ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರ ಕಚೇರಿಯಿಂದ ನ್ಯಾಯಮೂರ್ತಿ ಪುಷ್ಪಾ ವೀರೇಂದ್ರ ಗಣೆಡಿವಾಲಾ ಅವರ ಅಧಿಕೃತ ರಾಜೀನಾಮೆಯನ್ನು ಖಚಿತಪಡಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯನ್ನು ಸಂವಿಧಾನದ 217 ನೇ ವಿಧಿಯ ಷರತ್ತು (1) ರ ನಿಬಂಧನೆ (ಎ) ಯ ಅನುಸಾರವಾಗಿ ಹೊರಡಿಸಲಾಗಿದ್ದು, ಅಧಿಸೂಚನೆಯ ಪ್ರಕಾರ, ರಾಜೀನಾಮೆಯು ಫೆಬ್ರವರಿ 11, 2022 ರಿಂದ ಜಾರಿಗೆ ಬರುತ್ತದೆ.
ಬಾಂಬೆ ಹೈಕೋರ್ಟ್‌ನ (ನಾಗ್ಪುರ ಪೀಠ) ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಪುಷ್ಪಾ ಅವರು ಲೈಂಗಿಕ ಪ್ರಕರಣದ ಕುರಿತು ವಿವಾದಾತ್ಮಕ ತೀರ್ಪು ನೀಡಿದ್ದರು. ಪುಷ್ಪಾ ಅವರ ಸೇವಾ ಅವಧಿಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡದ ಕಾರಣ, ಅವರ ಅಧಿಕಾರಾವಧಿಯು 12 ಫೆಬ್ರವರಿ 2022 ರಂದು ಮುಕ್ತಾಯಗೊಳ್ಳಲಿತ್ತು.
ಇದನ್ನೂ ಓದಿ: ಅಪ್ರಾಪ್ತರ ಎದುರು ಪ್ಯಾಂಟ್ ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್
ನ್ಯಾಯಮೂರ್ತಿ ಗಣೇಡಿವಾಲಾ ಅವರು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಎರಡು ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ಅಪರಾಧವನ್ನು ರೂಪಿಸಲು ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ ಆಗಿರಬೇಕು ಎಂಬ ಪ್ರತಿಪಾದನೆಯನ್ನು ಮಾಡಿದ್ದರು. ಈ ತೀರ್ಪು ವ್ಯಾಪಕ ಟೀಕೆಗೆ ಗುರಿಯಾಯಿತ್ತು. ಈ ವಿವಾದದ ನಂತರ, ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ಮಾಡಲು ಜನವರಿ 20 ರಂದು ಮಾಡಿದ್ದ ಶಿಫಾರಸನ್ನು ರದ್ದುಗೊಳಿಸಿತ್ತು.
ಇದಾಗಿ ಒಂದು ತಿಂಗಳ ನಂತರ, ಫೆಬ್ರವರಿ 2021 ರಲ್ಲಿ, ಕೊಲಿಜಿಯಂ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡಲು ಪ್ರಸ್ತಾಪಿಸುವ ಬದಲು ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲು ಶಿಫಾರಸು ಮಾಡಿತ್ತು.
ಕಳೆದ ವರ್ಷ ಭಾರತದ ಅಟಾರ್ನಿ ಜನರಲ್ ಸಲ್ಲಿಸಿದ ಮೇಲ್ಮನವಿಯನ್ನು ಪರಿಗಣಿಸಿ ಅವರ ವಿವಾದಾತ್ಮಕ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು.
ಇದನ್ನೂ ಓದಿ: ‘ಚರ್ಮ ಸ್ಪರ್ಶವಾದರೆ ಮಾತ್ರ ಲೈಂಗಿಕ ದೌರ್ಜನ್ಯ’ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶೆಗೆ ಮತ್ತೊಮ್ಮೆ ಹಿನ್ನಡೆ!



she is be
she is not judge
Dove girls