ಪ.ಬಂಗಾಳಕ್ಕೆ ಬಂಗಾಳದ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ
PC: ANI

ತೃಣಮೂಲ ಕಾಂಗ್ರೆಸ್ ಇಂದು ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಘೋಷಣೆಯನ್ನು ಪ್ರಕಟಿಸಿದೆ.. ಅದು ’ಬಾಂಗ್ಲಾ ನಿಜರ್ ಮೆಯೆಕೈ ಚಾಯೆ’ (ಬಂಗಾಳವು ತನ್ನ ಸ್ವಂತ ಮಗಳನ್ನು ಬಯಸಿದೆ). ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು “ಬಂಗಾಳದ ಮಗಳು” ಎಂದು ಚಿತ್ರಿಸುವಾಗ ಒಳಗಿನವರು ವರ್ಸಸ್ ಹೊರಗಿನವರು ಎಂಬ ತನ್ನ ವಾದಕ್ಕೆ ಆದ್ಯತೆ ನೀಡಿದೆ.

ರಾಜ್ಯದ ಆಡಳಿತ ಪಕ್ಷವು ನಗರದ ಪ್ರಧಾನ ಕಚೇರಿಯಿಂದ ಅಧಿಕೃತವಾಗಿ ಈ ಘೋಷಣೆ ಬಿಡುಗಡೆ ಮಾಡುತ್ತಿದ್ದಂತೆಯೇ, ಕೋಲ್ಕತ್ತಾದಾದ್ಯಂತ ಜಾಹೀರಾತು ಹೋರ್ಡಿಂಗ್‌ಗಳಲ್ಲಿ ಮಮತಾ ಬ್ಯಾನರ್ಜಿಯವರ ಫೋಟೋ ಜೊತೆಗೆ ಈ ಘೋಷಣೆ ಪ್ರಕಟಿಸಲಾಗಿದೆ.

“ರಾಜ್ಯದ ಜನರು ತಮ್ಮ ಮುಖ್ಯಮಂತ್ರಿಯಾಗಿ ಕಳೆದ ಹಲವಾರು ವರ್ಷಗಳಿಂದ ತಮ್ಮ ಜೊತೆಯಲ್ಲೇ ಇರುವ ತಮ್ಮ ಸ್ವಂತ ಮಗಳನ್ನು ಬಯಸುತ್ತಾರೆ. ಹೊರಗಿನವರು ಬಂಗಾಳದಲ್ಲಿ ತೀರ್ಮಾನ ತೆಗೆದುಕೊಳ್ಳುವುದನ್ನು ನಾವು ಬಯಸುವುದಿಲ್ಲ” ಎಂದು ತೃಣಮೂಲ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಬಿಜೆಪಿಯೊಂದಿಗೆ ತೀವ್ರ ರಾಜಕೀಯ ಹೋರಾಟದಲ್ಲಿ ತೊಡಗಿದ್ದು, ವಿರೋಧ ಪಕ್ಷದ ನಾಯಕರನ್ನು “ರಾಜ್ಯಕ್ಕೆ ಚುನಾವಣಾ ಪ್ರವಾಸೋದ್ಯಮದಲ್ಲಿರುವ ಹೊರಗಿನವರು” ಎಂದು ಗೇಲಿ ಮಾಡಿದೆ.

ಟಿಎಂಸಿ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ಗುರಿಯಾಗಿಸಿ ಚುನಾವಣಾ ಪ್ರಚಾರ ತಂತ್ರ ಹೆಣೆಯುತ್ತಿರುವುದರ ಭಾಗವಾಗಿ ಇಂದಿನ ಹೊಸ ಘೋಷಣೆ ಹೊರಬಿದ್ದಿದೆ. ಬಂಗಾಳದ ಮಗಳು ವರ್ಸಸ್ ಬಿಜೆಪಿ ಎಂಬ ಚರ್ಚೆಗೆ ಇದು ದಾರಿ ಮಾಡಬಹುದು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು “ಬಂಗಾಳದ ಮಗಳು” ಎಂದು ಚಿತ್ರಿಸಿ, ವಿರೋಧಪಕ್ಷಗಳನ್ನು ಹೊರಗಿನವರು ಎಂದು ಚಿತ್ರಸಲಾಗುತ್ತಿದೆ. ಈ ಮೊದಲು ಕೂಡ ಟಿಎಂಸಿ ಮುಖಂಡರು ತಮ್ಮ ಚುನಾವಣಾ ಭಾಷಣಗಳಲ್ಲಿ ಬಿಜೆಪಿಯನ್ನು ಹೊರಗಿನಿಂದ ಬಂದವರು ಎಂದೇ ಟೀಕಿಸಿದೆ.

ಇದನ್ನೂ ಓದಿ: ಮತ್ತೆ ಮುಖಭಂಗ – ಆಂಧ್ರದ 3,221 ಪಂಚಾಯತ್‌ಗಳಲ್ಲಿ‌ BJP ಗೆ‌‌‌ ಕೇವಲ 13 ಸ್ಥಾನ!

 

 

ಇನ್ನು ನಿನ್ನೆಯಷ್ಟೇ (ಫೆ.19) ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 22 ರಂದು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.


ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್‌‌‌‌ ಶಾಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ನ್ಯಾಯಾಲಯ

1 COMMENT

LEAVE A REPLY

Please enter your comment!
Please enter your name here