ರಾಜಸ್ಥಾನದ ಪಾಲಿ ಜಿಲ್ಲೆಯ ಬರ್ವಾ ಗ್ರಾಮದಲ್ಲಿ ವಾಸಿಸುತ್ತಿದ್ದ ಕೋವಿಡ್ ಆರೋಗ್ಯ ಸಹಾಯಕ, ದಲಿತ ಸಮುದಾಯದ ಜಿತೇಂದ್ರಪಾಲ್ ಮೇಘವಾಲ್ ಅವರನ್ನು ಮಾರ್ಚ್ 15ರಂದು ಕೊಲ್ಲಲಾಗಿದೆ. “ಜಿತೇಂದ್ರಪಾಲ್ ನೋಡಲು ಚೆನ್ನಾಗಿದ್ದರು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಹೀಗಾಗಿ ಕೊಲೆಯಾಗಿದ್ದಾರೆ” ಎಂದು ಕುಟುಂಬ ಆರೋಪಿಸಿದೆ.
ಆರೋಪಿಗಳಾದ ಸೂರಜ್ ಸಿಂಗ್ ಮತ್ತು ರಮೇಶ್ ಸಿಂಗ್ ಅವರನ್ನು ಗುರುವಾರ ಬಾರ್ಮರ್ ಜಿಲ್ಲೆಯ ದುಡ್ವಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜಿತೇಂದ್ರಪಾಲ್ ತಮ್ಮ ಹಲವಾರು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಕುನ್ವರ್ ಸಾ ಜೀತ್’ ಎಂಬ ಹೆಸರಿರುವ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪೋಸ್ಟ್‌ಗಳಲ್ಲಿ ಅವರ ಮೀಸೆ ಗಮನ ಸೆಳೆದಿದೆ. “ನಾನು ಶ್ರೀಮಂತನಲ್ಲ, ಆದರೆ ಹೃದಯದಲ್ಲಿ ರಾಜನಾಗಿದ್ದೇನೆ” ಎಂದು ಅವರು ಟ್ಯಾಗ್‌ಲೈನ್‌ನಲ್ಲಿ ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ಗೋಡ್ವಾಡ್ ರಾಜ ಎಂದು ಕರೆದುಕೊಂಡಿದ್ದ ಆರೋಪಿ ಸೂರಜ್ ಸಿಂಗ್, 2020ರಲ್ಲಿ ಸಣ್ಣ ವಿಚಾರಕ್ಕೆ ಪಾಲ್ ಮೇಲೆ ಹಲ್ಲೆ ನಡೆಸಿದ್ದ ಎಂದು ಆತನ ಸಹೋದರ ಓಂಪ್ರಕಾಶ್ ಹೇಳಿದ್ದಾರೆ. “ನನ್ನ ಸಹೋದರ ನೋಡಲು ಚೆನ್ನಾಗಿ ಇದ್ದದ್ದರಿಂದ, ಒಳ್ಳೆಯ ವ್ಯಕ್ತಿತ್ವದವರಾಗಿದ್ದರಿಂದ ಸೂರಜ್ ಸಿಂಗ್ ಅಸೂಹೆ ಹೊಂದಿದ್ದ ಎಂಬುದು ಗ್ರಾಮಸ್ಥರಿಗೆ ತಿಳಿದಿತ್ತು” ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಜಿತೇಂದ್ರಪಾಲ್ ತನ್ನ ಸ್ನೇಹಿತ ಹರೀಶ್ ಕುಮಾರ್ ಜೊತೆ ಮಂಗಳವಾರ ಬಾಲಿಯಿಂದ ಬರ್ವಾಗೆ ಹೋಗುತ್ತಿದ್ದರು. ಜಿತೇಂದ್ರಪಾಲ್ ಮೋಟಾರ್ ಸೈಕಲ್ ನಲ್ಲಿ ಕುಮಾರ್ ಹಿಂದೆ ಕುಳಿತಿದ್ದರು.
ಬಾಲಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಯುವಕರು ನಿಲ್ಲಿಸಲು ಹೇಳಿದರು. ಹರೀಶ್ ವೇಗ ಕಡಿಮೆ ಮಾಡಿದಾಗ ಒಬ್ಬಾತ ಜಿತೇಂದ್ರಪಾಲ್ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರು ಕೆಳಗೆ ಬಿದ್ದಾಗ ಹೊಟ್ಟೆ ಮತ್ತು ಎದೆಗೆ ಮತ್ತೆ ನಾಲ್ಕು ಬಾರಿ ಇರಿದಿದ್ದಾರೆ. ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ.
ದಲಿತ ವ್ಯಕ್ತಿ ಒಳ್ಳೆಯ ಉಡುಪು ಧರಿಸಿದ್ದಕ್ಕೂ, ಆತ ಮೀಸೆ ಬಿಟ್ಟಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜಸ್ಥಾನ ಪೊಲೀಸರು ಹೇಳುತ್ತಿದ್ದಾರೆ. “2020ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಪರಸ್ಪರ ಪೈಪೋಟಿಯ ಪರಿಣಾಮ ಈ ಕೊಲೆಯಾಗಿದೆ” ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
3/3 साथ ही ग्राम बारवा जिला पाली के जितेंद्रपाल हत्याकांड में दलित समाज के व्यक्ति के मुछ रखने व पहनावे से लेकर कोई संबंध नही है।
वर्ष 2020 में दर्ज मुकदमे की आपसी रंजिश को लेकर हत्या की घटना कारित की गई है। हत्याकांड के दोनों मुख्य आरोपियों को हिरासत में लिया गया है।— Rajasthan Police (@PoliceRajasthan) March 18, 2022
ಜಿತೇಂದ್ರಪಾಲ್ ಹತ್ಯೆಯ ನಂತರ ಅವರ ಕುಟುಂಬ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದರು. ಪೊಲೀಸರು ಹಾಗೂ ಆಡಳಿತ ವರ್ಗ ಮನವೊಲಿಸಿದ ನಂತರ ಶುಕ್ರವಾರ ಮರಣೋತ್ತರ ಪರೀಕ್ಷೆಗೆ ಒಪ್ಪಿದರು.
ಜೀತೆಂದ್ರಪಾಲ್ ಸಹೋದರನಿಗೆ ಸರ್ಕಾರಿ ನೌಕರಿ ಮತ್ತು ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಅಧಿಕಾರಿ ವರ್ಗ ಭರವಸೆ ನೀಡಿದೆ. ಬರ್ವಾ ಗ್ರಾಮದಲ್ಲಿ ಶಾಶ್ವತವಾದ ಪೊಲೀಸ್ ಚೌಕ್ ನಿರ್ಮಿಸಲು ಮುಖ್ಯಮಂತ್ರಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಬಾಲಿ ಶಾಸಕ ಪುಷ್ಪೇಂದ್ರ ಸಿಂಗ್ ರಾಣಾವತ್ ಮತ್ತು ಮಾರ್ವಾರ್ ಜಂಕ್ಷನ್ ಶಾಸಕ ಖುಶ್ವೀರ್ ಸಿಂಗ್ ಜೋಜಾವರ್ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ಹಾಗೂ ಸರ್ಕಾರಿ ಉದ್ಯೋಗ ಕಲ್ಪಿಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಕುರಿತು ಮಾತನಾಡಿದ್ದರು.
ಜಿತೇಂದ್ರಪಾಲ್ ಕೊಲೆಯ ಸಂಬಂಧ #JusticeForJitendraMeghwal ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಲಾಗುತ್ತಿದೆ.
“ಜಿತೇಂದ್ರಪಾಲ್ ಮೇಘವಾಲ್ ಅವರು ಮೀಸೆ ಬಿಟ್ಟ ಕಾರಣಕ್ಕೆ ಕೊಲೆಯಾಗಿದ್ದಾರೆ. ದಲಿತರ ಚೆನ್ನಾಗಿ ಕಾಣುವುದು ಸವರ್ಣಿಯ ಹಿಂದೂಗಳಿಗೆ ಯಾಕೆ ಚುಚ್ಚುತ್ತದೆ? ಈ ದೌರ್ಜನ್ಯ ನಿಲ್ಲುವುದು ಯಾವಾಗ?” ಎಂದು Ambedkarite India ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.
Jitendrapal Meghwal was murdered just bcz he had a stupendous mustache. Why does seeing the good looking of Dalits prick the upper caste Hindus? When will this atrocity stop? #JusticeForJitendraMeghwal pic.twitter.com/FTUzt0gpBt
— Ambedkarite India (@AmbedkariteSays) March 18, 2022
No justice no peace keep fighting. Until the justice is not given don't compromise. #JusticeForJitendraMeghwal
Do something Mr @ashokgehlot51 @SachinPilot. pic.twitter.com/m0GAfSxEQW— ASHOK KUMAR (@akmiit) March 18, 2022
“ಇದು 21ನೇ ಶತಮಾನದ ಭಾರತ. ರಾಜಸ್ಥಾನದ ಸರ್ಕಾರಿ ನೌಕರಿಯಲ್ಲಿದ್ದ ಜಿತೇಂದ್ರಪಾಲ್ ಮೇಘವಾಲ್ ಮೀಸೆಯನ್ನು ಬಿಟ್ಟಿದ್ದಕ್ಕಾಗಿ ಮತ್ತು ಉತ್ತಮ ಜೀವನಶೈಲಿಯನ್ನು ನಡೆಸಿದ್ದಕ್ಕಾಗಿ ಕೊಲೆಯಾಗಿದ್ದಾರೆ” ಎಂದು ಟ್ರೈಬಲ್ ಆರ್ಮಿ ಟ್ವಿಟರ್ ಖಾತೆ ಹೇಳಿದೆ.
This is 21st century India. Jitendrapal Meghwal posted in Rajasthan government job is murdered for having mustache and leading a good lifestyle. #JusticeForJitendraMeghwal pic.twitter.com/kQ4JfUcoO9
— Tribal Army (@TribalArmy) March 17, 2022
ಇದನ್ನೂ ಓದಿರಿ: ದಲಿತ ಯುವತಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್


