Homeಮುಖಪುಟನೋಟ್‌ ಬ್ಯಾನ್‌ ದುರಂತಕ್ಕೆ 6 ವರ್ಷ: ದೇಶ ಮರೆಯಬಾರದ ಚಿತ್ರಗಳಿವು!

ನೋಟ್‌ ಬ್ಯಾನ್‌ ದುರಂತಕ್ಕೆ 6 ವರ್ಷ: ದೇಶ ಮರೆಯಬಾರದ ಚಿತ್ರಗಳಿವು!

- Advertisement -
- Advertisement -

ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಇಂದಿಗೆ ಆರು ವರ್ಷ ಪೂರ್ಣಗೊಂಡಿವೆ. ಅಂದು ನೋಟ್‌ ಬ್ಯಾನ್‌ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ಪ್ರಧಾನಿ ನೀಡಿದ್ದರು.

2016 ರ ನವೆಂಬರ್‌ 8 ರ ರಾತ್ರಿ 08:15 ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ ಬೇಕಾಗಿ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ನೋಟ್‌ ಬ್ಯಾನ್‌ಗೆ 5 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಅದು ಆಗಿದೆಯೆ?

ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆಯ ಅಸಹಾಯಕತೆಯಿಂದ ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನೋಡ ನೋಡುತ್ತಿದ್ದಂತೆ ದೇಶದಲ್ಲಿ ಮನುಷ್ಯ ನಿರ್ಮಿತ ದುರಂತವೊಂದು ನಡೆದೇ ಹೋಯಿತು.

ದೇಶವು ಮರೆಯಬಾರದ ದುರಂತವೊಂದರ ಚಿತ್ರಗಳು ಇಲ್ಲಿವೆ.

ಗುರ್‌‌ಗಾಂವ್‌ನ ಬ್ಯಾಂಕ್‌ನ ಹೊರಗೆ ಇದ್ದ ಸಾಲಿನಲ್ಲಿ ತನ್ನ ಸರತಿಯನ್ನು ಕಳೆದುಕೊಂಡ ಕಾರಣಕ್ಕೆ ವೃದ್ಧನೊಬ್ಬ ಅಳುತ್ತಿರುವ ದೃಶ್ಯ | PC: HT
ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು.
Image
ತನ್ನ ಹಣವನ್ನು ಬದಲಾಯಿಸಲು ಹೆಣಗಾಡುತ್ತಿರುವ ವೃದ್ಧ ಅಂಗವಿಕಲ ಮಹಿಳೆ.
Image
ನಗದು ಇಲ್ಲ ಎಂದು ಬೋರ್ಡ್ ಹಾಕಿದ ಬ್ಯಾಂಕಿನ ಮುಂದೆ ರೋಧಿಸುತ್ತಿರುವ ವೃದ್ದೆ
Image
ತನ್ನ ಹಣಕ್ಕಾಗಿ ಮೂತ್ರಚೀಲದೊಂದಿಗೆ ಬ್ಯಾಂಕಿಗೆ ಬಂದ ವೃದ್ಧ ರೋಗಿ
ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್‌ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು. ಅವರ ಸಾವಿಗೆ ರೋಧಿಸುತ್ತಿರುವ ಸಂಬಂಧಿಕರು
ತಮ್ಮ ಹಣಗಳ ಬಗ್ಗೆ ಚಿಂತಿತರಾಗಿರುವ ಜನರು

 

http-%2f%2fo-aolcdn-com%2fhss%2fstorage%2fmidas%2f32d4793915fcf87be41c450381596fff%2f204583876%2f623013552

Image
ಹಣ ಬದಲಾವಣೆಗೆ ಬಂದ ವೃದ್ದೆ

ವಿಡಿಯೊಗಳು


ಅಮಾಯಕ ಜನರ ಮೇಲೆ ಲಾಠಿ ಚಾರ್ಜ್


ಬ್ಯಾಂಕಗಳಲ್ಲಿನ ಪರಿಸ್ಥಿತಿ


ಬ್ಯಾಂಕಿನ ಮುಂದೆ ಜನರ ಸರತಿ ಸಾಲು

2016 ನವೆಂಬರ್‌ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ಆದರೆ ಇಂದಿಗೆ ನೋಟ್‌ ಬ್ಯಾನ್ ಆಗಿ ಆರು ವರ್ಷಗಳಾಯಿತು!.

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...