ಭಾಷೆಯ ಅಡೆತಡೆಯ ನಡುವೆಯೂ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಅನೇಕ ಸಣ್ಣ ದೇಶಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿರುವ ಪ್ರಧಾನಿ ಮೋದಿ, ಖಾಸಗಿ ವಲಯವು ಈ ಕ್ಷೇತ್ರದಲ್ಲಿ ದೊಡ್ಡ ಅಸ್ತಿತ್ವವನ್ನು ಸಾಧಿಸುವಂತೆ ಶನಿವಾರ ಒತ್ತಾಯಿಸಿದ್ದಾರೆ.
ಆರೋಗ್ಯ ಕ್ಷೇತ್ರದ ಕುರಿತು ಒಕ್ಕೂಟ ಸರ್ಕಾರದ ಬಜೆಟ್ ಘೋಷಣೆಗಳ ಕುರಿತು ವೆಬ್‌ನಾರ್‌ನಲ್ಲಿ ಮಾತನಾಡಿದ ಮೋದಿ, “ವೈದ್ಯಕೀಯ ಶಿಕ್ಷಣಕ್ಕೆ ಭೂಮಿ ಹಂಚಿಕೆಗಾಗಿ ರಾಜ್ಯ ಸರ್ಕಾರಗಳು ‘ಉತ್ತಮ ನೀತಿಗಳನ್ನು’ ರೂಪಿಸಬೇಕು, ಇದರಿಂದ ಭಾರತವು ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ಅರೆವೈದ್ಯರನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ” ಎಂದು ಸಲಹೆ ನೀಡಿದ್ದಾರೆ.
ಭಾರತದ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವವರು ರಷ್ಯಾ ನಡೆಸುತ್ತಿರುವ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಪ್ರಧಾನಿಯ ಈ ಹೇಳಿಕೆಗಳು ಬಹಳ ಪ್ರಾಮುಖ್ಯತೆ ಪಡೆದಿವೆ. ಆದರೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎರಡು ದೇಶಗಳ ನಡುವೆ ನಡೆಯುತ್ತಿವ ಬಿಕ್ಕಟ್ಟಿನ ಬಗ್ಗೆ ನೇರವಾಗಿ ಪ್ರಸ್ತಾಪಿಸಲಿಲ್ಲ.
ಭಾರತೀಯ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ, ಇದರಿಂದಾಗಿ ನೂರಾರು ಶತಕೋಟಿ ರೂಪಾಯಿಗಳು ದೇಶದಿಂದ ಹೊರದೇಶಕ್ಕೆ ಹರಿಯುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.
“ಇಂದು ನಮ್ಮ ಮಕ್ಕಳು ಅಧ್ಯಯನಕ್ಕಾಗಿ ವಿಶೇಷವಾಗಿ ವೈದ್ಯಕೀಯ ಶಿಕ್ಷಣಕ್ಕಾಗಿ ಸಣ್ಣ ದೇಶಗಳಿಗೆ ಹೋಗುತ್ತಿದ್ದಾರೆ. ಅಲ್ಲಿ ಭಾಷೆಯ ಸಮಸ್ಯೆ ಇದ್ದರೂ, ಅಲ್ಲಿಗೆ ಹೋಗುತ್ತಿದ್ದಾರೆ… ನಮ್ಮ ದೇಶದ ಖಾಸಗಿ ಕ್ಷೇತ್ರವು ಈ ಕ್ಷೇತ್ರವನ್ನು ದೊಡ್ಡ ರೀತಿಯಲ್ಲಿ ಪ್ರವೇಶಿಸಲು ಸಾಧ್ಯವಿಲ್ಲವೇ? ನಮ್ಮ ರಾಜ್ಯ ಸರ್ಕಾರಗಳು ಈ ಬಗ್ಗೆ ಭೂ ಮಂಜೂರಾತಿಗೆ ಒಳ್ಳೆಯ ನೀತಿಯನ್ನು ರೂಪಿಸುವುದಿಲ್ಲವೇ?” ಎಂದು ಅವರು ಕೇಳಿದ್ದಾರೆ.
ಕಳೆದ ಹಲವು ದಶಕಗಳಲ್ಲಿ ಭಾರತೀಯ ವೈದ್ಯರು ತಮ್ಮ ಕೆಲಸದಿಂದ ವಿಶ್ವದಾದ್ಯಂತ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜನರಿಗೆ ಗುಣಮಟ್ಟದ ಆರೋಗ್ಯ ಮತ್ತು ಕ್ಷೇಮ ಸೇವೆಗಳನ್ನು ಒದಗಿಸಲು ತನ್ನ ಸರ್ಕಾರ ಪ್ರಯತ್ನ ಮಾಡಿದೆ ಎಂದು ಮೋದಿ ಹೇಲಿದ್ದಾರೆ.
ಸರ್ಕಾರವು ‘ಒಂದು ಭಾರತ ಒಂದು ಆರೋಗ್ಯ’ ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದೆ, ಇದರಿಂದ ದೂರದ ಸ್ಥಳಗಳಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಗುಣಮಟ್ಟದ ಆರೋಗ್ಯ ಸೌಲಭ್ಯವು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅರಕಲಗೂಡು: ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಸವರ್ಣಿಯರಿಂದ ಹಲ್ಲೆ



ಮಾನ್ಯ ಪ್ರಧಾನೀಯವರೇ ಭಾರತದಲ್ಲಿ ಒಂದು ವರ್ಷಕ್ಕೆ ಕಟ್ಟಲಾಗುವ ಫೀಸಿನಲ್ಲಿ ಸಣ್ಣಪುಟ್ಟ ರಾಷ್ಟ್ರಗಳಿಗೆ ಹೋದರೆ ವೈದ್ಯಕೀಯ ಶಿಕ್ಷಣವೇ ಮುಗಿಸಿ ಬರಬಹುದು
ಈವಯ್ಯನಿಗೆ ವೈದ್ಯಕೀಯ ವಿಧ್ಯಾರ್ಥಿಗಳು ಸಣ್ಣ ಸಣ್ಣ ದೇಶಕ್ಕೆ ಹೋಗ್ತಾರೆ ಅಂತಾ ಇನ್ನೂ ತಿಳಿದಿಲ್ಲಾ… ಇಲ್ಲಿ ಸರಕಾರಿ ಸೀಟುಗಳಿರೋದು ಬರೀ ೨೦೫೫. ಮತ್ತು ಖಾಸಗೀ ಕಾಲೆಜುಗಳದು ೩೦೦೦ ಸೀಟುಗಳು.. ಖಾಸಗೀ ಕಾಲೆಝುಗಳಲ್ಲಿ ವರುಷಕ್ಕೆ ಫ಼ೀಸು ೧೫೦೦೦೦೦. ಇದನ್ನ ತುಂಬಲು ಆಗದೆ ಸಣ್ಣ ಸಣ್ಣ ದೇಶಗಳಿಗೆ ಕಲಿಲಿಕ್ಕೆ ಹೋಗ್ತಾರೆ ಈ ಚಿಕ್ಕ ವಿಷಯ ಈವಯ್ಯನಿಗೆ ಗೊತ್ತಾಗದೇ ಮತ್ತೆ ಖಾಸಗಿ ಕ್ಷೇತ್ರಗಳಿಗೆ ಕಾಲೇಕಾಲೇ ಉ ತೆರೆಯಲು ಹೇಳ್ತಾ ಇದ್ದರೆ ಯಾಕೊ ಇವರಿಗೆ ಖಾಸಗಿ ಕ್ಷೇತ್ರಗಳ ಮೇಲೆ ಬಾಳ ಪ್ರೀತಿ ಇದ್ದಂಗೈತೆ.
ಯಾಕೆ ಇವರೇ ಅಂದ್ರೆ ಸರಕಾರದವರೇ ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನ ಪ್ರಾರಂಭಿಸಬಾರದು..?
ಮೋದಿ ಜಿ ಯವರ ಅಜಂಡವೇ ಭಾರತದಲ್ಲಿ ಎಲ್ಲವನ್ನು ಖಾಸಗೀಕರಣ ಮಾಡುವುದು ಅಲ್ಲವೇ?