ಈ ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಅವತ್ತು ಕೆಂಪು ಕೋಟೆಯ ಮೇಲೆ ಕೂಡಾ ಕೇಸರಿ ಧ್ವಜ ಹಾರಿಸುತ್ತೇವೆ. ಮುಂದೊಂದು ದಿನ ಭಗವಾಧ್ವಜವೇ ರಾಷ್ಟ್ರಧ್ವಜ ಆಗಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿರುವ ವಿವಾದದ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಈಶ್ವರಪ್ಪ, “ಇವತ್ತು ಇಡೀ ದೇಶದಲ್ಲಿ ತ್ರಿವರ್ಣ ಧ್ವಜ ರಾಷ್ಟ್ರಧ್ವಜ ಆಗಿದೆ. ಇದರಲ್ಲಿ ಏನೂ ಅನುಮಾನ ಇಲ್ಲ. ಅದಕ್ಕೆ ನಾವೆಲ್ಲರೂ ಕೂಡಾ ಗೌರವ ಕೊಡುತ್ತೇವೆ. ಅಲ್ಲಿ ಭಗವಾಧ್ವಜ ಹಾರಿಸಿದ್ದು ಹೌದು. ಕೇಸರಿ ಧ್ವಜ ಹಾರಿಸಬಾರದೇನು?” ಎಂದು ಕೇಳಿದ್ದಾರೆ.
ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿಧ್ವಜ ಹಾರಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಕೇಸರಿ ಯಾವ ಧ್ವಜ ಸ್ಥಂಭದಲ್ಲಿ ಬೇಕಾದರೂ ಹಾರಿಸಬಹುದು. ಯಾವುದೇ ಸ್ಥಳದಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸಬಹುದು. ಆದರೆ ರಾಷ್ಟ್ರಧ್ವಜವನ್ನು ತೆಗೆದು ಯಾವುದೇ ಕೇಸರಿ ಧ್ವಜ ಹಾಕಿಲ್ಲ, ಹಾಕುವುದು ಇಲ್ಲ. ಹಿಂದೂ ಮುಸಲ್ಮಾನರಲ್ಲಿ ಧ್ವೇಷ ಬೆಳೆಸುವುದಕ್ಕೋಸ್ಕರ ರಾಷ್ಟ್ರ ಧ್ವಜವನ್ನು ಬಳಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಅವತ್ತು ಕೆಂಪು ಕೋಟೆಯ ಮೇಲೆ ಕೂಡಾ ಕೇಸರಿ ಧ್ವಜ ಹಾರಿಸುತ್ತೇವೆ. ಮುಂದೊಂದು ದಿನ ಭಗವಾಧ್ವಜವೇ ರಾಷ್ಟ್ರಧ್ವಜ ಆಗಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ಹೇಳಿದ್ದಾರೆ.#NaanuGauri @ikseshwarappa #Tricolor #safran pic.twitter.com/vVY1MxiOXH
— Naanu Gauri (@naanugauri) February 9, 2022
“ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್ ಸುಳ್ಳು ಹೇಳಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಡಿಕೆ ಶಿವಕುಮಾರ್‌ಗಿಂತಲೂ ಹೆಚ್ಚು ಗೌರವ ನಮಗೆ ಇದೆ. ರಾಷ್ಟ್ರಧ್ವಜವನ್ನು ತೆಗೆದಿಲ್ಲ. ಧ್ವಜಸ್ಥಂಭಗಳಲ್ಲಿ ಕೇಸರಿ ಧ್ವಜವನ್ನು ಹಾಕಿಕೊಂಡು ಬಂದಿದ್ದಾರೆ. ಅದನ್ನು ತಿರುಗಿಸಿ ಹಿಂದೂ ಮುಸಲ್ಮಾನರ ಬಗ್ಗೆ ಗೊಂದಲ ಉಂಟು ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಕೇಸರಿ ಧ್ವಜ ಎಲ್ಲಿ ಬೇಕಾದರೂ ಹಾರಿಸಬಹುದು. ಮುಂದಿನ ದಿನದಲ್ಲಿ ಕೆಂಪುಕೋಟೆ ಮೇಲೆ ಹಾರಿಸುತ್ತೇವೆ. ನೂರಾರು ವರ್ಷಗಳ ಹಿಂದೆ ರಾಮ, ಮಾರುತಿಯ ರಥಗಳಲ್ಲಿ ಕೇಸರಿ ಧ್ವಜ ಇತ್ತು. ಆಗ ತ್ರಿವರ್ಣ ಧ್ವಜ ನಮ್ಮ ದೇಶದಲ್ಲಿ ಇತ್ತಾ? ಅದು ಈಗ ರಾಷ್ಟ್ರಧ್ವಜ ಆಗಿದೆ. ಆದರೆ ಈಗ ಈ ದೇಶದಲ್ಲಿ ಅನ್ನ ತಿಂದ ಪ್ರತಿಯೊಬ್ಬನೂ ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು, ಇದರ ಬಗ್ಗೆ ಪ್ರಶ್ನೆಯೆ ಇಲ್ಲ” ಎಂದು ಅವರು ತಿಳಿಸಿದ್ದಾರೆ.
“ಇವತ್ತು ಹಿಂದೂ ವಿಚಾರದ ಬಗ್ಗೆ, ಹಿಂದುತ್ವದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ಒಂದು ಕಾಲದಲ್ಲಿ ಅಯೋಧ್ಯೆ ರಾಮಮಂದಿರ ಕಟ್ಟುವ ಬಗ್ಗೆ ಕೇಳಿ ನಗುತ್ತಿದ್ದರು. ಈಗ ಕಟ್ಟಿದ್ದೇವೆ ಅಲ್ಲವೇ? ಹಾಗೆಯೆ ಯಾವುದೋ ಕಾದಲ್ಲಿ, ನೂರು, ಇನ್ನೂರು ಅಥವಾ ಐನೂರು ವರ್ಷಗಳಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜ ಆಗಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಎಲ್ಲಿ ಬೇಕಾದರೂ ಹಾರಾಡಬಹುದು. ಆದರೆ ಈಗ ಸಂವಿಧಾನ ಬದ್ದವಾಗಿ ತ್ರಿವರ್ಣ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಯಾರೇ ತಪ್ಪಿದರೂ ಅವ ರಾಷ್ಟ್ರದ್ರೋಹಿಯಾಗುತ್ತಾನೆ” ಎಂದು ಈಶ್ವರಪ್ಪ ಹೇಳಿದ್ದಾರೆ.



ಸತ್ಯಕ್ಕೆ ಇನ್ನೊಂದು ಹೆಸರೇ ನಾನು ಗೌರಿ ನ್ಯೂಸ್… 🙏🙏🙏🙏
ಈಶ್ವರಪ್ಪನವರು ವರಿಷ್ಠರನ್ನು ತೃಷ್ಟಿಕರಿಸಿ ಮಂತ್ರಿಪದವಿ ಉಳಿಸಿಕೊಳ್ಳುವುದಕೋಸ್ಕರ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ
ಹುಚ್ಚು ಈಶ್ವರಪ್ಪ! ಹುಂಭುತನ ಏನೇನು ಮಾತಾನಾಡುತ್ತಾನೆ ಎಂಬುದು ಅವನಿಗೆ ಗೋತ್ತಿರುವದಿಲ್ಲವಂತೆ ಈಗಾಗೀ ಆತ ಬಿ.ಜೆ.ಪಿಯ ಹಳೆಯ ಕಾರ್ಯಕರ್ತರಾದರೂ ಆತನನ್ನು ಅವರು ಮುಖ್ಯಮಂತ್ರಿ ಮಾಡಲೇ ಇಲ್ಲ !
ಅಭಿವೃದ್ಧಿ ಪರ ಕೆಲಸ ಮಾಡ್ರಿ ಜಾತಿ ಮತ ಧರ್ಮ ಕೇಸರಿ ಹಸಿರು ಕಪ್ಪು ನೀಲಿ ಅಂತಾ ರಾಜಕೀಯ ಮಾಡಿ ದೇಶದ ಸ್ವಾಸ್ತ್ಯ ಹಾಳು ಮಾಡಬೇಡಿ
ಇದು ನಿಮ್ಮ ತಪ್ಪಲ್ಲಜಾತಿ ಧರ್ಮದ ಅಮಲಿನಲ್ಲಿ ನಿಮ್ಮಂತ ವರಿಗೆ vote ಹಾಕ್ತಾರಲ್ಲ ಅವ್ರೆಲ್ಲಾ ಬದಲಾಗಬೇಕು
ಈಶ್ವರಪ್ಪ ಅಂತಹ ಅವಿವೇಕಿ ಮತ್ತು ವಿಕೃತ ಮನಸ್ಸಿನ ರಾಜಕಾರಣಿಗೆ ನಮ್ಮ ಜನ ವೋಟು ಹಾಕಿ ಗೆಲ್ಲಿಸಿರುವುದೇ ದೊಡ್ಡ ದುರಂತ!
ಈಶ್ವರಪ್ಪ ಅವರ ಹೇಳಿಕೆ ದೇಶ ದ್ರೋಹಿ ಹೇಳಿಕೆಯಾಗಿದ್ದು, ರಾಷ್ಟ್ರ ಭಕ್ತರು ಎಂದು ಹೇಳಿಕೊಳ್ಳುವ ಕೇಸರಿಯಾ ರಾಷ್ಟ್ರೀಯ ಸುಲಭ್ ಸೌಚಾಲಯದ ಸ್ವಯಂ ಘೋಷಿತ ಮುಠ್ಠಾಳರು ಮೌನವಾಗಿರುವುದು ಏಕೆ?
ಹಣ ಮತ್ತು ಅಧಿಕಾರದ ಅಹಂ ಹೊದ್ದುಕೊಂಡಿರುವ ಈಶ್ವರಪ್ಪ ಅವರೇ ಕಾಲಯ ತಸ್ಮೈಯೇ ನಮಃ