ಹಿಜಾಬ್ ಗದ್ದಲದ ನಡುವೆ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಿದ್ದು, ಗದಗ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಐವರು ಶಿಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಇಬ್ಬರು ಅಧೀಕ್ಷರನ್ನು ಅಮಾನತುಗೊಳಿಸಲಾಗಿದೆ.
ಬೋರ್ಡ್ ಪರೀಕ್ಷೆ ಬರೆಯುವಾಗ ಸಮವಸ್ತ್ರ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಮಾರ್ಚ್ 25ರಂದು ಆದೇಶ ಹೊರಡಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಗದಗದ ಸಿ.ಎಸ್.ಪಾಟೀಲ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆಯಿಂದ ಅಮಾನತುಗೊಂಡಿರುವ ಏಳು ಮಂದಿಯ ಪೈಕಿ ಐವರು ಎಸ್.ಯು.ಹೊಕ್ಕಳ, ಎಸ್.ಎಂ.ಪತ್ತಾರ, ಎಸ್.ಜಿ.ಗೋಡ್ಕೆ, ಎಸ್.ಎಸ್.ಗುಜಮಾಗಡಿ ಮತ್ತು ವಿ.ಎನ್.ಕಿವುಡರ್ ಈ ಶಾಲೆಗಳ ಶಿಕ್ಷಕರಾಗಿದ್ದಾರೆ.
ಇನ್ನಿಬ್ಬರು (ಕೆಬಿ ಭಜಂತ್ರಿ ಮತ್ತು ಬಿಎಸ್ ಹೊನಗುಡಿ) ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿದ್ದಾರೆ. ಅವರು ಇನ್ವಿಜಿಲೇಟರ್‌ಗಳನ್ನು ನೇಮಿಸುವ ಉಸ್ತುವಾರಿ ವಹಿಸಿದ್ದರು. ಮಾರ್ಚ್ 28, ಸೋಮವಾರದಂದು ಹಿಜಾಬ್ ಧರಿಸಿ ಐದು-ಆರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು ಎಂದು ಆರೋಪಿಸಲಾಗಿದೆ.
ದಿ ಕ್ವಿಂಟ್ ವರದಿಯ ಪ್ರಕಾರ, ಶಿಕ್ಷಕರು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳನ್ನು ಗುಲಾಬಿಗಳೊಂದಿಗೆ ಸ್ವಾಗತಿಸಿದರು. ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಆವರಣ ಒಳಗೆ ಪ್ರವೇಶಿಸಲು ಅವರು ಅವಕಾಶ ನೀಡಿದರೆ ಹೊರತು, ಪರೀಕ್ಷೆಯ ಕೊಠಡಿಗಲ್ಲ.
ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಡಿಡಿಪಿಐ) ಹೇಳಿದ್ದಾರೆ.
ಇದರ ಆಧಾರದ ಮೇಲೆ ಡಿಡಿಪಿಐ ಅವರು ನಿರೀಕ್ಷಕರ ಹೇಳಿಕೆ ಪಡೆದು ಅಧಿಕಾರಿಗಳ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪರೀಕ್ಷೆಯನ್ನು ನಡೆಸುವಾಗ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1966 ಅನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಾರ್ಚ್ 25 ರಂದು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಸಮವಸ್ತ್ರದಲ್ಲಿ ಹಾಜರಾಗಬೇಕು ಎಂದು ಸೂಚಿಸಿದೆ. ಖಾಸಗಿ ಶಾಲಾ ವಿದ್ಯಾರ್ಥಿಗಳು (ಅನುದಾನಿತ ಮತ್ತು ಅನುದಾನರಹಿತ) ತಮ್ಮ ಶಾಲಾ ಆಡಳಿತ ಮಂಡಳಿಗಳು ಸೂಚಿಸಿದ ಸಮವಸ್ತ್ರವನ್ನು ಧರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿರಿ: Explainer: ಹಲಾಲ್ ಹಾಗೆಂದರೇನು?



ಯಾಕೋ ಇದು ಅತೀಯಾಯ್ತು ಅಂತಾ ಅನ್ನಿಸೊಲ್ವಾ…..