ಜೆಎಂಎಂ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಜನರು ತಿಂಗಳಿಗೆ 5 ಕೆಜಿ ಬದಲಿಗೆ 7 ಕೆಜಿ ಪಡಿತರವನ್ನು ಪಡೆಯುತ್ತಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಹೇಳಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟವು ಪಿಂಚಣಿ ಮೊತ್ತವನ್ನೂ ಹೆಚ್ಚಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಾರ್ಖಂಡ್‌ನಲ್ಲಿ ಬಿಜೆಪಿ ಆಡಳಿತದಲ್ಲಿ 11 ಲಕ್ಷ ಪಡಿತರ ಚೀಟಿಗಳು ಮತ್ತು ಮೂರು ಲಕ್ಷ ಪಿಂಚಣಿಗಳನ್ನು ರದ್ದುಗೊಳಿಸಲಾಯಿತು, ಇದು ಹಸಿವಿನಿಂದ ಹಲವಾರು ಬುಡಕಟ್ಟು, ದಲಿತರ ಸಾವಿಗೆ ಕಾರಣವಾಯಿತು ಎಂದು ಸೊರೇನ್ ಆರೋಪಿಸಿದರು.
“ಬಿಜೆಪಿ ಆಡಳಿತದಲ್ಲಿ ಹಸಿವಿನಿಂದ ಸಾವುಗಳು ಸಾಮಾನ್ಯವಾಗಿದ್ದರೆ. ನಮ್ಮ ಸರ್ಕಾರದಲ್ಲಿ, ಪ್ರತಿಯೊಬ್ಬ ಜಾರ್ಖಂಡಿಯವರು ತಮ್ಮ ಹಕ್ಕುಗಳ ಪ್ರಕಾರ ಪಡಿತರ, ಪಿಂಚಣಿ ಮತ್ತು ಪೌಷ್ಟಿಕಾಂಶವನ್ನು ಪಡೆಯುತ್ತಿದ್ದಾರೆ ಎಂದು ನನಗೆ ಹೆಮ್ಮೆ ಇದೆ” ಎಂದು ಸೊರೇನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್‌ನಲ್ಲಿ ಮತ್ತೆ ನಮ್ಮ ಸರ್ಕಾರ ರಚನೆಯಾದ ತಕ್ಷಣ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ 5 ಕೆಜಿ ಧಾನ್ಯದ ಬದಲಿಗೆ 7 ಕೆಜಿ ಧಾನ್ಯವನ್ನು ನೀಡಲಾಗುವುದು, ಪಿಂಚಣಿ ಮೊತ್ತವನ್ನು ಸಹ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಬ್ಸಿಡಿ ಧಾನ್ಯಗಳಿಂದ ಹೊರಗುಳಿದಿರುವ ಹೆಚ್ಚುವರಿ 10 ಲಕ್ಷ ಜನರನ್ನು ಪಿಡಿಎಸ್ ವ್ಯವಸ್ಥೆಗೆ ಸೇರಿಸಲಾಗುವುದು ಎಂದು ಅವರು ಹೇಳಿದರು. ಮೈಯಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ, ಮಹಿಳಾ ಫಲಾನುಭವಿಗಳಿಗೆ ಮಾಸಿಕ ₹2,500 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಹಣ್ಣು ಮತ್ತು ಮೊಟ್ಟೆಗಳನ್ನು ನೀಡಲಾಗುತ್ತದೆ ಎಂದರು.
ಇದನ್ನೂ ಓದಿ; ಸನಾತನ ಧರ್ಮ ರಕ್ಷಣೆಗೆ ಪಕ್ಷದೊಳಗೆ ‘ನರಸಿಂಹ ವಾರಾಹಿ ಗಣಂ’ ವಿಭಾಗ ಸ್ಥಾಪಿಸಿದ ಪವನ್ ಕಲ್ಯಾಣ್


