ಮಾಸ್ಕೋ: ರಷ್ಯಾವು ಉಕ್ರೇನ್‌ನಲ್ಲಿ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ಐಸಿಬಿಎಂ) ಉಡಾಯಿಸಿದೆ ಎಂದು ವರದಿಯಾಗಿದೆ. ಇದನ್ನು ಸುಮಾರು 60 ವರ್ಷಗಳ ಹಿಂದೆ ಬಳಕೆ ಮಾಡಲಾಗಿದ್ದು, ನಂತರ ಇದು ಪ್ರಥಮ ಬಳಕೆ ಎಂದು ಗುರುತಿಸಲಾಗಿದೆ.
ಇದನ್ನು ಉಕ್ರೇನ್‌ನಲ್ಲಿ ಸ್ಫೋಟಗೊಂಡ ಸ್ಥಳದಿಂದ ಸುಮಾರು 1,000 ಕಿಮೀ ದೂರದಲ್ಲಿರುವ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಉಡಾವಣೆ ಮಾಡಲಾಗಿದೆ. ಉಕ್ರೇನ್‌ನ ಡಿನಿಪ್ರೊದಲ್ಲಿ ಮೂಲಸೌಕರ್ಯವನ್ನು ಗುರಿಯಾಗಿಸಲು ಮಾಸ್ಕೋ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ಸ್ (ಎಂಐಆರ್‌ವಿ) ಪ್ರಯೋಗಿಸಲಾಗಿದೆ. ಇದು ತಂತ್ರಜ್ಞಾನದ ಮೊದಲ ಬಳಕೆಯಾಗಿದೆ.
5,800 ಕಿ.ಮೀ.ಗೂ ಅಧಿಕ ವ್ಯಾಪ್ತಿಯವರೆಗೆ ಗುರಿ ಚಲಾವಣೆಯನ್ನು ಈ ಐಸಿಬಿಎಂಗಳು ಹೊಂದಿವೆ.
ಇವುಗಳಿಂದ ಪರಮಾಣು, ರಾಸಾಯನಿಕ ಮತ್ತು ಜೈವಿಕ ಸಿಡಿತಲೆಗಳನ್ನು ಸಾಗಣೆ ಮಾಡಲು ತಯಾರಿಸಲಾಗಿದೆ. ಇವುಗಳು ಪ್ರಸ್ತುತ ಇರುವ ಸಿಡಿತಲೆಗಳನ್ನೂಸಾಗಣೆ ಮಾಡಬಲ್ಲವಾಗಿವೆ. ಇದನ್ನು ರಷ್ಯಾವು ಆರ್ ಎಸ್-26 ರುಬೆಜ್, ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ಬಳಸಿದೆ ಎಂದು ವರದಿಯಾಗಿದೆ.
ಇದರ ಕುರಿತು ರಷ್ಯಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಕೀವ್ ಇದನ್ನು ಬಳಕೆ ಮಾಡಿರುವುದನ್ನು ದೃಢಪಡಿಸಿದೆ. ಹೊಸ ಅಣ್ವಸ್ತ್ರ ನೀತಿಗೆ ಪುಟಿನ್ ಸಹಿ ಹಾಕಿದ ನಂತರ ಈ ಉಡಾವಣೆಯನ್ನು ನಡೆಸಲಾಗಿದೆ. ದೀರ್ಘ ಶ್ರೇಣಿಯ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಉಕ್ರೇನ್‌ಗೆ ಅಮೆರಿಕ ಅನುಮತಿ ನೀಡಿತ್ತು.
ಇದನ್ನೂ ಓದಿ…ನಕ್ಸಲ್ ವಿಕ್ರಂ ಗೌಡನದು ನಕಲಿ ಎನ್‌ಕೌಂಟರ್: ಸಿಪಿಐ (ಎಂಎಲ್) ಮಾಸ್ ಲೈನ್ ಖಂಡನೆ
ಸಾಮಾಜಿಕ ಜಾಲತಾಣ ಮತ್ತು ಟೆಲಿಗ್ರಾಮ್ ಹ್ಯಾಂಡಲ್‌ಗಳಲ್ಲಿ ಇದರ ವೀಡಿಯೊಗಳು ಕಾಣಿಸಿಕೊಂಡಿವೆ. ಪರಮಾಣು ಸಿದ್ಧಾಂತದ ಬದಲಾವಣೆಗಳಿಗೆ ಪುಟಿನ್ ಸಹಿ ಹಾಕಿದ ಕೇವಲ ಒಂದು ದಿನದ ನಂತರ ಈ ಉಡಾವಣೆಯಾಗಿದೆ.
Rubezh MIRV ತಂತ್ರಜ್ಞಾನವನ್ನು ಹೊಂದಿರುವ ಘನ-ಇಂಧನ ಐಸಿಬಿಎಂ ಆಗಿದೆ. ಇದನ್ನು 2011ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು 2012 ರಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಉಡಾವಣಾ ಸ್ಥಳದಿಂದ 5,800 ಕಿಮೀ ದೂರದ ಗುರಿಯನ್ನು ಇದು ಹೊಂದಿದೆ.
ಇದನ್ನೂ ಓದಿ…ಯಡಿಯೂರಪ್ಪ ಪ್ರಕರಣಗಳಲ್ಲಿ ಸುಪ್ರೀಂನಿಂದ ‘ಪಕ್ಷಪಾತದ ನಿಲುವು’ : ಸಿಜೆಐಗೆ ಪತ್ರ ಬರೆದ ವಕೀಲ
ಘನ-ಇಂಧನ ಕ್ಷಿಪಣಿಗಳನ್ನು ಉಡಾವಣೆ ಮಾಡಿದ ತಕ್ಷಣ ಇಂಧನ ತುಂಬುವ ಅಗತ್ಯವಿಲ್ಲ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸುಲಭವಾಗಿರುತ್ತದೆ. ಇದು ಇಂಧನ ಮತ್ತು ಆಕ್ಸಿಡೈಸರ್ ಮಿಶ್ರಣವಾಗಿದ್ದು, ಗಟ್ಟಿಯಾದ ರಬ್ಬರಿನ ವಸ್ತುವಿನಿಂದ ಒಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು ಲೋಹದ ಕವಚದಲ್ಲಿ ಪ್ಯಾಕ್ ಮಾಡಲಾಗುತ್ತದೆ.
ಆರ್ ಎಸ್-26 ನಲ್ಲಿ ಘನ-ಪ್ರೊಪೆಲೆಂಟ್ ಸುಟ್ಟಾಗ, ಇಂಧನ ಅಂಶದಿಂದ ಆಮ್ಲಜನಕವು ಅಗಾಧವಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಚಿಮ್ಮುವಿಕೆಗೆ ಸಹಾಯ ಮಾಡುತ್ತದೆ. ಜಾಗತಿಕ ನಾಯಕರು ಈ ಕುರಿತು ಭಾರೀ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ…ಇಸ್ರೇಲ್ ಪ್ರಧಾನಿ ನೆತನ್ಯಾಹು, ಹಮಾಸ್ ನಾಯಕ ಡೀಫ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಕೋರ್ಟ್


