Homeಕರ್ನಾಟಕಸಾವರ್ಕರ್‌ಗೆ ಮೆಚ್ಚುಗೆ ಸೂಚಿಸಿದ ಸಿಎಂಗೆ ರಾಜ್ಯದ ಜನತೆಯಿಂದ ಇತಿಹಾಸ ಪಾಠ!

ಸಾವರ್ಕರ್‌ಗೆ ಮೆಚ್ಚುಗೆ ಸೂಚಿಸಿದ ಸಿಎಂಗೆ ರಾಜ್ಯದ ಜನತೆಯಿಂದ ಇತಿಹಾಸ ಪಾಠ!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾವರ್ಕರ್‌ ಅವರನ್ನು ಶ್ಲಾಘಿಸಿ ಮಾಡಿರುವ ಪೋಸ್ಟ್‌ಗೆ ರಾಜ್ಯದ ಜನತೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರಿಗೆ ಇತಿಹಾಸದ ಪುಟಗಳನ್ನು ವಿವರಿಸಿದ್ದಾರೆ.

“ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ” ಎಂದು ಬೊಮ್ಮಾಯಿಯವರು ಪೋಸ್ಟ್ ಹಾಕಿದ್ದಾರೆ.

ಆರ್‌ಎಸ್‌ಎಸ್‌ನ ಪ್ರಮುಖ ಮುಖಗಳಲ್ಲಿ ಸಾವರ್ಕರ್‌ ಒಬ್ಬರು. ಹಿಂದುತ್ವವಾದಿಯಾಗಿದ್ದರು. ಸಾವರ್ಕರ್‌ ಜೈಲಿಗೆ ಸೇರಿದ ಬಳಿಕ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಸಾವರ್ಕರ್‌ ಅವರನ್ನು ಪ್ರಖರ ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲ ಸಂಘಪರಿವಾರ ಬಣ್ಣಿಸುವುದನ್ನು ಜನರು ಟೀಕಿಸುತ್ತಾ ಬಂದಿದ್ದಾರೆ. ಸಾವರ್ಕರ್‌ಗೆ ಅಂಟಿರುವ ಕ್ಷಮಾಪಣೆಯ ಇತಿಹಾಸವನ್ನು ಮುಚ್ಚಿಹಾಕುವ ಅಥವಾ ತಿರುಚುವ ಯತ್ನವನ್ನು ಸಂಘಪರಿವಾರವೂ ಮಾಡುತ್ತಾ ಬಂದಿದೆ.

ಇದನ್ನೂ ಓದಿರಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

“ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಕೆಲವು ತಿಂಗಳ ಹಿಂದೆ ಹೇಳಿದ್ದರು. “ರಾಜನಾಥ್‌ ಸಿಂಗ್ ಹೇಳಿಕೆ ಹಾಸ್ಯಾಸ್ಪದ, ಅಸಂಬದ್ಧ ಹಾಗೂ ವಿವೇಚನಾ ರಹಿತ” ಎಂದು ಗಾಂಧೀಜಿಯವರ ಮೊಮ್ಮಗ, ಜೀವನಚರಿತ್ರಕಾರ ರಾಜಮೋಹನ್‌ ಗಾಂಧಿ ಪ್ರತಿಕ್ರಿಯಿಸಿದ್ದರು.

“ಸಾವರ್ಕರ್‌ ಅವರು ಹಲವು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಹೇಳುವುದು ತಪ್ಪೆಂದು ರಾಜನಾಥ್ ಸಿಂಗ್‌ ಹೇಳಿರುವುದು ಸಂಪೂರ್ಣ ಸುಳ್ಳು. ಅಂಡಮಾನ್ ಜೈಲಿಗೆ ಹಾಕಿದ ಕೆಲವೇ ದಿನಗಳಲ್ಲಿ 1911ರಲ್ಲಿ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದರು. ಅಲ್ಲದೆ ಸಾವರ್ಕರ್‌ ಅವರು ಒಟ್ಟು ಏಳು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು” ಎಂದು ರಾಜಮೋಹನ್‌ ಗಾಂಧಿ ಅವರು ‘ದಿ ವೈರ್’ ಸಂದರ್ಶನದಲ್ಲಿ ವಿವರಿಸಿದ್ದರು.

ಕ್ಷಮಾಪಣೆ ಕೇಳಲು ಇದ್ದ ಅವಕಾಶದಲ್ಲಿ ಬಿಡುಗಾಗಿ ಸಾವರ್ಕರ್‌ ಕೋರಿಕೆ ಸಲ್ಲಿಸಿದ್ದರು. “1913ರ ಕ್ಷಮಾಪಣಾ ಅರ್ಜಿಯಲ್ಲಿ ಸರ್ಕಾರ ತನ್ನ ಬಹುಮುಖ ಲಾಭ ಮತ್ತು ಕರುಣೆಯಲ್ಲಿ ನನ್ನನ್ನು ಬಿಡುಗಡೆ  ಮಾಡಲಿ” ಎಂದು ಕೇಳಿಕೊಂಡಿದ್ದರು. ಇದು ಕ್ಷಮಾಪಣೆಯಲ್ಲದೆ ಮತ್ತೇನು” ಎಂದು ಪ್ರಶ್ನಿಸಿದ್ದರು.

ಸಾವರ್ಕರ್ ಅವರ ಅಪರಾಧವನ್ನು ರಾಜಕೀಯ ಎಂದು ತೋರಿಸಲು ಗಾಂಧಿ ಪತ್ರವು ಸಲಹೆ ನೀಡಿದೆ. ಕ್ಷಮಾಪಣೆಗಾಗಿ ಮನವಿ ಮಾಡಲು ಗಾಂಧೀಜಿಯವರು ಪತ್ರ ಬರೆದಿಲ್ಲ. ಮುಖ್ಯವಾಗಿ ಸಾವರ್ಕರ್ ಅವರಿಗೆ ಗಾಂಧೀಜಿಯವರು ಪತ್ರ ಬರೆಯುವ ಒಂಬತ್ತು ವರ್ಷಗಳ ಮೊದಲೇ ಸಾವರ್ಕರ್‌ ಕ್ಷಮಾಪಣಾ ಪತ್ರಗಳನ್ನು ಬ್ರಿಟಿಷರಿಗೆ ಬರೆದಿದ್ದರು ಎಂದು ತಿಳಿಸಿದ್ದರು.

ರಾಜಮೋಹನ್ ಗಾಂಧಿಯವರ ಅಭಿಪ್ರಾಯವನ್ನೇ ಹಲವು ಇತಿಹಾಸಕಾರರು ತಿಳಿಸಿದ್ದಾರೆ. ಆದರೆ ಸಾವರ್ಕರ್ ಅವರನ್ನು ವೈಭವೀಕರಿಸುವುದು ನಡೆಯುತ್ತಲೇ ಇದೆ. ಬೊಮ್ಮಾಯಿಯವರ ಪೋಸ್ಟ್‌ನಲ್ಲೂ ಇದೇ ವೈಭವೀಕರಣ ಇರುವುದನ್ನು ಗುರುತಿಸಿರುವ ರಾಜ್ಯದ ಜನತೆ, ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿರಿ: ಮೇಲ್ಸೇತುವೆಗೆ ಸಾವರ್ಕರ್‌ ಹೆಸರು : ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. – ಸಿದ್ದು

ಸಿಎಂ ಪೋಸ್ಟ್‌ಗೆ ಜನರ ಪ್ರತಿಕ್ರಿಯೆಗಳು (ಆಯ್ದ ಕಾಮೆಂಟ್‌ಗಳು ಇಲ್ಲಿವೆ)

ಬೊಮ್ಮಾಯಿಯವರೆˌ ಬ್ರಿಟೀಷರಿಗೆ ಕ್ಷಮಾಪಣೆ ಕೇಳಿ ಪಿಂಚಣೆ ಪಡೆದ ಈ ಚಿತ್ಪಾವನ ವ್ಯಕ್ತಿಗೆ ಶುಭಾಶಯ ಹೇಳುವ ಮೊದಲು ಒಂದು ಕ್ಷಣ ನಿಮ್ಮ ತಂದೆಯವರು ನಂಬಿದ ಸಿದ್ಧಾಂತ ಸ್ಮರಿಸಿಕೊಳ್ಳಿ. ಅಧಿಕಾರದಾಸೆಗೆ ನೀವೆಲ್ಲ ಸಂಘಿಗಳ ಮನೆ ಕಾಯುವ ಬದಲಿಗೆ ಸಂಘಿಗಳು ನಿಮ್ಮ ಮನೆ ಕಾಯುವಂತೆ ಬದುಕುವುದು ಯಾವಾಗ?

 – ಜೆ.ಎಸ್.ಪಾಟೀಲ್‌

****

“ಧರ್ಮಸ್ಥಳದಲ್ಲಿ ಇದೇ ಸಾವರ್ಕರ್ ಅನುಯಾಯಿ ದಲಿತ ಯುವಕನನ್ನು ಕೊಲೆ ಮಾಡಿದ್ದಾನೆ. ಆ ಕಡೆ ನಿಮ್ಮವರಾರೂ ಸುಳಿದಿಲ್ಲ”

– ಹೇಮಾ ವೆಂಕಟ್‌‌

***

ಇವರು ಗಾಂಧಿ ಹತ್ಯೆಯ ಆರೋಪಿ ಅಲ್ವಾ? ಬ್ರಿಟಿಷರಿಗೆ ನಿರಂತರ ಕ್ಷಮಾಪಣ ಪತ್ರ ನೀಡಿ ಸದಾ ಕಾಲ ನಿಮಗೆ ವಿದೇಯನಾಗಿರುವೆ ಎಂದು ಬರೆದುಕೊಟ್ಟು ಜೈಲಿನಿಂದ ಹೊರಬಂದು ಬ್ರಿಟಿಷರ ಪಿಂಚಣಿ (ಆ ಕಾಲದ 50 ರುಪಾಯಿ) ಪಡೆದು ಬದುಕಿದ ಈತ ವೀರ ಆಗುವುದು ಹೇಗೆ? ಭಾರತದ ಸ್ವಾತಂತ್ರ್ಯಕ್ಕೆ ಆತನ ಕೊಡುಗೆ ಏನು?!

– ಶ್ರೀನಿವಾಸ ಕಾರ್ಕಳ

***

ಬ್ರಿಟಿಷರೆದುರು ಹೋರಾಡಿ ಮಡಿದ ಟಿಪ್ಪುವನ್ನು ದ್ವೇಷಿಸುವ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸಂಗೊಳ್ಳಿ ರಾಯಣ್ಣ, ಆಜೀವ ಬಂಧಿಯಾದ ರಾಣಿ ಚೆನ್ನಮ್ಮರ ಪರಂಪರೆಯನ್ನು ನಾಶ ಮಾಡುವ, ಮಹಾತ್ಮ ಗಾಂಧಿಯವರನ್ನೇ ನಿಂದಿಸುವ, ಅವರ ಹತ್ಯೆಯನ್ನು ಸಮರ್ಥಿಸುವ, ನೆಹರೂ ಅವರಂಥವರನ್ನು ದಿನನಿತ್ಯ ನಿಂದಿಸುವ, ದೊರೆಸ್ವಾಮಿಯವರಂಥ ಸ್ವಾತಂತ್ರ್ಯಯೋಧರನ್ನು ಹಂಗಿಸುತ್ತಲೇ ಇದ್ದ, ಸ್ವಾತಂತ್ರ್ಯ ಚಳವಳಿಯಲ್ಲಾಗಲೀ, ದೇಶ ನಿರ್ಮಾಣದಲ್ಲಾಗಲೀ ಯಾವುದೇ ಕೊಡುಗೆ ನೀಡಿರದ ಪಕ್ಷದವರಿಂದ ಬೇರೇನು ನಿರೀಕ್ಷಿಸಬಹುದು?

 – ಡಾ.ಶ್ರೀನಿವಾಸ ಕಕ್ಕಿಲಾಯ

***

ಇದನ್ನೂ ಓದಿರಿ: ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ಐ ಆಮ್ ವೆರಿ ಸೋರಿ ಮಿಸ್ಟರ್ ಬೊಮ್ಮಾಯಿ ಸಾರ್. ಸೋರಿ ಡೇ ಅನ್ನು ಮರೆತಿದಕ್ಕೆ ಸೋರಿ ಸೋರಿ ಸೋರಿ. ಹ್ಯಾಪಿ ಸೋರಿ ಡೇ ಸಾರ್.

– ರಹೀಮ್ ಭಾಷಾ

***

ಬ್ರಿಟಿಷರಿಗೆ ಕ್ಷಮಾಪಣೆ ಪತ್ ರಬರೆದವರು ಸ್ವಾತಂತ್ರ್ಯ ಹೋರಾಟಗಾರ ಇವರು ಯಾವಾಗ ಹೋರಾಟ ಮಾಡಿದ್ದಾರೆ ಮಾನ್ಯ ಮುಖ್ಯಮಂತ್ರಿ ಗಳೇ? ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಒಮ್ಮೆ ಓದಿನೋಡಿ, ಎಲ್ಲಿಯಾದ್ರು ದಾಮೋದರ ಸಾವರ್ಕರ್ ಹೆಸರಿದೆಯಾ ನೋಡಿ…

– ಅಬ್ದುಲ್‌ ಹಮೀದ್‌

***

ಮುಖ್ಯಮಂತ್ರಿಗಳೇ, ನೀವು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದುಕ್ಕೊಂಡು ರಾಷ್ಟ್ರಪಿತನ ಸಾವಿಗೆ ಕಾರಣವಾದ ವ್ಯಕ್ತಿಗೆ ಪುಣ್ಯ ಸ್ಮರಣೆ ಶುಭಾಶಯ ಹೇಳ್ತಾ ಇದೀರಲ್ಲ, ಬ್ರಿಟೀಷರ ಕ್ಷಮೆ ಕೇಳಿದ ಹೇಡಿ, ಬ್ರಿಟೀಷರ ಪಿಂಚಣಿ ತೆಗೆದುಕೊಂಡು ಬದುಕುತ್ತಿದ್ದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಅಂದ್ರೆ ಎಲ್ಲಿಂದ ನಗಬೇಕ್ರೀ? ನಮ್ ಕರ್ಮ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದು.

 -ಕುಶಾಲ್ ಬಿದರೆ

****

“ನೀವು ವೈಯಕ್ತಿಕವಾಗಿ ಸಮರ್ಥಿಸಿಕೊಳ್ಳಿ ಸರ್. ಆದರೆ ರಾಜ್ಯ ಮುಖ್ಯಮಂತ್ರಿಯಾಗಿ ಇವರನ್ನು ಸಮರ್ಥಿಸಿಕೊಳ್ಳಬೇಡಿ. ಹೆಮ್ಮೆಯ ಭಾರತ ಮಾತೆಯ ಪುತ್ರರು- ನಮ್ಮ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನವ್ವ. ಇವರು ಎಂದು ಬ್ರಿಟಿಶರ ಬಳಿ ಕ್ಷಮೆ ಕೇಳದೆ ವೀರ ವೇಶದಿಂದ ಹೋರಾಡಿ ದೇಶಕ್ಕೆ ಪ್ರಾಣ ಬಿಟ್ಟರು. ನಿಮ್ಮ ಸಾವರ್ಕರ್‌ ಥರ ಬ್ರಿಟಿಷರ ಬಳಿ ಕ್ಷಮೆ ಕೇಳಿ ಪಿಂಚಣಿ ಪಡೆಯಲಿಲ್ಲ.

 – ಮಧುಸೂದನ್ ಗೌಡ

***

ದಯವಿಟ್ಟು ಇಂಥವನ್ನು ಯೋಧರಿಗೆ ಹೊಳಿಸಬೇಡಿ ಸರ್. ನಮ್ಮ ಯೋಧರಿಗೆ ಮಾಡುವ ಅವಮಾನ ಅದಾಗುತ್ತೆ. ನಮ್ಮ ಯೋಧರು ವೀರರು. ಎಂದೂ ತಲೆ ಬಾಗಲಾರರು.

 – ವಿಕಾಸ್ ಗೌಡ

***

ಹೀಗೆ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಈ ಸುದ್ದಿ ಬರೆಯುವ ವೇಳೆಗೆ ಸಿಎಂಗೆ ಪೋಸ್ಟ್‌ಗೆ ಒಂದೂವರೆ ಸಾವಿರದಷ್ಟು ಜನರು ‘ಹಹಹ’ (😆) ರಿಯಾಕ್ಷನ್‌ ಒತ್ತಿದ್ದಾರೆ. ನಗುವ ಇಮೋಜಿಯೇ ಹೆಚ್ಚಿನ ಸಂಖ್ಯೆಯಲ್ಲಿದೆ.


ಇದನ್ನೂ ಓದಿರಿ: ಸಾವರ್ಕರ್‌‌‌ಗೆ ಗೋಮಾಂಸ ತಿನ್ನುವುದರ ಬಗ್ಗೆ ಯಾವುದೆ ತಕರಾರು ಇರಲಿಲ್ಲ: ದಿಗ್ವಿಜಯ ಸಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬರೇ ಸತ್ತು ಈ ಭೂಮಿ ಮೇಲೆ ಇಲ್ಲದವರ ಬಗ್ಗೆ ( ನೆಹರು, ಟಿಪ್ಪು, ಮೊಘಲರು, ಗಾಂಧೀ, ಔರಂಗಜೇಬ್, ಸಾವರ್ಕರ್, ಮುಂತಾದವರು.) ಬದುಕಿರುವ ಮನುಷ್ಯರ ಸಮಸ್ಯೆಗಳ ಬಗ್ಗೆ ಅಪ್ಪಿ ತಪ್ಪಿಯೂ ಮಾತಾಡಲ್ಲ . ಯಾವ ಸೀಮೆ ನಾಯಕರೋ ಇವರು.

  2. ಯಜಮಾನನ ಅನ್ನದ ಋಣ ಇರುವ ಶ್ವಾನ ಸ್ವಾಮಿ ನಿಷ್ಠೆ ಪ್ರದರ್ಶಿಸಿದೆ,ತಪ್ಪೇನು!?😁

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...