Homeಕರ್ನಾಟಕಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆ ಮಾಡಿದ ಪುತ್ರಿ; ಕೋರ್ಟ್‌ನಲ್ಲಿ ಹೇಳಿಕೆ

ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆ ಮಾಡಿದ ಪುತ್ರಿ; ಕೋರ್ಟ್‌ನಲ್ಲಿ ಹೇಳಿಕೆ

- Advertisement -
- Advertisement -

2015ರ ಆಗಸ್ಟ್ 30ರಂದು ಧಾರಾವಾಡದ ತಮ್ಮ ಮನೆಯಲ್ಲಿ ಕನ್ನಡದ ವಿದ್ವಾಂಸ ಎಂ.ಎಂ.ಕಲ್ಬುರ್ಗಿಯವರು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲ್ಬುರ್ಗಿಯವರ ಪುತ್ರಿ ಧಾರಾವಾಡ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ಹಂತಕರನ್ನು ಗುರುತಿಸಿದ್ದಾರೆ. ಮಾರ್ಚ್ 17ರಂದು ಪ್ರಕರಣದ ವಿಚಾರಣೆ ನಡೆದಿದೆ.

“29 ವರ್ಷದ ಗಣೇಶ್ ಮಿಸ್ಕಿನ್ ಎಂಬ ವ್ಯಕ್ತಿಯು ನನ್ನ ತಂದೆಗೆ ಗುಂಡು ಹಾರಿಸಿದ” ಎಂದು ಗುರುತಿಸಿದ ನಂತರ ಕಲ್ಬುರ್ಗಿ ಅವರ ಪುತ್ರಿ ರೂಪದರ್ಶಿ ಕೆ. (49) ಕುಸಿದುಬಿದ್ದರು. ಮನೆಯ ಬಳಿ ಮೋಟಾರ್ ಸೈಕಲ್‌ನಲ್ಲಿ ಗಣೇಶ್‌ಗಾಗಿ ಕಾಯುತ್ತಿದ್ದ ವ್ಯಕ್ತಿ 29 ವರ್ಷದ ಪ್ರವೀಣ್ ಚತುರ್ ಎಂದು ಅವರು ತಿಳಿಸಿದ್ದಾರೆ.

ಸನಾತನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆ ಹಿಂದೂ ಜನಜಾಗೃತಿ ಸಮಿತಿಯಂತಹ ಗುಂಪುಗಳ ತೀವ್ರಗಾಮಿ ಸದಸ್ಯರಿಂದ ರಚಿಸಲ್ಪಟ್ಟ ಬಲಪಂಥೀಯ ಉಗ್ರಗಾಮಿ ಹಿಂದುತ್ವ ಸಂಘಟನೆಯೊಂದಿಗೆ ಗಣೇಶ್ ಸಂಬಂಧ ಹೊಂದಿದ್ದಾನೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಇವನ ಸಂಬಂಧ ಹೊಂದಿದ್ದಾನೆ. ಚತುರ್ ಕೂಡ ಬಲಪಂಥೀಯ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ. 2018 ರಲ್ಲಿ ಪದ್ಮಾವತ್ ಚಲನಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಹಿಂಸಾಚಾರದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಆರಂಭದಲ್ಲಿ ರಚಿಸಲಾಗಿದ್ದ ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ ಮಿಸ್ಕಿನ್ ಮತ್ತು ಚತುರ್ ಅವರನ್ನು ಬಂಧಿಸಿದೆ. ಕನ್ನಡದ ವಿದ್ವಾಂಸ ಎಂ.ಎಂ.ಕಲ್ಬುರ್ಗಿ, ಮಹಾರಾಷ್ಟ್ರದ ಪ್ರಗತಿಪರ ಚಿಂತಕರಾದ ನರೇಂದ್ರ ದಾಭೋಲ್ಕರ್, ಗೋವಿಂದ್ ಪನ್ಸಾರೆ ಅವರ ಹತ್ಯೆಯಲ್ಲೂ ಇವರು ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.

ಕಲ್ಬುರ್ಗಿಯವರ ಹತ್ಯೆಯ ಸಮಯದಲ್ಲಿ ರೂಪದರ್ಶಿಯವರು ತಂದೆಯ ಮನೆಯಲ್ಲಿದ್ದರು. ಬೆಳಿಗ್ಗೆ 8.45ರ ಸುಮಾರಿಗೆ ಕಲ್ಬುರ್ಗಿಯವರು ಫೋನ್‌ ಕರೆಯಲ್ಲಿದ್ದಾಗ ಬಾಗಿಲು ತಟ್ಟಲಾಗಿತ್ತು ಎಂದು ನ್ಯಾಯಾಲಯಕ್ಕೆ ರೂಪದರ್ಶಿ ತಿಳಿಸಿದ್ದಾರೆ.

ರೂಪದರ್ಶಿಯವರ ತಾಯಿ ಉಮಾದೇವಿ ಅವರು ಬಾಗಿಲ ಬಳಿ ಹೋದಾಗ ಆ ಅಪರಿಚಿತರು, “ಸರ್ ಅನ್ನು ಭೇಟಿಯಾಗಬೇಕು” ಎಂದು ಹೇಳಿದರು. ಕಲ್ಬುರ್ಗಿಯವರು ಬಾಗಿಲ ಬಳಿ ಹೋದಾಗ, ಗುಂಡಿನ ಸದ್ದು ಬಂತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. “ನನ್ನ ತಂದೆ ಕುಸಿದುಬಿದ್ದರು ಮತ್ತು ಹೊರಗೆ ಕಾಯುತ್ತಿದ್ದ ಸವಾರನೊಂದಿಗೆ ಒಬ್ಬ ವ್ಯಕ್ತಿ ಮೋಟರ್‌ನತ್ತ ಜಿಗಿಯುವುದನ್ನು ನೋಡಿದೆ” ಎಂದು ರೂಪದರ್ಶಿ ಹೇಳಿಕೆ ನೀಡಿದ್ದಾರೆ.

ಕುಟುಂಬದವರು ಕಲ್ಬುರ್ಗಿ ಅವರನ್ನು ಹತ್ತಿರದ ಆಸ್ಪತ್ರೆಗೆ, ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಕಲ್ಬುರ್ಗಿ ಅವರ ಮಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಯನ್ನು ಗುರುತಿಸಿದ ನಂತರ ಭಾವುಕರಾಗಿ ಅತ್ತಿದ್ದಾರೆ. ಇದನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯದ ಗಮನಕ್ಕೆ ತಂದರು ಎಂದು ವಿಚಾರಣಾ ನ್ಯಾಯಾಲಯವು ದಾಖಲು ಮಾಡಿದೆ. ಮುಂದಿನ ತಿಂಗಳು ಪಾಟೀ ಸವಾಲನ್ನು ರೂಪದರ್ಶಿ ಎದುರಿಸಲಿದ್ದಾರೆ.

ಕಲ್ಬುರ್ಗಿ ಅವರ ಪತ್ನಿ ಉಮಾದೇವಿಯವರು 2019ರ ಆರಂಭದಲ್ಲಿ, ಪ್ರಕರಣದ ಸಾಕ್ಷ್ಯದ ಭಾಗವಾಗಿರುವ ಅಧಿಕೃತ ಗುರುತಿನ ಪರೇಡ್‌ನಲ್ಲಿ ಕೊಲೆಗಾರರನ್ನು ಗುರುತಿಸಿದ್ದರು.


ಇದನ್ನೂ ಓದಿರಿ: ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ – ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...