ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಜಿಂದಾಲ್ ಸ್ಟೀಲ್ ವರ್ಕ್ಸ್(JSW)ನ ಗ್ರೂಪ್‌ನ ಉದ್ದೇಶಿತ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್‌ನಿಂದ ಉಂಟಾಗುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರದ ಪರಿಣಾಮಗಳ ಕುರಿತ, ‘ತುರ್ತು ಸಂವಾದ’ದಲ್ಲಿ ತೊಡಗಿಸಿಕೊಳ್ಳಲು ಸೋನಿಪತ್‌ನ O.P. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರೂಪ್‌ನ ಸಂಸ್ಥಾಪಕ ಸಜ್ಜನ್ ಜಿಂದಾಲ್‌ಗೆ ಪತ್ರ ಬರೆದಿದ್ದಾರೆ.
ತಮ್ಮ ಭೂಮಿ ಮತ್ತು ಜೀವನೋಪಾಯದ ಉಳಿಯುವಿಗಾಗಿ ಧಿಂಕಿಯಾ ಗ್ರಾಮ ಜನತೆಯು ಕಂಪೆನಿಯ ಈ ಯೋಜನೆಯ ವಿರುದ್ದ ಹೋರಾಡುತ್ತಿದ್ದಾರೆ. ಇದರ ವಿರುದ್ದ ಇರುವ ಗ್ರಾಮಸ್ಥರನನ್ನು ರಾಜ್ಯ ಪ್ರೇರಿತ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದು, ಹಿಂಸಾತ್ಮಕ ದಾಳಿಗಳನ್ನು ಸಂಘಟಿಸಿ, ಬಲವಂತದ ಭೂ ಸ್ವಾಧೀನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಒಡಿಶಾ: ಜಿಂದಾಲ್ ಸ್ಟೀಲ್ ವರ್ಕ್ಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ- ಪೊಲೀಸರಿಂದ ಮಾರಣಾಂತಿಕ ಹಲ್ಲೆ
ಬೆಂಗಳೂರು ಮೂಲದ ಪರಿಸರ ಹಕ್ಕುಗಳ ಕಾನೂನು ಹೋರಾಟ ಸಂಸ್ಥೆಯಾದ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ (ESG) ಮತ್ತು ಹರಿಯಾಣದ ಸೋನಿಪತ್ O.P. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪು ಗ್ರಾಮಸ್ಥರ ಈ ಹೋರಾಟಕ್ಕೆ ಬೆಂಬಲಿಸಿದ್ದು, “ಪರಿಸರ ನ್ಯಾಯಕ್ಕಾಗಿ ವಿದ್ಯಾರ್ಥಿಗಳು” ಎಂಬ ಅಭಿಯಾನದ ವೇದಿಕೆಯನ್ನು ರಚಿಸಿದ್ದಾರೆ.
ವೇದಿಕೆಯು, JSW ಗ್ರೂಪ್ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರವನ್ನು ನಾಶ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ JSW ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಜ್ಜನ್ ಜಿಂದಾಲ್ ಅವರನ್ನು “ತುರ್ತು ಸಂವಾದದಲ್ಲಿ ತೊಡಗಿಸಿಕೊಳ್ಳಲು” ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ಜಿಂದಾಲ್ ಮುಂದೆ ಬಿಜೆಪಿ ಸರ್ಕಾರ ಏಕಾಏಕಿ ಮಂಡಿಯೂರಲೂ ಕಾರಣವಿದೆ:ಎಚ್.ಡಿ. ಕುಮಾರಸ್ವಾಮಿ
ಇಷ್ಟೇ ಅಲ್ಲದೆ, ಪರಿಸರ ಮತ್ತು ಬಡಜನರ ವಿರುದ್ಧ ಶ್ರೀಮಂತರು ಮತ್ತು ಶಕ್ತಿಶಾಲಿಗಳು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ನಿಲ್ಲುವಂತೆ ವೇದಿಕೆಯು ಇತರ ವಿದ್ಯಾರ್ಥಿಗಳಿಗೂ ಮನವಿ ಮಾಡಿದೆ. ಸಜ್ಜನ್ ಜಿಂದಾಲ್ ಅವರಿಗೆ ಬರೆದಿರುವ ಬಹಿರಂಗ ಪತ್ರಕ್ಕೆ ಸಹಿ ಹಾಕುವ ಮೂಲಕ ಆಂದೋಲನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳನ್ನು ವೇದಿಕೆಯು ಕೇಳಿಕೊಂಡಿದೆ.
ಈ ಬಗ್ಗೆ ಮಾತನಾಡಿದ O.P. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಜಾಗತಿಕ ವ್ಯವಹಾರಗಳ ವಿದ್ಯಾರ್ಥಿನಿ ದೇವಯಾನಿ, “ನಾವು ಜಿಂದಾಲ್ ಗುಂಪಿನ ಭಾಗವಾಗಿರುವುದರಿಂದ, ವಿದ್ಯಾರ್ಥಿಗಳಾದ ನಾವು ಇದರ ಬಗ್ಗೆ ಮಾತನಾಡಬೇಕಾಗುತ್ತದೆ. ಹೀಗಾಗಿ ಮಾನವೀಯತೆ ಮತ್ತು ಪರಿಸರವನ್ನು ನಿರ್ಲಕ್ಷಿಸುವುದರ ವಿರುದ್ಧ ನಾವು ನಿಲುವು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ನಮ್ಮ ಅಭಿಯಾನವು ಪ್ರಾರಂಭವಾದಾಗ ಸುಮಾರು 25 ಜನರು ಗುಂಪಿನಲ್ಲಿದ್ದರು. ಆದರೆ ಕಳೆದ ಕೆಲವು ದಿನಗಳಲ್ಲಿ ಇದು ಬೆಳೆದಿದ್ದು, ಸುಮಾರು 500 ವಿದ್ಯಾರ್ಥಿಗಳು ಮನವಿಗೆ ಸಹಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಜಿಂದಾಲ್: ನಾವೆಲ್ಲಿಗೆ ಹೋಗಬೇಕೆಂದು ಕಾರ್ಮಿಕರ ಅಳಲು



ವಿದ್ಯಾರ್ಥಿಗಳು ಅನ್ಯಾಯ ಕಂಡು, ಸಿಡಿದೆದ್ದು ನೊಂದವರ ಪರ ನಿಂತು, ಅನ್ಯಾಯ ದ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ನಡುಕಟ್ಟಿ ನಿಂತಿರುವುದು
ತುಂಬಾ ಸಂತೋಷ,
ಈ ನಿಮ್ಮ ಹೋರಾಟ ಕೋಮು ವಾದಿ ಸಂಘಟನೆ ಗಳಿಗೆ ಬಲಿಯಾಗದೆ, ನಿಜವಾದ ಹೋರಾಟಕ್ಕೆ ಸಜ್ಜಾಗಿ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ,
ನಿಜವಾದ ಹೋರಾಟಗಾರರೆಲ್ಲರಿಗೂ ನಮಸ್ಕಾರ,