Homeಮುಖಪುಟಮತ್ತೆ ಇಂಧನ ದರ ಏರಿಕೆ: ಕಳೆದ 9 ದಿನಗಳಲ್ಲಿ 5.60 ರೂ. ಹೆಚ್ಚಳ!

ಮತ್ತೆ ಇಂಧನ ದರ ಏರಿಕೆ: ಕಳೆದ 9 ದಿನಗಳಲ್ಲಿ 5.60 ರೂ. ಹೆಚ್ಚಳ!

- Advertisement -
- Advertisement -

ಸತತವಾಗಿ ಎಂಟನೆ ದಿನವೂ ಪೆಟ್ರೋಲ್‌‌‌‌‌ ಮತ್ತು ಡೀಸೆಲ್‌ ಬೆಲೆಗಳು ಏರಿಕೆಯಾಗಿವೆ. ಬುಧವಾರದಂದು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ತಲಾ 80 ಪೈಸೆಗಳಷ್ಟು ಹೆಚ್ಚಳವಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆ ಮುಗಿದ ಬಳಿಕ ಪ್ರಾರಂಭವಾದ ಬೆಲೆ ಏರಿಕೆಯಿಂದಾಗಿ ಒಟ್ಟು 5.60 ರೂ. ಇದುವರೆಗೂ ಏರಿಕೆಯಾಗಿದೆ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್‌‌ ದರವು 101.01 ತಲುಪಿದ್ದು, ನಿನ್ನೆ ಅಲ್ಲಿ ಪ್ರತಿ ಲೀಟರ್‌ಗೆ 100.21 ರೂ. ದರವಿತ್ತು. ಅದೇ ರೀತಿ ಡೀಸೆಲ್ ದರಗಳು ಕೂಡಾ ಪ್ರತಿ ಲೀಟರ್‌ಗೆ 92.27 ರೂ. ಗೆ ಏರಿದ್ದು, ನಿನ್ನೆ ಪ್ರತಿ ಲೀಟರ್‌ಗೆ 91.47 ರೂ. ದರವಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others 

ಈ ಬೆಲೆ ಏರಿಕೆಯೊಂದಿಗೆ ರಾಜ್ಯದಲ್ಲೂ ಪರಿಣಾಮ ಬೀರಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 79 ಪೈಸೆ ಹೆಚ್ಚಳವಾಗಿದೆ.

ಮುಂಬೈನಲ್ಲಿ ಕೂಡಾ ಪೆಟ್ರೋಲ್ ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ 84 ಪೈಸೆ ಮತ್ತು 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 115.88 ರೂ. ಮತ್ತು 100.10 ರೂ.ಗೆ ತಲುಪಿದೆ.

ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಇದನ್ನೂ ಓದಿ: Explainer: ಹಲಾಲ್ ಹಾಗೆಂದರೇನು?

ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ತೈಲ ಸಂಸ್ಕರಣಾಗಾರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿದಿನ ಇಂಧನ ದರಗಳನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ತರಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಬ್ಬಾ… ನಗು ಹೇಗೆ ಬರುತ್ತೆ? ಜನಗಳ ಸಂಕಷ್ಟ ನೋಡಿ ಬರ್ತಾ ಇರೋ ನಗುನಾ ಇದು..,!

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...