ಉತ್ತರಾಖಂಡದ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದ ರಾಜ್ಯದ 22 ಜನರ ಪೈಕಿ 9 ಮಂದಿ ಮೃತಪಟ್ಟಿದ್ದು, 13 ಜನರನ್ನು ರಕ್ಷಿಸಲಾಗಿದೆ.
ಅಪಾಯಕ್ಕೆ ಸಿಲುಕಿದ್ದ ಚಾರಣಿಗರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ನಿನ್ನೆ (ಜೂನ್ 5) ವರದಿಯಾಗಿತ್ತು. ಇದೀಗ ಕಣ್ಮರೆಯಾದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಚಾರಣಿಗರು ಅಪಾಯಕ್ಕೆ ಸಿಲುಕಿದ್ದ ಮಾಹಿತಿ ಸಿಗುತ್ತಿದ್ದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೆಹ್ರಾಡೂನ್‌ಗೆ ತೆರಳಿದ್ದರು.
ವರದಿಗಳ ಪ್ರಕಾರ, ಬುಧವಾರ ಬೆಳಿಗ್ಗೆ 5 ಗಂಟೆಗೆ ಪ್ರಾರಂಭಿಸಲಾಗಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಮಧ್ಯಾಹ್ನ ನಿಲ್ಲಿಸಲಾಗಿದೆ. ರಕ್ಷಿಸಲಾಗಿರುವ ಚಾರಣಿಗರನ್ನು ಸಚಿವರು ಭೇಟಿಯಾಗಿದ್ದಾರೆ.
ಇಂದು ಬೆಳಿಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿರುವ ಸಚಿವರು, “ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ಅವರನ್ನು ನಾನು ಇಂದು ಭೇಟಿಯಾಗಿ ಈ ವಿಪತ್ತಿನ ಸಮಯದಲ್ಲಿ ಅವರ ತ್ವರಿತ ಪ್ರತಿಕ್ರಿಯೆಗಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ. ಶವಗಳನ್ನು ಬೆಂಗಳೂರಿಗೆ ಸಾಗಿಸಲು ವಿಮಾನದ ವ್ಯವಸ್ಥೆ ಮಾಡುವಂತೆಯೂ ನಾನು ಅವರ ಸಹಾಯವನ್ನು ಕೋರಿದೆ. ಅವರು ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
I met with Chief Secretary of #Uttarakhand Smt Radha Raturi and Secretary of Disaster Management Sri Ranjit Sinha to thank them for their swift response during this calamity.
I requested for their help to arrange an aircraft to transport the bodies to Bengaluru. They have agreed… pic.twitter.com/xB5S0FHCOR— Krishna Byre Gowda (@krishnabgowda) June 6, 2024
“ಎಲ್ಲಾ 9 ಮೃತದೇಹಗಳು ಮಧ್ಯಾಹ್ನ 12 ಗಂಟೆಗೆ ಡೆಹ್ರಾಡೂನ್ ತಲುಪುವ ಸಾಧ್ಯತೆಯಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಂಬಾಮ್ ಮಾಡಿದ ನಂತರ ನಾವು ಇಂದು ಎಲ್ಲಾ ಮೃತದೇಹಗಳನ್ನು ವಿಮಾನ ಮೂಲಕ ಬೆಂಗಳೂರಿಗೆ ರವಾನಿಸಲು ಯೋಜಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ವಾಪಾಸ್ಸಾಗಲು ಮುಂದಾದ ಅಜಿತ್ ಬಣದ ಬಹುಪಾಲು ಶಾಸಕರು!


