Homeಕರ್ನಾಟಕಮೈಸೂರು: ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯ ಹಲಾಲ್‌‌ ಮಾಂಸ ಖರೀದಿಸಿದ ಸಾಹಿತಿ...

ಮೈಸೂರು: ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯ ಹಲಾಲ್‌‌ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹದೇವ

- Advertisement -
- Advertisement -

ಯುಗಾದಿ ಹಬ್ಬದ ‘ವರ್ಷತೊಡಕು’ ಆಚರಣೆಯಲ್ಲಿ ಮುಸ್ಲಿಮರ ಅಂಗಡಿಗಳಲ್ಲಿ ಹಲಾಲ್ ಮಾಂಸ ಖರೀದಿಸದಂತೆ ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆಯನ್ನು ಬಹಿಷ್ಕರಿಸಿ ಕನ್ನಡದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಮುಸ್ಲಿಂ ಮಾಲಕತ್ವದ ಅಂಗಡಿಗಳಲ್ಲಿ ಮಾಂಸ ಖರೀದಿಸುವ ಕಾರ್ಯಕ್ರಮ ಭಾನುವಾರದಂದು ಮೈಸೂರಿನ ಶಾಂತಿ ನಗರದಲ್ಲಿ ನಡೆಯಿತು.

ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ, ಸಂಘಪರಿವಾರದ ಮುಸ್ಲಿಂ ದ್ವೇಷವನ್ನು ವಿರೋಧಿಸಿ ಸಹಬಾಳ್ವೆ ಸಂದೇಶ ಸಾರುವುದಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ದೇವನೂರ ಮಹಾದೇವ ಅವರು ತಮ್ಮ ಪತ್ನಿ ಸಮೇತರಾಗಿ ತೆರಳಿ ಮಾಂಸವನ್ನು ಖರೀದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಅವರು ಅಲ್ಲಿನ ಅಜೀಜ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಜ್ವಾನ್ ಅವರ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್‌ನಲ್ಲಿ ಮಾಂಸ ಖರೀದಿಸಿದ್ದಾರೆ.

ಈ ವೇಳೆ ಅಲ್ಲಿ ನೆರೆದಿದ್ದ ಜನರು, “ಸಾಮತಸ್ಯ ಉಳಿಯಲಿ. ಸಮಸಮಾಜವ ಕಟ್ಟುತ್ತೇವೆ, ಕೋಮುವಾದವ ಅಟ್ಟುತ್ತೇವೆ. ಜಾತಿಮತ ಬಿಟ್ಟು ಮಾನವೀಯತೆಗೆ ಜೀವಕೊಡಿ. ನಮ್ಮ ಆಹಾರ ನಮ್ಮ ಹಕ್ಕು” ಎಂದು ಘೋಷಣೆ ಕೂಗಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರು ಮಹದೇವ ಅವರ ಜೊತೆಗೆ ಅವರ ಸಂಗಾತಿ ಕೆ. ಸುಮಿತ್ರಾ ಬಾಯಿ, ಹೋರಾಟಗಾರರಾದ ಪ.ಮಲ್ಲೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಕೆರಗೋಡು, ದಲಿತ ಹೋರಾಟಗಾರ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ.ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ ಅವರು ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹಲಾಲ್‌‌ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್‌‌‌ನಲ್ಲಿರುವ ಸುಳ್ಳುಗಳೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...