ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಭಾರಿ ಡ್ರಗ್ಸ್ ಪಿತೂರಿ ಅಥವಾ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಅವರನ್ನು ಬಂಧಿಸಿದ ಕಾರ್ಡೆಲಿಯಾ ವಿಹಾರ ನೌಕೆಯ ಮೇಲಿನ ದಾಳಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ವಿಶೇಷ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ದ ತನಿಖಾ ತಂಡವು (SIT) ಪತ್ತೆಹಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
NCB ಯ ಮುಂಬೈ ಘಟಕದ ಆರೋಪಗಳಿಗೆ ವಿರುದ್ಧವಾಗಿ, SIT ಯ ಕೆಲವು ಪ್ರಮುಖ ಸಂಶೋಧನೆಗಳನ್ನು ಅಧಿಕಾರಿಗಳು ಹಿಂದೂಸ್ಥಾನ್ ಟೈಮ್ಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ, “ಆರ್ಯನ್ ಖಾನ್ ಅವರಲ್ಲಿ ಡ್ರಗ್ಸ್ ಇರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‌ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಚಾಟ್‌ಗಳು ಆರ್ಯನ್ ಅವರು ಯಾವುದೇ ಅಂತರಾಷ್ಟ್ರೀಯ ಸಿಂಡಿಕೇಟ್‌ನ ಭಾಗವಾಗಿದ್ದರು ಎಂದು ಸೂಚಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ ಪ್ರಕರಣ: ಆರ್ಯನ್ ಖಾನ್ ರಕ್ಷಿಸಿದ ಒಂದು ಸೆಲ್ಫಿಯ ಕಥೆ!
“ಎನ್‌ಸಿಬಿ ನಿಯಮದಂತೆ ದಾಳಿಯ ಸಮಯದಲ್ಲಿ ಮಾಡಬೇಕಿದ್ದ ಕಡ್ಡಾಯ ವೀಡಿಯೊ ರೆಕಾರ್ಡ್ ಅನ್ನು ಮಾಡಲಾಗಿಲ್ಲ. ಪ್ರಕರಣದಲ್ಲಿ ಬಂಧಿತರಾದ ಹಲವು ಆರೋಪಿಗಳಿಂದ ಡ್ರಗ್ಸ್ ಒಂದನ್ನೆ ವಶಪಡಿಸಿಕೊಂಡಿದೆ ಎಂದು ತೋರಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಖಚಿತವಾಗಿ ಹೇಳುವುದಾದರೆ, ಎಸ್‌ಐಟಿ ತನಿಖೆ ಪೂರ್ಣಗೊಂಡಿಲ್ಲ. ಅದು ತನ್ನ ಅಂತಿಮ ವರದಿಯನ್ನು ಎನ್‌ಸಿಬಿ ಡೈರೆಕ್ಟರ್ ಜನರಲ್ ಎಸ್‌ಎನ್ ಪ್ರಧಾನ್ ಅವರಿಗೆ ಸಲ್ಲಿಸಲು ಒಂದೆರಡು ತಿಂಗಳಾಗಬಹುದು. ನಿರ್ದಿಷ್ಟವಾಗಿ ಆರ್ಯನ್ ಖಾನ್ ಅವರು ಯಾವುದೇ ಮಾದಕವಸ್ತುಗಳನ್ನು ಹೊಂದಿರದಿದ್ದರೂ, ಸೇವನೆ ಮಾಡಿದ್ದಕ್ಕೆ ದೋಷಾರೋಪಣೆ ಮಾಡಬಹುದೆ ಎಂದು ಅಂತಿಮ ನಿರ್ಧಾರದ ಮೊದಲು ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುವುದು” ಎಂಬ ಅಂಶದ ಬಗ್ಗೆ, ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಸ್‌ಐಟಿ ತನಿಖೆಯು ದಾಳಿಯ ಬಗ್ಗೆ ಮತ್ತು ಎನ್‌ಸಿಬಿಯ ಮಾಜಿ ಮುಂಬೈ ವಲಯ ಘಟಕದ ನಿರ್ದೇಶಕ ಸಮೀರ್ ವಾಂಖೆಡೆ ಅವರ ನಡವಳಿಕೆಯ ಮೇಲೆ ಹೆಚ್ಚಿನ ಪ್ರಶ್ನೆಗಳನ್ನು ಎತ್ತುವಂತಿದೆ ಎಂದು ಹಿಂದೂಸ್ಥಾನ್ ವರದಿ ಹೇಳಿದೆ.
ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ, ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ವಾಂಖೆಡೆ ಮತ್ತು ಅಧಿಕಾರಿಗಳು ದಾಳಿ ಮಾಡಿದ್ದರು. ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು ₹ 1.33 ಲಕ್ಷ ನಗದನ್ನು ಈ ವೇಳೆ ಎನ್‌ಸಿಬಿ ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಎನ್‌ಸಿಬಿ ವಶಕ್ಕೆ


