ಗೋವಾದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತೀರ್ಣರಾದ 50% ದಷ್ಟು ಪದವೀಧರರು ಗುಣಮಟ್ಟದ ಕೌಶಲ್ಯದ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC)ಯ ಸೆಮಿನಾರ್ ಅನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ನಮಗೆ ಹೊರಗಿನ ಚಿಂತನೆಯ ಅವಶ್ಯಕತೆ ಇದೆ. ಇಷ್ಟು ವರ್ಷಗಳಿಂದ ನಾವು ಬಿಎ, ಬಿ.ಕಾಂ ಮತ್ತು ಬಿಎಸ್ಸಿ ಪದವಿಗಳನ್ನು ಹೊಂದಿದ್ದೇವೆ. ನಾವು ಸಾಕಷ್ಟು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆಯೇ ಎಂದು ಯೋಚಿಸಲು ಕೂಡಾ ದುಃಖವಾಗುತ್ತದೆ. ಎಷ್ಟು ಮಂದಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವಾಗಿಯೇ ರೂಪಿಸಿಕೊಳ್ಳುತ್ತಿದ್ದಾರೆ?” ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೇಳಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ; ಮಕ್ಕಳ ಸುರಕ್ಷತೆ ಪೋಷಕರ ಕರ್ತವ್ಯ ಎಂದ ಗೋವಾ ಸಿಎಂ ಪ್ರಮೋದ್!
“ನಾವು ಹೈಯರ್ ಸೆಕೆಂಡರಿ ಹಂತದಲ್ಲಿ ಕೆಲವು ಕೋರ್ಸ್‌ಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಮುಂದಕ್ಕೆ ಹೆಚ್ಚು ಹೆಚ್ಚು ಬಿಎ ಮತ್ತು ಬಿ.ಕಾಂ ಕಾಲೇಜುಗಳಿಗೆ ಅನುಮತಿ ನೀಡಲು ಸಾಧ್ಯವಾಗುವುದಿಲ್ಲ. ಜನರು ಬಿಎ ಮತ್ತು ಬಿ.ಕಾಂ ಕಾಲೇಜುಗಳನ್ನು ಆರಂಭಿಸಲು ಮಂಜೂರಾತಿಗಾಗಿ ನನ್ನ ಬಳಿಗೆ ಬರುತ್ತಾರೆ, ಆದರೆ ನಾನು ಅವರಲ್ಲಿ, ಇದು ಯಾಕೆ ಎಂದು ಕೇಳುತ್ತೇನೆ. ಸುಮಾರು 50% ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಿದ ನಂತರ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾರೆ” ಎಂದು ಮುಖ್ಯಮಂತ್ರಿ ಪ್ರಮೋದ್ ಹೇಳಿದ್ದಾರೆ.
“ಐದು ಸ್ಟೆನೋಗ್ರಾಫರ್ ಹುದ್ದೆ ಖಾಲಿಯಿದ್ದರೆ, ಅದಕ್ಕೆ 25 ಅರ್ಜಿ ಸಲ್ಲಿಕೆಯಾಗುತ್ತದೆ. 5 ಕೆಳ ಹಂತದ ಗುಮಾಸ್ತ(ಎಲ್‌ಡಿಸಿ) ಹುದ್ದೆಗೆ ಅರ್ಜಿ ಆಹ್ವಾನ ಮಾಡಿದರೆ 25,000 ಅರ್ಜಿ ಸಲ್ಲಿಕೆಯಾಗುತ್ತದೆ. ಇದು ಆರು ತಿಂಗಳ ಹಿಂದೆ ನಡೆಸಿದ ಸಂದರ್ಶನದ ಉದಾಹರಣೆಯಾಗಿದೆ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಬಗ್ಗೆ ಮಾತನಾಡಿದ ಅವರು, ಮುಂದಿನ ವರ್ಷ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ನಾವು ಮುಂದಿನ ವರ್ಷ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ. ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಈ ನೀತಿಯು ಹೇಗೆ ಪ್ರಯೋಜನ ಮಾಡುತ್ತದೆ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ: ಗೋವಾ : ಅರವಿಂದ್ ಕೇಜ್ರಿವಾಲ್‌ರಿಂದ ಮತ್ತೆ ಉಚಿತ ವಿದ್ಯುತ್ ಯೋಜನೆ ಘೋಷಣೆ


