ಪಂಜಾಬ್ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿರುವ ಚರಂಜಿತ್ ಸಿಂಗ್ ಚನ್ನಿ ಅಥವಾ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರಿಗೆ ತುಂಬಾ ಕಡಿಮೆ ಬೆಂಬಲ ಇದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಹೇಳಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಆಂತರಿಕ ಸಮಾಲೋಚನೆಗಳನ್ನು ನಡೆಸುತ್ತಿದ್ದು, ಈ ವೇಳೆ ಜಾಖರ್ ಅವರು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ; ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿರುವ ಸಿಎಂ ಚರಣ್ ಜಿತ್ ಚನ್ನಿ
“ಕಳೆದ ವರ್ಷ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪಕ್ಷವು ತನ್ನ ಎಲ್ಲಾ 79 ಶಾಸಕರನ್ನು ಕೇಳಿತ್ತು. ಆದರೆ ಈ ವೇಳೆ ಚನ್ನಿ ಮತ್ತು ನವಜೋತ್ ಸಿಧುಗೆ ಅತ್ಯಂತ ಕಡಿಮೆ ಮತಗಳು ಸಿಕ್ಕಿವೆ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಈ ವೇಳೆ, ತನ್ನ ಪರವಾಗಿ 42 ಕಾಂಗ್ರೆಸ್ ಶಾಸಕರು ಮತನೀಡಿದ್ದಾಗಿ ಸುನಿಲ್ ಜಾಖರ್ ವಿಡಿಯೊದಲ್ಲಿ ಪ್ರತಿಪಾದಿಸಿದ್ದಾರೆ. ಉಳಿದಂತೆ ಸುಖಜಿಂದರ್ ರಾಂಧವಾ ಅವರಿಗೆ 16 ಮತಗಳು ಮತ್ತು ಪ್ರಣೀತ್ ಕೌರ್ ಅವರಿಗೆ 12 ಶಾಸಕರು ಮತ ಸಿಕ್ಕಿದ್ದು, ನವಜೋತ್ ಸಿಧು ಮತ್ತು ಚರಂಜಿತ್ ಸಿಂಗ್ ಚನ್ನಿ ಅವರನ್ನು ಕ್ರಮವಾಗಿ ಆರು ಮತ್ತು ಇಬ್ಬರು ಶಾಸಕರು ಮಾತ್ರ ಇಷ್ಟಪಟ್ಟಿದ್ದಾರೆ ಎಂದು ಸುನೀಲ್ ಜಾಖರ್ ಅವರು ಅಬೋಹರ್ ಕ್ಷೇತ್ರದಲ್ಲಿ ತಮ್ಮ ಸಂಬಂಧಿ ಪರ ಪ್ರಚಾರ ಮಾಡುವಾಗ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್
ತನಗೆ ಉನ್ನತ ಹುದ್ದೆಯನ್ನು ನಿರಾಕರಿಸಲಾಗಿದ್ದರೂ, ಹೆಚ್ಚಿನ ಶಾಸಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಅತಿ ಹೆಚ್ಚು ಮತ ಪಡೆದರೂ ಉಪಮುಖ್ಯಮಂತ್ರಿ ಸ್ಥಾನ ನೀಡಿವುದಾಗಿ ಹೇಳಿದ್ದು ನನಗೆ ಅಸಮಾಧಾನ ತಂದಿತ್ತು ಎಂದು ಅವರು ತಿಳಿಸಿದ್ದಾರೆ.
“ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು ಇದನ್ನೇ. ನಾನು ಯಾವುದೆ ಹುದ್ದೆಯಲ್ಲಿ ಇಲ್ಲದಿದ್ದರೂ ಶಾಸಕರು ನನ್ನ ಪರವಾಗಿದ್ದಾರೆ” ಎಂದು ಅವರು ಹೇಳಿದ್ದಾರೆ. ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಸುನೀಲ್ ಜಾಖರ್ ಸ್ಪರ್ಧಿಸಿಲ್ಲ.
ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ಪಂಜಾಬ್: ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಫೋನ್ ಕರೆ: ತಾನೇ ತೋಡಿದ ಖೆಡ್ಡಾದೊಳಗೆ ಬೀಳುತ್ತಿದೆಯೇ ಎಎಪಿ?


