ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವುದರ ಜೊತೆಗೆ, ಶ್ರೀಲಂಕಾ ರಾಷ್ಟ್ರದಾದ್ಯಂತ ನಾಗರಿಕರ ಪ್ರತಿಭಟನೆಗಳು ಭುಗಿಲೆದ್ದಿವೆ. ಆಹಾರ ಮತ್ತು ಮೂಲಭೂತ ಅಗತ್ಯಗಳ ಕೊರತೆಯಿಂದಾಗಿ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ಪ್ರತಿಭಟನೆಯನ್ನು ಹತ್ತಿಕ್ಕಲು ಭಾರತೀಯ ಸೈನಿಕರು ಶ್ರೀಲಂಕಾ ಪ್ರವೇಶಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಹರಡಿದಾಡುತ್ತಿವೆ.
ಆದರೆ ಇದನ್ನು ನಿರಾಕರಿಸಿರುವ ಶ್ರೀಲಂಕಾ ಸೇನೆ ಮತ್ತು ಭಾರತೀಯ ಹೈಕಮಿಷನ್, “ಭಾರತದಿಂದ ಯಾವುದೇ ಮಿಲಿಟರಿ ಹಸ್ತಕ್ಷೇಪ ನಡೆದಿಲ್ಲ” ಎಂದು ಹೇಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ ಶನಿವಾರದಂದು ಭಾರತೀಯ ಸೈನಿಕರ ಆಗಮನದ ವರದಿಗಳನ್ನು ತಳ್ಳಿಹಾಕಿದ್ದಾರೆ. 2021ರಲ್ಲಿ ನಡೆದ ಭಾರತ-ಶ್ರೀಲಂಕಾ ಜಂಟಿ ಮಿಲಿಟರಿ ಸಮರಭ್ಯಾಸದ ಅಧಿಕೃತ ಚಿತ್ರಗಳನ್ನು ಹೊಂದಿರುವ ನಕಲಿ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭುಗಿಲೆದ್ದ ಆರ್ಥಿಕ ಬಿಕ್ಕಟ್ಟು; ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ
ಭದ್ರತೆಯನ್ನು ಖಾತ್ರಿಪಡಿಸುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಶ್ರೀಲಂಕಾದ ಪಡೆಗಳ ಸನ್ನದ್ಧವಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ವಿಶ್ವಾಸ ವ್ಯಕ್ತಪಡಿಸಿದ್ದು, ತಪ್ಪು ಮಾಹಿತಿಯಿಂದ ಎಚ್ಚರಿಕೆಯಿಂದ ಇರಲು ಜನರನ್ನು ಕೇಳಿದ್ದಾರೆ.
ಈ ಬಗ್ಗೆ ಭಾರತೀಯ ಹೈಕಮಿಷನ್ ನೀಡಿದ ಹೇಳಿಕೆಯಲ್ಲಿ, “ಶ್ರೀಲಂಕಾಕ್ಕೆ ಭಾರತೀಯ ಸೇನೆಯ ಆಗಮನದ ಬಗ್ಗೆಗಿನ ವರದಿಗಳು ನಿಸ್ಸಂಶಯವಾಗಿ ಸುಳ್ಳು ಮತ್ತು ಸಂಪೂರ್ಣವಾಗಿ ಆಧಾರರಹಿತ” ಎಂದು ತಿಳಿಸಿದೆ.
ಈ ಮಧ್ಯೆ, ಶ್ರೀಲಂಕಾದಲ್ಲಿ ಭಾನುವಾರದಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ಅಲ್ಲಿ ಆಡಳಿತವು ಶನಿವಾರದಿಂದ 36 ಗಂಟೆಗಳ ಸುದೀರ್ಘ ಕರ್ಫ್ಯೂ ಅನ್ನು ವಿಧಿಸಿದೆ.
ನಿನ್ನೆ ಹೊರಡಿಸಲಾದ ಗೆಜೆಟ್‌ನಲ್ಲಿ, ಶನಿವಾರ ಸಂಜೆ 6 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಇದ್ದು, ಈ ಸಮಯದಲ್ಲಿ ಸಾರ್ವಜನಿಕ ರಸ್ತೆ, ಉದ್ಯಾನವನ, ರೈಲ್ವೆ, ಸಮುದ್ರ ತೀರ ಅಥವಾ ಇತರ ಸಾರ್ವಜನಿಕ ಸ್ಥಳಗಳಿಗೆ ಜನರು ಬರುವುದನ್ನು ನಿಷೇಧಿಸಲಾಗಿದೆ.
ಈ ಕರ್ಫ್ಯೂ ವಿಧಿಸುವ ಕೆಲವೇ ಗಂಟೆಗಳ ಮೊದಲು, ರಾಷ್ಟ್ರದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆ ನೀಡಬೇಕೆಂದು ಜನರು ಬೀದಿಗಿಳಿದಿದ್ದರು.
ಗುರುವಾರ ಸಂಜೆ ಅಧ್ಯಕ್ಷರ ಭವನದ ಬಳಿ ಸಾರ್ವಜನಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು ಮತ್ತು ಪೊಲೀಸರು ಜನರ ಮೇಲೆ ದಾಳಿ ಮಾಡಿದ್ದರು. ಇದರ ನಂತರ ಪ್ರತಿಭಟನಾಕಾರರಲ್ಲಿ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಆಹಾರ ಮತ್ತು ಉದ್ಯೋಗದ ಕೊರತೆ: ತಮಿಳುನಾಡು ಕರಾವಳಿಯನ್ನು ತಲುಪಿದ ಶ್ರೀಲಂಕಾ ನಿರಾಶ್ರಿತರು!