ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಮಹಿಳಾ ತಂಡ ಜಯಭೇರಿ ಭಾರಿಸಿದೆ. 107 ರನ್‌ಗಳ ಅಂತರದಲ್ಲಿ ಭಾರತ ಜಯ ಸಾಧಿಸಿದೆ.
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 6 ವಿಕೆಟ್‌ಗೆ 114 ರನ್ ಗಳಿಸಿ ತತ್ತರಿಸಿತ್ತು. ನಂತರ ಪೂಜಾ ವಸ್ತ್ರಾಕರ್ (67) ಮತ್ತು ಸ್ನೇಹ್ ರಾಣಾ (ಔಟಾಗದೆ 53) ಏಳನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟವನ್ನು ಆಡಿ ಚೇತರಿಕೆ ನೀಡಿದರು. 7 ವಿಕೆಟ್ ನಷ್ಟಕ್ಕೆ ಭಾರತ 244 ರನ್‌ಗಳನ್ನು ಗಳಿಸಿತು. ವಸ್ತ್ರಾಕರ್ ಮತ್ತು ರಾಣಾ ಅವರ ಜೊತೆಯಾಟದ ತನಕವೂ ಪಾಕಿಸ್ತಾನ ಅದ್ಭುತವಾಗಿ ಹಿಡಿತ ಸಾಧಿಸಿತ್ತು.
ನಂತರ ಬ್ಯಾಟ್ ಮಾಡಿದ ಪಾಕಿಸ್ತಾನ, ಭಾರತದ ಬೌಲಿಂಗ್‌ಗೆ ತತ್ತರಿಸಿತು. ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ ಅವರು ಅದ್ಭುತವಾಗಿ ಬೌಲಿಂಗ್ ಮಾಡಿ, ಹತ್ತು ಓವರ್‌ಗಳಲ್ಲಿ 31 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 244/7 ಸ್ಕೋರ್ ಮಾಡಿದ ನಂತರ ಪಾಕಿಸ್ತಾನ ಕೇವಲ 137 ರನ್‌ಗಳಿಗೆ ಆಲೌಟಾಯಿತು. ಗಾಯಕ್ವಾಟ್ ನಾಲ್ಕು ವಿಕೆಟ್ ಪಡೆದರೆ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರು.
ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ 28 ರನ್ ಗಳಿಸಲಷ್ಟೇ ಶಕ್ತವಾಯಿತು. 11ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಜವೇರಿಯಾ ಖಾನ್ ಅವರನ್ನು ಔಟ್ ಮಾಡುವ ಮೂಲಕ ಗಾಯಕ್ವಾಡ್ ಮೊದಲ ವಿಕೆಟ್ ಪಡೆದರು. ಪಾಕಿಸ್ತಾನವು ಸಮರ್ಥವಾಗಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. 18 ಮತ್ತು 24ನೇ ಓವರ್‌ಗಳ ನಡುವೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. 70 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಎದುರಿಸಿತು. ಪಾಕಿಸ್ತಾನ ಅಂತಿಮವಾಗಿ 114 ರನ್‌ಗಳಿಗೆ ಆಲ್‌ಔಟ್ ಆಯಿತು.
ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಈಗ ಪಾಕಿಸ್ತಾನದ ವಿರುದ್ಧ 11 ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂದಾನ, ಸ್ನೇಹ ರಾಣಾ ಮತ್ತು ಪೂಜಾ ವಸ್ತ್ರಕರ್ ಅರ್ಧಶತಕಗಳನ್ನು ಸಿಡಿಸಿದರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಡಕ್ ಔಟಾದರು. ನಂತರ ಭಾರತ ಒತ್ತಡಕ್ಕೆ ಸಿಲುಕಿತ್ತು.
ಮಂದಾನ (75 ಎಸೆತಗಳಲ್ಲಿ 52) ಮತ್ತು ದೀಪ್ತಿ ಶರ್ಮಾ (40) ನಡುವಿನ 92 ರನ್‌ಗಳ ಜೊತೆಯಾಟದಿಂದಾಗಿ ಚೇತರಿಕೆ ಕಂಡಿತು. ಮಂದಾನ ಇನಿಂಗ್ಸ್‌ನ 22ನೇ ಓವರ್‌ನಲ್ಲಿ ಅರ್ಧಶತಕ ಗಳಿಸಿದರು. ಆದರೆ ಅದೇ ಓವರ್‌ನಲ್ಲಿ ನಶ್ರಾ ಸಂಧು ಅವರು ದೀಪ್ತಿ (40) ಅವರನ್ನು ಬೌಲ್ಡ್ ಮಾಡಿ ಜೊತೆಯಾಟವನ್ನು ಮುರಿದರು.
ಇದಾದ ಬಳಿಕ ಅನಮ್ ಅಮೀನ್, ಮಂದಾನ (52) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಿದಾ ದಾರ್ ಅವರು ಹರ್ಮನ್‌ಪ್ರೀತ್ ಕೌರ್ (5) ಮತ್ತು ರಿಚಾ ಘೋಷ್ (1) ಅವರನ್ನು ಔಟ್ ಮಾಡಿದರು. ಭಾರತ ಒತ್ತಡಕ್ಕೆ ಸಿಲುಕಿತು.
ರಾಣಾ ಮತ್ತು ವಸ್ತ್ರಾಕರ್ ಕ್ರೀಸ್‌ನಲ್ಲಿದ್ದ ಭಾರತವು ನಂತರ 114/6 ಅನ್ನು ಕಳೆದುಕೊಂಡಿತು. ಇಬ್ಬರೂ ಬಿರುಸಿನ ಸ್ಕೋರ್ ಮಾಡಿದ್ದರಿಂದ ಇಬ್ಬರೂ ಬ್ಯಾಟ್ಸ್ ಮನ್ ಗಳು ಆಟದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದರು. ವಸ್ತ್ರಾಕರ್ ಮತ್ತು ರಾಣಾ ಏಳನೇ ವಿಕೆಟ್‌ಗೆ 122 ರನ್ ಜೊತೆಯಾಟ ನಡೆಸಿದರು. ಅಂತಿಮ ಐದು ಓವರ್‌ಗಳಲ್ಲಿ ಭಾರತ ಹೆಚ್ಚು ರನ್ ಗಳಿಸಿ 240 ರನ್‌ಗಳ ಗಡಿ ದಾಟಿಸಿತು.
ಭಾರತದ ಮುಂದಿನ ಪಂದ್ಯ (ಗುರುವಾರ) ಹ್ಯಾಮಿಲ್ಟನ್‌ನಲ್ಲಿ ನಡೆಯಲಿದ್ದು, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಸೆಣೆಸಾಡಲಿದೆ.
ಇದನ್ನೂ ಓದಿರಿ: ಶೇನ್ ವಾರ್ನ್ ವಿದಾಯಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಪ್ರೇಮಿಗಳು


