ಪ್ರೇಮಿಗಳ ದಿನಗಳ ನೆಪದಲ್ಲಿ ಖಾಸಗೀ ವಿವರಗಳನ್ನು ಕದಿಯುತ್ತಿರುವ ಬೆಳವಣಿಗೆ ಬೆಳಕಿಗೆ ಬಂದಿದೆ. ಈ ಕುರಿತು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದ್ದು, ವಾಟ್ಸ್‌ಆಪ್‌ನಲ್ಲಿ ಬರುತ್ತಿರುವ ಮೋಸದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಎಚ್ಚರಿಕೆ ನೀಡಿದೆ.
ಮೋಸದ ಜಾಲವನ್ನು ಹೊಂದಿರುವ ಲಿಂಕ್ ವಾಟ್ಸ್‌ಆಪ್‌ನಲ್ಲಿ ಹರಿದಾಡಿದೆ. ‘ಅಮೆಜಾನ್ ವ್ಯಾಲೆಂಟೈನ್ಸ್ ಡೇ’ ಭಾಗವಾಗಿ ಉಚಿತ ಉಡುಗೊರೆಯನ್ನು ಗೆಲ್ಲುವ ಅವಕಾಶ ಎಂದು ನಕಲಿ ಲಿಂಕ್ ಹರಡಲಾಗಿದೆ.
ಈ ಲಿಂಕ್‌ಗಳನ್ನು ನೀವು ಪ್ರವೇಶಿಸಿದರೆ, ಇಲ್ಲಿನ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಮೂರನೇ ವ್ಯಕ್ತಿ ಕದಿಯಬಹುದು ಅಥವಾ ಮಾಲ್‌ವೇರ್ (ವೈರಸ್ ಸಾಫ್ಟ್‌ವೇರ್) ನಿಮ್ಮ ಮೊಬೈಲ್ ಪ್ರವೇಶಿಸಬಹುದು ಎಂದು CyberPeace Foundation ಮತ್ತು Autobot Infosec ಸಂಸ್ಥೆಗಳು ಎಚ್ಚರಿಸಿವೆ.
“ಒಬ್ಬ ಬಳಕೆದಾರನು ಈ ಬಲೆಗೆ ಸಿಲುಕಿದರೆ, ಅದು ಮೈಕ್ರೊಫೋನ್, ಕ್ಯಾಮೆರಾ, ಪಠ್ಯ ಸಂದೇಶಗಳು, ಸಂಪರ್ಕಗಳು, ಚಿತ್ರಗಳು, ವೀಡಿಯೊಗಳು, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಇತ್ಯಾದಿಗಳಿಗೆ ಅನ್ಯರು ಪ್ರವೇಶಿಸಲು ಸಾಧ್ಯವಾಗಬಹುದು. ಜೊತೆಗೆ ಹಣಕಾಸಿನ ನಷ್ಟಗಳು ಉಂಟಾಗಬಹುದು” ಎಂದು ವರದಿ ಹೇಳಿದೆ.

ಅಮೇಜಾನ್ ಸಂಸ್ಥೆಯ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ದಿ ಕ್ವಿಂಟ್ ತಿಳಿಸಿದೆ.
ಅಮೇಜಾನ್ ಸಂಸ್ಥೆಯಿಂದ ಪ್ರೇಮಿಗಳ ದಿನದ ಉಡುಗೊರೆ… 15,000 ಉಚಿತ ಉಡುಗೊರೆಗಳು… ಎಂದು ಆ ಲಿಂಕ್ ನಿಮ್ಮ ಗಮನ ಸೆಳೆಯುತ್ತದೆ.
ನೀವು ತಲುಪುವ ಪುಟವು ಅಮೆಜಾನ್ ಬ್ಯಾನರ್, ವಿವಿಧ ಎಲೆಕ್ಟ್ರಾನಿಕ್ಸ್‌ಗಳ ಛಾಯಾಚಿತ್ರವನ್ನು ಹೊಂದಿದೆ. ವಿಶೇಷ ಉಡುಗೊರೆಯನ್ನು ಗೆಲ್ಲಲು ಸಣ್ಣ ರಸಪ್ರಶ್ನೆಯನ್ನು ಪೂರ್ಣಗೊಳಿಸಲು ಕೇಳಲಾಗುತ್ತದೆ.
ಇದರ ಕೆಳಭಾಗದಲ್ಲಿ ನಕಲಿ ಕಾಮೆಂಟ್‌ಗಳ ವಿಭಾಗವಿದೆ. ಅಲ್ಲಿ ಬಳಕೆದಾರರು ಗಿಫ್ಟ್ ಕೊಡುತ್ತಿರುವುದು ನಿಜವೆಂದು ದೃಢೀಕರಿಸುತ್ತಾರೆ. ಜೊತೆಗೆ ಸಕಾರಾತ್ಮಕ ಅನುಭವಗಳನ್ನು ಅಲ್ಲಿ ಹಂಚಿಕೊಳ್ಳಲಾಗಿದೆ.
ಒಮ್ಮೆ ನೀವು ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಿದರೆ (ನಿಮಗೆ ಅಮೆಜಾನ್ ತಿಳಿದಿದೆಯೇ? ನಿಮ್ಮ ವಯಸ್ಸು ಎಷ್ಟು?) ಅಭಿನಂದನಾ ಸಂದೇಶ ನಿಮಗೆ ಕಾಣಿಸಿಕೊಳ್ಳುತ್ತದೆ. ಅದರ ನಂತರ ಬಳಕೆದಾರರು ಉಡುಗೊರೆಯನ್ನು ಆಯ್ಕೆ ಮಾಡಿ ಬಹುಮಾನಗಳನ್ನು ಗೆಲ್ಲಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ.
ನೀವು “Apple iPhone 11 128GB” ಅನ್ನು ಗೆದ್ದಿರುವಿರಿ ಎಂದು ಅದು ನಿಮಗೆ ತಿಳಿಸುತ್ತದೆ ಮತ್ತು WhatsApp ನಲ್ಲಿ ಈ ಅಭಿಯಾನವನ್ನು ಹಂಚಿಕೊಳ್ಳಲು ನಿಮಗೆ ಸೂಚಿಸಲಾಗುತ್ತದೆ.

ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಳಕೆದಾರರು ವಾಟ್ಸಾಪ್ ಬಟನ್ ಅನ್ನು ಹಲವು ಬಾರಿ ಕ್ಲಿಕ್ ಮಾಡಬೇಕಾಗುತ್ತದೆ ಎಂದು ವರದಿಯು ಗಮನಿಸಿದೆ. ನಿಮ್ಮ “ನೋಂದಣಿ”ಯನ್ನು ನೀವು ಪೂರ್ಣಗೊಳಿಸಿದ ನಂತರ, ಅದು ನಿಮ್ಮನ್ನು ಬಹು ಜಾಹೀರಾತು ವೆಬ್‌ಪುಟಗಳಿಗೆ ಕರೆದೊಯ್ಯುತ್ತದೆ.
ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಲು ಮತ್ತು ಬ್ಯಾಂಕಿಂಗ್ ಮಾಹಿತಿಯಂತಹ ಗೌಪ್ಯ ವಿವರಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ವರದಿ ಎಚ್ಚರಿಸಿದೆ. ಜನರು ಲಿಂಕ್‌ಗಳನ್ನು ಮೊದಲು ಪರಿಶೀಲಿಸದೆ ಹಂಚಿಕೊಳ್ಳಬೇಡಿ ಎಂದೂ ತಿಳಿಸಿದೆ.
ಇದನ್ನೂ ಓದಿರಿ: ಗೂಡಾಚರ್ಯೆಯ ಪೆಗಾಸಸ್ ಸ್ಪೈವೇರ್‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್ ವರದಿ


