Homeಅಂತರಾಷ್ಟ್ರೀಯಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

- Advertisement -
- Advertisement -

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ ಫೈಲ್‌ಗಳನ್ನು ಶುಕ್ರವಾರ (ಜ.30) ಬಿಡುಗಡೆ ಮಾಡಿದೆ.

ವರದಿಗಳ ಪ್ರಕಾರ, 3 ಮಿಲಿಯನ್ (30 ಲಕ್ಷ) ಪುಟಗಳಿಗೂ ಹೆಚ್ಚು ದಾಖಲೆಗಳು, 2,000 ವಿಡಿಯೋಗಳು ಮತ್ತು 180,000 ಫೋಟೋಗಳು ಅಂತಿಮ ಎಪ್‌ಸ್ಟೀನ್‌ ಫೈಲ್ಸ್ ಬಿಡುಗಡೆಯಲ್ಲಿ ಒಳಗೊಂಡಿವೆ. ಅಂತಿಮ ಫೈಲ್‌ಗಳಲ್ಲಿ ಎಲಾನ್‌ ಮಸ್ಕ್, ಬಿಲ್ ಗೇಟ್ಸ್ ಮತ್ತು ಬಿಲ್ ಕ್ಲಿಂಟನ್ ಅವರ ಇ-ಮೇಲ್‌ಗಳು ಮತ್ತು ಉಲ್ಲೇಖಗಳು ಹಾಗೂ ಡೊನಾಲ್ಡ್ ಟ್ರಂಪ್ ಅವರ ನೂರಾರು ಉಲ್ಲೇಖಗಳು ಇವೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಫ್ರಿ ಎಪ್‌ಸ್ಟೀನ್‌ ಒಬ್ಬನೇ ಅಪರಾಧಿ ಅಲ್ಲ. ಆತನಿಗೆ ಸಾಥ್ ನೀಡಿದ ಇತರ ಮೂವರೂ ಇದ್ದಾರೆ. ಎಪ್‌ಸ್ಟೀನ್‌ ನಡೆಸುತ್ತಿದ್ದ ಅಕ್ರಮ ಜಾಲದಲ್ಲಿ ಇವರ ಪಾತ್ರವೂ ಇತ್ತು ಎಂಬುವುದು ತನಿಖಾಧಿಕಾರಿಗಳ ನಂಬಿಕೆಯಾಗಿತ್ತು. ಈಗ ಬಿಡುಗಡೆಯಾಗಿರುವ ಅಂತಿಮ ದಾಖಲೆಗಳಲ್ಲಿ ಈ ಮೂವರ ಹೆಸರುಗಳ ಮೇಲೆ ಕಪ್ಪು ಮಸಿ ಬಳಿಯಲಾಗಿದೆ. ಅಂದರೆ ಅವರ ಹೆಸರುಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ ಎಂದು ವರದಿಗಳು ಹೇಳಿವೆ.

ಅಮೆರಿಕದ ನ್ಯಾಯಾಂಗ ಇಲಾಖೆಯ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯ ಮೇಲೆ ಅಧಿಕೃತವಾಗಿ ಆರೋಪ ಸಾಬೀತಾಗದಿದ್ದರೆ ಅಥವಾ ಅವರನ್ನು ಬಂಧಿಸದಿದ್ದರೆ, ಅವರ ಖಾಸಗಿತನವನ್ನು ರಕ್ಷಿಸಲು ಹೆಸರುಗಳನ್ನು ಮರೆಮಾಚಲಾಗುತ್ತದೆ. ಹಾಗಾಗಿ,ಈ ಮೂವರ ಹೆಸರುಗಳಿಗೆ ಮಸಿ ಬಳಿಯಲಾಗಿದೆ ಎಂದು ತಿಳಿದು ಬಂದಿದೆ.

ಅಂತಿಮ ದಾಖಲೆಗಳಲ್ಲಿ ಜಗತ್ತಿನ ಅಥವಾ ಅಮೆರಿಕದ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರುಗಳಿವೆ. ಹೆಸರು ಇದ್ದ ಮಾತ್ರಕ್ಕೆ ಅವರು ಅಪರಾಧಿಗಳು ಎಂದಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅವರು ಎಪ್‌ಸ್ಟೀನ್ ಅತಿಥಿಗಳಾಗಿ ಅಥವಾ ಅವನೊಂದಿಗೆ ಇ-ಮೇಲ್ ಸಂವಹನ ನಡೆಸಿದವರಾಗಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಡೊನಾಲ್ಡ್ ಟ್ರಂಪ್

ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಅಂತಿಮ ದಾಖಲೆಗಳಲ್ಲಿ ನೂರಾರು ಬಾರಿ ಕಾಣಿಸಿಕೊಂಡಿವೆ. ಎಫ್‌ಬಿಐ ಸಂಗ್ರಹಿಸಿದ ಕೆಲವು ಹಳೆಯ ದೂರುಗಳ ವಿವರಗಳು ಇದರಲ್ಲಿವೆ. ಆದರೆ, ಅಮೆರಿಕದ ನ್ಯಾಯಾಂಗ ಇಲಾಖೆಯು ಇವುಗಳಲ್ಲಿ ಹೆಚ್ಚಿನವು ‘ಆಧಾರರಹಿತ ಮತ್ತು ಸುಳ್ಳು’ ಎಂದು ಹೇಳಿವೆ. 1990ರ ದಶಕದಲ್ಲಿ ಅವರು ಎಪ್‌ಸ್ಟೀನ್‌ನ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂಬ ಮಾಹಿತಿ ಇದೆ.

ಎಲಾನ್‌ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಎಕ್ಸ್ ಸೇರಿದಂತೆ ಹಲವು ಕಂಪನಿಗಳ ಒಡೆಯ ಎಲಾನ್‌ ಮಸ್ಕ್ ಹೆಸರು ಅಂತಿಮ ಫೈಲ್‌ಗಳಲ್ಲಿ ಕಂಡು ಬಂದಿವೆ. ಮಸ್ಕ್ ಮತ್ತು ಎಪ್‌ಸ್ಟೀನ್‌ ನಡುವೆ ನಡೆದ ಕೆಲವು ಇ-ಮೇಲ್ ಸಂಭಾಷಣೆಗಳು ಈ ಫೈಲ್‌ಗಳಲ್ಲಿವೆ. ಎಪ್‌ಸ್ಟೀನ್‌ನ ದ್ವೀಪದಲ್ಲಿ ನಡೆಯುವ ಪಾರ್ಟಿಗಳ ಬಗ್ಗೆ ಮಸ್ಕ್ ವಿಚಾರಿಸಿದ ಉಲ್ಲೇಖವಿದೆ. ಆದರೆ, ಮಸ್ಕ್ ಆ ದ್ವೀಪಕ್ಕೆ ಹೋಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.

ಬಿಲ್ ಗೇಟ್ಸ್

ಎಪ್‌ಸ್ಟೀನ್‌ ಕಳುಹಿಸಿದ ಕೆಲವು ಇ-ಮೇಲ್‌ಗಳಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಬಗ್ಗೆ ಉಲ್ಲೇಖವಿದೆ. ಗೇಟ್ಸ್ ಅವರು ರಷ್ಯಾದ ಯುವತಿಯರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪವನ್ನು ಎಪ್‌ಸ್ಟೀನ್‌ ತನ್ನ ಇ-ಮೇಲ್‌ನಲ್ಲಿ ಮಾಡಿದ್ದಾನೆ. ಆದರೆ, ಬಿಲ್ ಗೇಟ್ಸ್ ಕಡೆಯವರು ಇವೆಲ್ಲವೂ “ಸಂಪೂರ್ಣ ಸುಳ್ಳು ಮತ್ತು ಅಸಂಬದ್ಧ” ಎಂದು ಹೇಳಿದ್ದಾರೆ.

ಬಿಲ್ ಕ್ಲಿಂಟನ್

ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಎಪ್‌ಸ್ಟೀನ್‌ ಮತ್ತು ಆತನ ಗೆಳತಿ ಗಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆ ಇರುವ ಹಳೆಯ ಫೋಟೋಗಳು ಬಿಡುಗಡೆಯಾಗಿವೆ. 2009ರಲ್ಲಿ ಅವರು ಎಪ್‌ಸ್ಟೀನ್‌ ಮನೆಗೆ ಭೇಟಿ ನೀಡಿದ್ದರು ಎಂಬ ಮಾಹಿತಿಯೂ ಇದೆ. ಆದರೆ ಕ್ಲಿಂಟನ್ ಅವರು ತಮಗೆ ಎಪ್‌ಸ್ಟೀನ್‌ನ ಅಪರಾಧಗಳ ಬಗ್ಗೆ ಏನೂ ತಿಳಿದಿರಲಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದಾರೆ.

ಪ್ರಿನ್ಸ್ ಆಂಡ್ರ್ಯೂ

ಬ್ರಿಟನ್‌ನ ಪ್ರಿನ್ಸ್ ಆಂಡ್ರ್ಯೂ ಅವರನ್ನು ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ‘ದಿ ಡ್ಯೂಕ್’ ಎಂದು ಕರೆಯಲಾಗಿದೆ. ಎಪ್‌ಸ್ಟೀನ್‌ ಜೊತೆಗಿನ ಇವರ ನಿಕಟ ಸಂಬಂಧದ ಬಗ್ಗೆ ಇ-ಮೇಲ್ ದಾಖಲೆಗಳಿವೆ. ಅವರು ಎಪ್‌ಸ್ಟೀನ್‌ ಮೂಲಕ ಹುಡುಗಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂಬ ಹಳೆಯ ಆರೋಪವೂ ಈ ಫೈಲ್‌ಗಳಲ್ಲಿ ಮತ್ತೆ ಪ್ರಸ್ತಾಪವಾಗಿದೆ.

ಮೈಕೆಲ್ ಜಾಕ್ಸನ್ ಮತ್ತು ಇತರ ಕಲಾವಿದರು

ಮೈಕೆಲ್ ಜಾಕ್ಸನ್, ಮಿಕಾ ಜಾಗರ್, ಮತ್ತು ಕೆವಿನ್ ಸ್ಪೇಸಿ ಅವರಂತಹ ಕಲಾವಿದರು ಎಪ್‌ಸ್ಟೀನ್‌ ಅಥವಾ ಕ್ಲಿಂಟನ್ ಅವರೊಂದಿಗೆ ಗ್ರೂಪ್ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಎಪ್‌ಸ್ಟೀನ್‌ನ ಪಾರ್ಟಿಗಳಲ್ಲಿ ಭಾಗವಹಿಸಿದ್ದಿರಬಹುದು ಎನ್ನಲಾಗಿದೆ. ಆದರೆ ಯಾವುದೇ ಅಪರಾಧದಲ್ಲಿ ಇವರ ಹೆಸರು ನೇರವಾಗಿ ಉಲ್ಲೇಖವಾಗಿಲ್ಲ.

ಸ್ಟೀವ್ ಟಿಶ್‌

ನ್ಯೂಯಾರ್ಕ್ ಜೈಂಟ್ಸ್ ತಂಡದ ಮಾಲೀಕರಾದ ಸ್ಟೀವ್ ಟಿಶ್‌ಗೆ ಎಪ್‌ಸ್ಟೀನ್‌ ಕೆಲವು ಮಹಿಳೆಯರನ್ನು ಪರಿಚಯಿಸುವ ಬಗ್ಗೆ ಚರ್ಚಿಸಿದ ಇಮೇಲ್‌ಗಳು ಅಂತಿಮ ಫೈಲ್‌ಗಳಲ್ಲಿವೆ ಇವೆ.

ಎಹುದ್ ಬರಾಕ್

ಇಸ್ರೇಲ್‌ನ ಮಾಜಿ ಪ್ರಧಾನಿ ಎಹುದ್ ಬರಾಕ್ ಅವರು ಎಪ್‌ಸ್ಟೀನ್‌ನ ನ್ಯೂಯಾರ್ಕ್ ನಿವಾಸಕ್ಕೆ ಹಲವು ಬಾರಿ ಭೇಟಿ ನೀಡಿದ್ದ ದಾಖಲೆಗಳು ಫೈಲ್‌ಗಳಲ್ಲಿವೆ. ಆದರೆ, ತಾವು ಕೇವಲ ಬೌದ್ಧಿಕ ಚರ್ಚೆಗಳಿಗಾಗಿ ಅಲ್ಲಿಗೆ ಹೋಗಿದ್ದಾಗಿ ಅವರು ಈ ಹಿಂದೆಯೇ ಸಮರ್ಥಿಸಿಕೊಂಡಿದ್ದಾರೆ.

ನೋಮ್ ಚೋಮ್ಸ್ಕಿ

ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ಚಿಂತಕ ನೋಮ್ ಚೋಮ್ಸ್ಕಿ ಅವರು ಎಪ್‌ಸ್ಟೀನ್‌ನೊಂದಿಗೆ ಹಣಕಾಸಿನ ವಹಿವಾಟು ನಡೆಸಿದ ಬಗ್ಗೆ ಇಮೇಲ್‌ಗಳು ಕಂಡುಬಂದಿವೆ. ಶೈಕ್ಷಣಿಕ ಕಾರಣಗಳಿಗಾಗಿ ಭೇಟಿಯಾಗಿದ್ದಾಗಿ ಅವರು ತಿಳಿಸಿದ್ದಾರೆ.

ಲಾರೆನ್ಸ್ ಸಮ್ಮರ್ಸ್

ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಲಾರೆನ್ಸ್ ಸಮ್ಮರ್ಸ್ ಅವರು ಎಪ್‌ಸ್ಟೀನ್‌ನಿಂದ ದೇಣಿಗೆ ಪಡೆದಿದ್ದ ಬಗ್ಗೆ ಮತ್ತು ಆರ್ಥಿಕ ಸಲಹೆಗಳ ಬಗ್ಗೆ ಚರ್ಚಿಸಿದ್ದ ಇಮೇಲ್‌ಗಳು ಫೈಲ್‌ಗಳಲ್ಲಿವೆ.

ಥಾಮಸ್ ಪ್ರಿಟ್ಜ್ಕರ್

ಹ್ಯಾಟ್ ಹೋಟೆಲ್ ಸಮೂಹದ (Hyatt Hotels) ಕಾರ್ಯನಿರ್ವಾಹಕ ಅಧ್ಯಕ್ಷ ಥಾಮಸ್ ಪ್ರಿಟ್ಜ್ಕರ್ ಹೆಸರು ಕೆಲವು ಸಾಕ್ಷ್ಯಗಳಲ್ಲಿ ಉಲ್ಲೇಖವಾಗಿದೆ, ಆದರೆ ಯಾವುದೇ ತಪ್ಪು ಎಸಗಿದ ಬಗ್ಗೆ ದೃಢಪಟ್ಟಿಲ್ಲ.

ಜಾರ್ಜ್ ಮಿಚೆಲ್

ಅಮೆರಿಕದ ಮಾಜಿ ಸೆನೆಟರ್ ಜಾರ್ಜ್ ಮಿಚೆಲ್ ಎಪ್‌ಸ್ಟೀನ್‌ನ ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎಂಬ ಉಲ್ಲೇಖಗಳು ಕೆಲವು ಸಂತ್ರಸ್ತೆಯರ ಹೇಳಿಕೆಗಳಲ್ಲಿ ಕಂಡುಬಂದಿವೆ.

ಲೆಸ್ಲಿ ವೆಕ್ಸ್ನರ್

ವಿಕ್ಟೋರಿಯಾಸ್ ಸೀಕ್ರೆಟ್ ಕಂಪನಿಯ ಮಾಲೀಕ ಲೆಸ್ಲಿ ವೆಕ್ಸ್ನರ್ ಅವರ ಹಣಕಾಸು ವ್ಯವಹಾರಗಳನ್ನು ಎಪ್‌ಸ್ಟೀನ್‌ ನೋಡಿಕೊಳ್ಳುತ್ತಿದ್ದ. ಇವರ ನಡುವಿನ ನಿಕಟ ವ್ಯವಹಾರದ ಇಮೇಲ್‌ಗಳು ಮತ್ತು ದಾಖಲೆಗಳು ಈ ವರದಿಯಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.

ಸೆರ್ಗೆ ಬ್ರಿನ್

ಎಪ್‌ಸ್ಟೀನ್‌ನ ಜೆಪಿ ಮೋರ್ಗನ್ ಬ್ಯಾಂಕ್ ಖಾತೆಗಳ ಮೂಲಕ ನಡೆದ ವಹಿವಾಟುಗಳಿಗೆ ಸಂಬಂಧಿಸಿದಂತೆ ಗೂಗಲ್‌ನ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಹೆಸರು ಪ್ರಸ್ತಾಪವಾಗಿದೆ.

ಮೀರಾ ನಾಯರ್ ಹೆಸರು

ನ್ಯೂಯಾರ್ಕ್‌ ನಗರದ ಮೇಯರ್ ಆಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಝೊಹ್ರಾನ್ ಮಮ್ದಾನಿ ಅವರ ತಾಯಿ, ಭಾರತೀಯ ಮೂಲದ ವಿಶ್ವವಿಖ್ಯಾತ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಹೆಸರು ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಉಲ್ಲೇಖವಾಗಿದೆ. 2002ರಲ್ಲಿ ಎಪ್‌ಸ್ಟೀನ್‌ ತನ್ನ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟವೊಂದರ ಅತಿಥಿಗಳ ಪಟ್ಟಿಯಲ್ಲಿ ಮೀರಾ ನಾಯರ್ ಅವರ ಹೆಸರು ಕಂಡುಬಂದಿದೆ. ವರದಿಗಳ ಪ್ರಕಾರ, ಮೀರಾ ನಾಯರ್ ಕೇವಲ ಒಬ್ಬ ಅತಿಥಿಯಾಗಿ ಎಪ್‌ಸ್ಟೀನ್‌ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಪ್‌ಸ್ಟೀನ್‌ ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಕಲಾವಿದರು ಮತ್ತು ಬುದ್ಧಿಜೀವಿಗಳನ್ನು ತನ್ನ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದ.

ಜೆಫ್ರಿ ಎಪ್‌ಸ್ಟೀನ್‌ ಲೈಂಗಿಕ ಹಗರಣ ಮತ್ತು ಎಪ್‌ಸ್ಟೀನ್‌ ಫೈಲ್‌ ಬಿಡುಗಡೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡುವ ಕೆಲ ವರದಿ ಲಿಂಕ್‌ಗಳು ಕೆಳಗಿವೆ. ಈ ವರದಿಗಳನ್ನು ಓದಿದರೆ ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಈ ಪ್ರಕರಣದ ಸಂಪೂರ್ಣ, ವಿವರವಾದ ಮತ್ತು ಸ್ಪಷ್ಟ ಮಾಹಿತಿಯನ್ನು ತಿಳಿದುಕೊಳ್ಳಬಹುದು..

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

https://naanugauri.com/sexual-abuse-of-hundreds-of-girls-mysterious-death-in-prison-who-is-jeffrey-epstein-who-shocked-america/

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

https://naanugauri.com/americas-much-awaited-epstein-files-released-photos-of-prominent-figures-including-bill-clinton-michael-jackson-revealed/

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

https://naanugauri.com/jeffrey-epstein-files-16-documents-including-trump-photo-disappear-from-justice-department-web-page/

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...