Homeಅಂತರಾಷ್ಟ್ರೀಯಪಾಕಿಸ್ತಾನ: ಪತನದ ಹಾದಿಯಲ್ಲಿರುವ ಇಮ್ರಾನ್‌ ಖಾನ್ ಸರ್ಕಾರ; ಏಪ್ರಿಲ್ 3 ರಂದು ಅವಿಶ್ವಾಸ ನಿರ್ಣಯ ಮಂಡನೆ

ಪಾಕಿಸ್ತಾನ: ಪತನದ ಹಾದಿಯಲ್ಲಿರುವ ಇಮ್ರಾನ್‌ ಖಾನ್ ಸರ್ಕಾರ; ಏಪ್ರಿಲ್ 3 ರಂದು ಅವಿಶ್ವಾಸ ನಿರ್ಣಯ ಮಂಡನೆ

- Advertisement -
- Advertisement -

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಏಪ್ರಿಲ್ 3 ರಂದು ನಡೆಯಲಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಮಂಗಳವಾರ ತಿಳಿಸಿದ್ದಾರೆ. ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯ ಅಧಿವೇಶನದಲ್ಲಿ ಸೋಮವಾರ ಇಮ್ರಾನ್‌ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿವೆ.

“ಮಾರ್ಚ್ 31 ರಂದು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ನಂತರ ಏಪ್ರಿಲ್ 3 ರಂದು ಮತದಾನ ನಡೆಯಲಿದೆ” ಎಂದು ಸಚಿವ ಶೇಖ್ ರಶೀದ್ ಹೇಳಿದ್ದು, ಇದರಲ್ಲಿ ಇಮ್ರಾನ್‌ ಖಾನ್ ಅವರು ವಿಜಯಶಾಲಿಯಾಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಈ ಹಿಂದೆ ದೂರವಾಗಿದ್ದ ಮಿತ್ರಪಕ್ಷವಾಗಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್ (ಪಿಎಂಎಲ್-ಕ್ಯೂ) ಇಮ್ರಾನ್ ಖಾನ್‌ ಸರ್ಕಾರವನ್ನು ಬೆಂಬಲಿಸಲು ಒಪ್ಪಿಕೊಂಡಿದೆ. ಅದರಂತೆಯೆ, ದೂರವಾಗಿರುವ ಎಲ್ಲಾ ಮಿತ್ರಪಕ್ಷಗಳು ಹಿಂತಿರುಗುತ್ತವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮತ್ತು ವಿರೋಧ ಪಕ್ಷಗಳು ಭಾನುವಾರ ಮತ್ತು ಸೋಮವಾರ ಪ್ರತ್ಯೇಕ ರಾಜಕೀಯ ರ್‍ಯಾಲಿಗಳನ್ನು ನಡೆಸಿದೆ. ಕನಿಷ್ಠ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಸಂಸ್ಥೆಗಳು ಬಂಧಿಸಿದೆ ಎಂದು ಸಚಿವ ಶೇಖ್ ರಶೀದ್ ಹೇಳಿದ್ದು, ರಾಜಧಾನಿಯನ್ನು ದೊಡ್ಡ ದುರಂತದಿಂದ ರಕ್ಷಿಸಲಾಗಿದೆ ಎಂದು ಪ್ರತಿಪಾಸಿದ್ದಾರೆ.

ಇದನ್ನೂ ಓದಿ: ಕಮಿಷನ್ ಸರ್ವೇ ಸಾಮಾನ್ಯ ವಿಚಾರ; ಇದಕ್ಕೆ ದೊಡ್ಡ ಚರ್ಚೆ ಯಾಕೆ: ಹೆಚ್‌.ಡಿ. ಕುಮಾರಸ್ವಾಮಿ

ಕಳೆದ ಮಧ್ಯರಾತ್ರಿ ನಡೆದ ಶಕ್ತಿ ಪ್ರದರ್ಶನದಲ್ಲಿ ಪಾಕಿಸ್ತಾನದ ವಿರೋಧ ಪಕ್ಷಗಳ ಮೈತ್ರಿಯು ಪ್ರಧಾನ ಮಂತ್ರಿ ಇಮ್ರಾನ್‌ ಖಾನ್ ಅವರ ಸಂಕಷ್ಟದಲ್ಲಿರುವ ಸರ್ಕಾರವನ್ನು ಉರುಳಿಸಲು ಪ್ರತಿಜ್ಞೆ ಮಾಡಿವೆ. ಇದರ ನಂತರ ಸರ್ಕಾರ ಈ ಹೇಳಿಕೆಯನ್ನು ನೀಡಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ ಫಝಲ್ (ಜೆಯುಐ-ಐ) ಸೇರಿದಂತೆ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಇಸ್ಲಾಮಾಬಾದ್‌ನ ಶ್ರೀನಗರ ಹೆದ್ದಾರಿಯಲ್ಲಿ ದೊಡ್ಡ ರ್‍ಯಾಲಿಯನ್ನು ಆಯೋಜಿಸಿದೆ.

342 ಸದಸ್ಯರಿರುವ ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ 155 ಸದಸ್ಯರನ್ನು ಹೊಂದಿದ್ದು, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಕನಿಷ್ಠ 172 ಸಂಸದರ ಅಗತ್ಯವಿದೆ.

ಈ ಮಧ್ಯೆ, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮಂಗಳವಾರ ಚೀನಾ ಪ್ರವಾಸ ಕೈಗೊಂಡಿದ್ದು, ಯುದ್ಧಪೀಡಿತ ಅಫ್ಘಾನಿಸ್ತಾನದ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಕಚೇರಿ (ಎಫ್‌ಒ) ಪ್ರಕಾರ ಅಫ್ಘಾನಿಸ್ತಾನದ ನೆರೆಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಮೂರನೇ ಸಭೆ ಮಾರ್ಚ್ 29 ರಿಂದ 31 ರವರೆಗೆ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...