Homeಮುಖಪುಟ'ಗೋ-ವಿಜ್ಞಾನ' ಪರೀಕ್ಷೆ ಬರೆಯಲಿರುವ 5 ಲಕ್ಷ ಜನ - ಅವೈಜ್ಞಾನಿಕ ಪಠ್ಯಕ್ರಮಕ್ಕೆ ಆಕ್ಷೇಪ

‘ಗೋ-ವಿಜ್ಞಾನ’ ಪರೀಕ್ಷೆ ಬರೆಯಲಿರುವ 5 ಲಕ್ಷ ಜನ – ಅವೈಜ್ಞಾನಿಕ ಪಠ್ಯಕ್ರಮಕ್ಕೆ ಆಕ್ಷೇಪ

ಕೇಂದ್ರ ಸರ್ಕಾರ ಜಾಧವ್‌ಪುರ ವಿಶ್ವವಿದ್ಯಾಲಯಕ್ಕೆ 60 ಕೋಟಿ ರೂ.ಗಳನ್ನು ಸಂಶೋಧನೆಗಾಗಿ ನೀಡುತ್ತಿಲ್ಲ. ನಿರ್ದಿಷ್ಟ ಸಿದ್ಧಾಂತವನ್ನು ವಿದ್ಯಾರ್ಥಿಗಳ ತಲೆಗೆ ತುಂಬಲು ಪ್ರಯತ್ನಿಸುತ್ತಿದೆ- ಪ್ರಾಧ್ಯಾಪಕ ಪಾರ್ಥ ರಾಯ್

- Advertisement -
- Advertisement -

ದೇಶದ 5 ಲಕ್ಷಕ್ಕೂ ಹೆಚ್ಚು ಜನರು ಗುರುವಾರ “ಪವಿತ್ರ ಹಸು” ಕುರಿತು ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ “ಸ್ಥಳೀಯ ಹಸು ವಿಜ್ಞಾನ” ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ದೇಶದ 900 ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರ ಬರೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜಾಧವಪುರ ವಿವಿ ಸೇರಿದಂತೆ ಹಲವಾರು ವಿವಿಗಳ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಯುಜಿಸಿ ಕಳಿಸಿದ ಪತ್ರ ನೋಡಿ ಗಾಬರಿಯಾಗಿದ್ದಾರೆ. ಒಂದು ಅವೈಜ್ಞಾನಿಕ ಪಠ್ಯವುಳ್ಳ, ಒಂದು ಪಕ್ಷದ ಸಿದ್ಧಾಂತಕ್ಕೆ ಪೂರಕವಾದ ಸಿಲಬಸ್ ಇರುವ ಈ ಪರೀಕ್ಷೆ ಅವೈಜ್ಞಾನಿಕ ಕ್ರಮವನ್ನು ಪ್ರಚೋದಿಸುತ್ತದೆ ಎಂದು ಟೀಕಿಸಿದ್ದಾರೆ.

ಕೇಂದ್ರೀಯ ಪಶುಸಂಗೋಪನಾ ಸಚಿವಾಲಯದ ಅಡಿಯಲ್ಲಿ 2019 ರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಕಾಮಧೇನು ಆಯೋಗ್‌ನ ಮೆದುಳಿನ ಕೂಸು ಈ ಪರೀಕ್ಷೆ. ಅದರ ವೆಬ್‌ಸೈಟ್‌ನಲ್ಲಿನ ಅಧ್ಯಯನ ಸಾಮಗ್ರಿಗಳು ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದನ್ನು ಬಹುತೇಕ ಹೇಳುತ್ತವೆ. ಭಾರತೀಯ ಹಸುಗಳು ತಮ್ಮ ಹಂಪ್‌ಗಳಲ್ಲಿ ವಿಶೇಷವಾದದ್ದನ್ನು ಹೊಂದಿದ್ದು ಅದು ಸೂರ್ಯನ ಬೆಳಕನ್ನು ಚಿನ್ನವಾಗಿ ಪರಿವರ್ತಿಸುತ್ತದೆ ಮತ್ತು ಅದು ಅವುಗಳ ಹಾಲಿಗೆ ಹಳದಿ ಬಣ್ಣವನ್ನು ನೀಡುತ್ತದೆ” ಎಂಬ ಅವೈಜ್ಞಾನಿಕ ಮಾಹಿತಿ ಈ ಪಠ್ಯಕ್ರಮದಲ್ಲಿದೆ.

ಇದನ್ನೂ ಓದಿ: ‘ಮಂತ್ರಾಲಯದ ಸ್ವಾಮೀಜಿ ಕರೆ ಮಾಡಿದ್ದರು’ – ಪಠ್ಯ ಕಡಿತಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು

ಭಾರತ ಮತ್ತು ರಷ್ಯಾದ ಪರಮಾಣು ಕೇಂದ್ರಗಳಲ್ಲಿ ವಿಕಿರಣಗಳ ವಿರುದ್ಧ ರಕ್ಷಣೆಯಾಗಿ ಗೋವಿನ ಸಗಣಿ ಬಳಸಲಾಗುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ್ ಹಂಚಿಕೊಂಡ ಅಧ್ಯಯನ ವಸ್ತು ಹೇಳುತ್ತದೆ. ಇದು ಭೋಪಾಲ್ ನಿವಾಸಿಗಳನ್ನು ಅನಿಲ ಸೋರಿಕೆಯಿಂದ ರಕ್ಷಿಸಿತ್ತು. ಭಾರತೀಯ ಹಸುಗಳು ತಮ್ಮ ಹಂಪ್‌ಗಳಲ್ಲಿರುವ ಸೌರ ನಾಡಿಯ ಸಹಾಯದಿಂದ ಸೂರ್ಯನ ಶಕ್ತಿಯನ್ನು ಹೀರಿಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿವೆ ಎಂದು ಸಿಲಬಸ್ ಹೇಳುತ್ತದೆ. ಇದರ ಪರಿಣಾಮವಾಗಿ, ಭಾರತೀಯ ಹಸುವಿನ ಹಾಲು, ಹಸುವಿನ ಸಗಣಿ ಮತ್ತು ಹಸುವಿನ ಮೂತ್ರಗಳು ಪೌಷ್ಟಿಕಾಂಶಗಳನ್ನು ಹೊಂದಿವೆ ಎಂದು ಸಿಲಬಸ್ ಹೇಳಿದೆ.

“ಇದರ ಬಗ್ಗೆ ಅವೈಜ್ಞಾನಿಕ ಏನೂ ಇಲ್ಲ. ನಾವು ಹಸುವಿನ ಭಾರತೀಯ ತಳಿಯ ಪ್ರಾಮುಖ್ಯತೆಯನ್ನು ತೋರಿಸಲು ಬಯಸುತ್ತೇವೆ. ಆದ್ದರಿಂದ, ನಾವು ಈ ಪರೀಕ್ಷೆಯನ್ನು ನಡೆಸುತ್ತಿದ್ದೇವೆ” ಎಂದು ಕಾಮಧೇನು ಆಯೋಗ್ ಅಧ್ಯಕ್ಷ ವಲ್ಲಭಾಯಿ ಕಥಿರಿಯಾ ಹೇಳಿದರು.

ಜನವರಿ 5 ರಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪರೀಕ್ಷೆಗಳನ್ನು ಘೋಷಿಸಿದ್ದರು. ಫೆಬ್ರವರಿ 12 ರಂದು, ಯುಜಿಸಿ ದೇಶಾದ್ಯಂತದ ವಿಶ್ವವಿದ್ಯಾಲಯಗಳಿಗೆ “ಕಾಮಧೇನು ಗೋ ವಿಜಯಾನ್ ಪ್ರಚಾರ್ ಪ್ರಸಾರ್” ಪರೀಕ್ಷೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವಂತೆ ವಿವಿಗಳನ್ನು ಕೋರಿತ್ತು.

ಕೋಲ್ಕತ್ತಾದ ಎಬಿವಿಪಿ ಉಪಾಧ್ಯಕ್ಷ ಆದಿತ್ಯ ದಾಸ್, “ನಮ್ಮ ಕಲ್ಪನೆಯಲ್ಲಿ ನಾವು ತುಂಬಾ ಸ್ಪಷ್ಟವಾಗಿದ್ದೇವೆ. ನಮ್ಮ ಜ್ಞಾನ, ಮಾಹಿತಿ ಮತ್ತು ಹಸುವಿನ ಪವಿತ್ರತೆ ಮತ್ತು ಆರ್ಥಿಕ ಲಾಭಗಳೊಂದಿಗೆ ನಾವು ಸಾರ್ವಜನಿಕರ ಬಳಿಗೆ ಹೋಗುತ್ತೇವೆ. ಜನರು ನಿರ್ಧರಿಸುತ್ತಾರೆ. ಪ್ರಾಧ್ಯಾಪಕರದು ಏಕೆ ಅತಿಯಾದ ಪ್ರತಿಕ್ರಿಯೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪ.ಬಂಗಾಳಕ್ಕೆ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ

ಜಾದವ್‌ಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಯುಜಿಸಿಯ ಕೋರಿಕೆಯಿಂದ ಬೆರಗಾಗಿದ್ದಾರೆ. ಪರೀಕ್ಷೆಯನ್ನು ಉತ್ತೇಜಿಸಲು ಕೇಳಲಾಗಿರುವ 900 ವಿಶ್ವವಿದ್ಯಾಲಯಗಳಲ್ಲಿ ಜಾಧವ್‌ಪುರ ವಿವಿ ಕೂಡ ಒಂದು.

“ಕೇಂದ್ರ ಸರ್ಕಾರ ಜಾಧವ್‌ಪುರ ವಿಶ್ವವಿದ್ಯಾಲಯಕ್ಕೆ 60 ಕೋಟಿ ರೂ.ಗಳನ್ನು ಸಂಶೋಧನೆಗಾಗಿ ನೀಡುತ್ತಿಲ್ಲ. ನಿರ್ದಿಷ್ಟ ಸಿದ್ಧಾಂತವನ್ನು ವಿದ್ಯಾರ್ಥಿಗಳ ತಲೆಗೆ ತುಂಬಲು ಪ್ರಯತ್ನಿಸುತ್ತಿದೆ” ಎಂದು ಜಾಧವ್‌ಪುರ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಾರ್ಥ ರಾಯ್ ಹೇಳಿದರು.

ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಸಮಂತಕ್ ದಾಸ್ “ಇದರ ಹಿಂದೆ ಸಾಕಷ್ಟು ಚೆನ್ನಾಗಿ ಯೋಚಿಸಿದ ಯೋಜನೆ ಇದೆ ಎಂದು ನಾನು ಆತಂಕಿತನಾಗಿರುವೆ. ಅಸತ್ಯಗಳನ್ನು ನ್ಯಾಯಸಮ್ಮತಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಿಡಿ ಕಿರಿದ್ದಾರೆ.

13 ಭಾಷೆಗಳಲ್ಲಿ ನಡೆಯಲಿರುವ ಪರೀಕ್ಷೆಗಳ ನೋಂದಣಿ 2021 ರ ಜನವರಿ 15 ರಂದು ಪ್ರಾರಂಭವಾಯಿತು. ಆಯೋಗ್‌ನ ವಕ್ತಾರ ಪುರೀಶ್ ಕುಮಾರ್, “5 ಲಕ್ಷ, 10,000 ಜನರು ಈವರೆಗೆ ದಾಖಲಾಗಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಪರೀಕ್ಷೆ ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿ ಪರೀಕ್ಷಕರು ಮತ್ತು ಹಸುಗಳ ಸಂಖ್ಯೆಯು ಹೆಚ್ಚಾಗುತ್ತದೆ” ಎಂದು ಆಶಿಸಿದ್ದಾರೆ. ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಮೆಚ್ಚುಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಲಾಗಿದೆ.


ಇದನ್ನೂ ಓದಿ: ಬೆಲೆ ಏರಿಕೆ: ಮದುಮಕ್ಕಳಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಈರುಳ್ಳಿ ಉಡುಗೊರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತ ಹೀಗೆಯೇ ಮುಂದುವರಿದರೆ, ಬಾರತ ಶಿಲಾಯುಗಕ್ಕೆ ಮರಳಲಿದೆ.

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....