ,ಆದರೆ ಈ ಉದ್ಯೋಗದಿಂದಾಗುವ ಉತ್ವನ್ನಗಳು global level ಮತ್ತು ಉದಾರೀಕರಣದ ಕಲ್ಪನೆಯನ್ನು ಇಣುಕಿನೋಡಲು ಭಯಂಕರ ಹೆದ ರಿ ಸೋಲುತ್ತವೆ. ಅಂತರರಾಷ್ಟ್ರೀಯಮಟ್ಟದಲ್ಲಿ ಈ ಪಕೋಡ ಉತ್ವನ್ನವು ಬೆಳೆಯದೇಹೋದರೆ ವಿದೇಶಿವಿನಿಮಯ ಹೇಗೆ ಸಾದ್ಯ? ವಿದೇಶದಿಂದ ಹಣ ಹೇಗೆ ಬಂದಾವೂ?
    ಅಂದಮೇಲೆ ನಮ್ಮ ಪ್ರಧಾನಿಯವರ ಈ B Tech in ಪಕೋಡ and it’s research ಮುಂದುವರಿಸುವುದು ಮತ್ತು ಇದರ ಬಗ್ಗೆ ಅಂತರರಾಷ್ಟ್ರೀಯ.ಮಟ್ಟದಲ್ಲಿ ಮಾತನಾಡುವುದು ಎಷ್ಟುಸರಿ.
    ತಿಳಿದ ಆರ್ಥಿಕ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿ.
    ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...