Homeಮುಖಪುಟವಿಶ್ವ ಇಡ್ಲಿ ದಿನ: ದಕ್ಷಿಣ ಭಾರತೀಯರ ನೆಚ್ಚಿನ ತಿಂಡಿ ’ಇಡ್ಲಿ’ ನಮ್ಮ ಕರ್ನಾಟಕದ್ದು..!

ವಿಶ್ವ ಇಡ್ಲಿ ದಿನ: ದಕ್ಷಿಣ ಭಾರತೀಯರ ನೆಚ್ಚಿನ ತಿಂಡಿ ’ಇಡ್ಲಿ’ ನಮ್ಮ ಕರ್ನಾಟಕದ್ದು..!

- Advertisement -
- Advertisement -

ಇಡ್ಲಿ..ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಇಡ್ಲಿ ಸಾಂಬಾರ್ ಎನ್ನುವುದು ಕರ್ನಾಟಕದ ಸಾಂಪ್ರದಾಯಿಕ ತಿಂಡಿ. ದಕ್ಷಿಣ ಭಾರತದ ಮನೆ ಮನೆಗಳಲ್ಲಿ ಬೆಳಗ್ಗಿನ ಉಪಹಾರದ ಪ್ರಧಾನ ತಿನಿಸಾಗಿದೆ. ಹೋಟೇಲ್‌ಗಳಲ್ಲಿ, ಟಿಫನ್ ಸೆಂಟರ್‌ಗಳಲ್ಲಿ ಇಡ್ಲಿ- ಸಾಂಬಾರ್‌ ತುಂಬಾನೇ ಫೇಮಸ್‌. ಹೋಟೆಲ್‌ಗೆ ಹೊದ ತಕ್ಷಣ ನೆನಪಾಗುವುದೆ ಮೊದಲು ಇಡ್ಲಿ-ಸಾಂಬಾರ್.

ಆರೋಗ್ಯಕರವಾದ ಈ ತಿಂಡಿ ಸಾಮಾನ್ಯವಾಗಿ ಮುಂಜಾನೆಯ ಉಪಹಾರಕ್ಕೆ ತಯಾರಿಸಲಾಗುವುದು. ವಿಶೇಷ ಪರಿಮಳ ಹಾಗೂ ಗುಣಮಟ್ಟವನ್ನು ಹೊಂದಿರುವ ಇಡ್ಲಿ ಉಪವಾಸ ಕೈಗೊಳ್ಳುವವರಿಗೆ ಅಥವಾ ದೇಹದ ತೂಕ ಇಳಿಸಲು ಅತ್ಯುತ್ತಮ ಆಯ್ಕೆ. ಉತ್ತರ ಭಾರತದವರು ಇಡ್ಲಿಯನ್ನು ಅಷ್ಟಾಗಿ ಇಷ್ಟಪಡದಿದ್ದರೂ,  ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುವ ಈ ತಿಂಡಿ ದಕ್ಷಿಣ ಭಾರತೀಯರಿಗೆ ಫೇವರೆಟ್ ತಿಂಡಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others 

ಇಡ್ಲಿ ಇಂದು ನಿನ್ನೆಯ ತಿಂಡಿಯಲ್ಲ ಇದರ ಇತಿಹಾಸ ಇನ್ನೂ ರೋಚಕವಾಗಿದೆ. 7 ನೇ ಶತಮಾನದಲ್ಲಿ ಇಡ್ಲಿಯನ್ನು ಕಂಡುಹಿಡಿಯಲಾಯಿತು ಎನ್ನಲಾದರೂ, ಕ್ರಿ.ಶ 920 ರಲ್ಲಿ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಎಂಬ ಕನ್ನಡದ ಮೊದಲ ಗದ್ಯ ಕೃತಿಯಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖವಿದೆ.

ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂಬುದು ಕಂಡು ಬರುತ್ತದೆ. ಕ್ರಿ.ಶ.1025 ರ ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಮೊದಲಾದವನ್ನು ಸೇರಿಸಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು.

ಇದನ್ನೂ ಓದಿ: ರೈತರಿಂದ ನೇರ ಗ್ರಾಹಕರಿಗೆ ವಿಷಮುಕ್ತ ಆಹಾರೋತ್ಪನ್ನ ಮಾರಲು ಪಣ: ‘ನಮ್ದು ಬ್ರ್ಯಾಂಡ್’ ಆರಂಭ

ಇನ್ನೂ ಕನ್ನಡ ರಾಜ ಮತ್ತು ವಿದ್ವಾಂಸ ಮೂರನೇ ಸೋಮೇಶ್ವರ ಕ್ರಿ.ಶ. 1130 ರಲ್ಲಿ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾರೆ.

ಕ್ರಿ.ಶ. 1508 ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ರಾಜನಾಗಿದ್ದ ಮಂಗರಸನ ‘ಸೂಪಶಾಸ್ತ್ರ’ ಕೃತಿಯು ಅಡುಗೆ ಕುರಿತಾದ ಮಹತ್ವದ ಕೃತಿ. ಆಹಾರದ ಮಹತ್ವದ ಬಗ್ಗೆ ಈ ಪುಸ್ತಕದಲ್ಲಿ ಹಲವು ಅಪರೂಪದ ಮಾಹಿತಿಗಳಿವೆ. ಇದರಲ್ಲಿ ಇಡ್ಲಿ ಬಗ್ಗೆ ಪ್ರಸ್ತಾಪಿಸಲಾಗಿದೆ.

Oats Idli Recipe - NDTV Food

ಇದನ್ನೂ ಓದಿ: ಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಕೆಲ ಆಹಾರ ತಜ್ಞರು ಹೇಳುವ ಹಾಗೆ ಇಡ್ಲಿ ಭಾರತಕ್ಕೆ ಬಂದದ್ದು ಇಂಡೋನೇಷ್ಯಾದಿಂದ. ಸುಮಾರು 800-1200 ಶತಮಾನದಲ್ಲಿ ಭಾರತಕ್ಕೆ ಬಂದಿದೆ ಎನ್ನುತ್ತಾರೆ. ಇಂಡೋನೇಶ್ಯಾದಲ್ಲಿ ಇದನ್ನು ಕೆಡ್ಲಿ ಎಂದು ಕರೆಯಲಾಗುತ್ತದೆ. ಕನ್ನಡ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಕೃತಿಯಲ್ಲೂ ಇಡ್ಡಲಿಗೆ ಎಂಬ ತಿಂಡಿಯ ಉಲ್ಲೇಖ ಬರುತ್ತದೆ ಹಾಗಾಗಿ ಇದು ಇಂಡೋನೇಷ್ಯಾದಿಂದ ಬಂದದ್ದು ಎಂಬ ವಾದ ಮುಂದಿಡುತ್ತಾರೆ.

17ನೇ ಶತಮಾನದವರೆಗೂ ಈ ತಿಂಡಿಗೆ ಅಕ್ಕಿಯನ್ನು ಬಳಸಿದ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಈಗ ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುತ್ತದೆ.

ಇಡ್ಲಿಯನ್ನು ಕೇವಲ ಉಪಹಾರವನ್ನಾಗಿ ಅಷ್ಟೇ ಅಲ್ಲ, ದಿನದ ಎಲ್ಲಾ ಹೊತ್ತು ಸವಿಯಬಹುದು. ಅಕ್ಕಿ ಮತ್ತು ಉದ್ದನ್ನು ನೆನೆಸಿ ತಯಾರಿಸಲಾಗುವ ಇಡ್ಲಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಹಾಗೆ ಇನ್ನೊಂದು ವಿಷ್ಯ..ಇಡ್ಲಿಗೂ ಒಂದು ದಿನ ಇದೆ. ಪ್ರತಿ ವರ್ಷ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನ ಆಚರಣೆ ಮಾಡಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others 


ಇದನ್ನೂ ಓದಿ: ಲಾಕ್‌ಡೌನ್‌ ಅವಧಿಯಲ್ಲಿ 1,550 ಟನ್ ಆಹಾರಧಾನ್ಯ ಹಾಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ವೈರಲ್ ಭಾಷಣ 2019ರದ್ದು

0
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು"...