ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಇಂದಿಗೆ ಆರು ವರ್ಷ ಪೂರ್ಣಗೊಂಡಿವೆ. ಅಂದು ನೋಟ್ ಬ್ಯಾನ್‌ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ಪ್ರಧಾನಿ ನೀಡಿದ್ದರು.
2016 ರ ನವೆಂಬರ್ 8 ರ ರಾತ್ರಿ 08:15 ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ ಬೇಕಾಗಿ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆಯ ಅಸಹಾಯಕತೆಯಿಂದ ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನೋಡ ನೋಡುತ್ತಿದ್ದಂತೆ ದೇಶದಲ್ಲಿ ಮನುಷ್ಯ ನಿರ್ಮಿತ ದುರಂತವೊಂದು ನಡೆದೇ ಹೋಯಿತು.
ದೇಶವು ಮರೆಯಬಾರದ ದುರಂತವೊಂದರ ಚಿತ್ರಗಳು ಇಲ್ಲಿವೆ.
ಗುರ್‌ಗಾಂವ್‌ನ ಬ್ಯಾಂಕ್‌ನ ಹೊರಗೆ ಇದ್ದ ಸಾಲಿನಲ್ಲಿ ತನ್ನ ಸರತಿಯನ್ನು ಕಳೆದುಕೊಂಡ ಕಾರಣಕ್ಕೆ ವೃದ್ಧನೊಬ್ಬ ಅಳುತ್ತಿರುವ ದೃಶ್ಯ | PC: HTಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು.ತನ್ನ ಹಣವನ್ನು ಬದಲಾಯಿಸಲು ಹೆಣಗಾಡುತ್ತಿರುವ ವೃದ್ಧ ಅಂಗವಿಕಲ ಮಹಿಳೆ.ನಗದು ಇಲ್ಲ ಎಂದು ಬೋರ್ಡ್ ಹಾಕಿದ ಬ್ಯಾಂಕಿನ ಮುಂದೆ ರೋಧಿಸುತ್ತಿರುವ ವೃದ್ದೆತನ್ನ ಹಣಕ್ಕಾಗಿ ಮೂತ್ರಚೀಲದೊಂದಿಗೆ ಬ್ಯಾಂಕಿಗೆ ಬಂದ ವೃದ್ಧ ರೋಗಿಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು. ಅವರ ಸಾವಿಗೆ ರೋಧಿಸುತ್ತಿರುವ ಸಂಬಂಧಿಕರುತಮ್ಮ ಹಣಗಳ ಬಗ್ಗೆ ಚಿಂತಿತರಾಗಿರುವ ಜನರು
ಹಣ ಬದಲಾವಣೆಗೆ ಬಂದ ವೃದ್ದೆ
ವಿಡಿಯೊಗಳು
ಅಮಾಯಕ ಜನರ ಮೇಲೆ ಲಾಠಿ ಚಾರ್ಜ್
ಬ್ಯಾಂಕಗಳಲ್ಲಿನ ಪರಿಸ್ಥಿತಿ
ಬ್ಯಾಂಕಿನ ಮುಂದೆ ಜನರ ಸರತಿ ಸಾಲು
2016 ನವೆಂಬರ್ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ಆದರೆ ಇಂದಿಗೆ ನೋಟ್ ಬ್ಯಾನ್ ಆಗಿ ಆರು ವರ್ಷಗಳಾಯಿತು!.
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಗೌರಿ ಲಂಕೇಶ್ ಹತ್ಯೆ ಸೇರಿದಂತೆ...
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...
ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.
ಯಾದವ್...
ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...
ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....
ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...
ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...
ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...
ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್ಪುರ...
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ