Homeಅಂತರಾಷ್ಟ್ರೀಯಆಹಾರ ಮತ್ತು ಉದ್ಯೋಗದ ಕೊರತೆ: ತಮಿಳುನಾಡು ಕರಾವಳಿಯನ್ನು ತಲುಪಿದ ಶ್ರೀಲಂಕಾ ನಿರಾಶ್ರಿತರು!

ಆಹಾರ ಮತ್ತು ಉದ್ಯೋಗದ ಕೊರತೆ: ತಮಿಳುನಾಡು ಕರಾವಳಿಯನ್ನು ತಲುಪಿದ ಶ್ರೀಲಂಕಾ ನಿರಾಶ್ರಿತರು!

- Advertisement -
- Advertisement -

ಭಾರತದ ನೆರೆಯ ದೇಶವಾದ ಶ್ರೀಲಂಕಾದಲ್ಲಿ ಸದ್ದಿಲ್ಲದಂತೆ ನಿರಾಶ್ರಿತರ ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ಜನರು ಪಲಾಯನ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ದಿನಗಳಲ್ಲಿ ಸಾಮೂಹಿಕ ವಲಸೆಯ ಸಂಕೇತವಾಗಿ, ಜಾಫ್ನಾ ಮತ್ತು ಮನ್ನಾರ್ ಪ್ರದೇಶಗಳಿಂದ ಹೊರಟ 16 ಶ್ರೀಲಂಕನ್‌‌ ಪ್ರಜೆಗಳ ಎರಡು ತಂಡಗಳು ಭಾರತದ ತಮಿಳುನಾಡಿನ ತೀರವನ್ನು ತಲುಪಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

3 ಮಕ್ಕಳು ಸೇರಿದಂತೆ 6 ನಿರಾಶ್ರಿತರ ಮೊದಲ ತಂಡ ರಾಮೇಶ್ವರಂ ಕರಾವಳಿಯ ಬಳಿ ಸಿಕ್ಕಿಬಿದ್ದ ನಂತರ ಹತ್ತು ಜನರಿರುವ ಎರಡನೆ ತಂಡ ತಡರಾತ್ರಿ ತಮಿಳುನಾಡು ತಲುಪಿದೆ. ಎರಡು ತಂಡ ಕೂಡಾ ಶ್ರೀಲಂಕನ್ ತಮಿಳು ಜನಾಂಗದವರಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದ್ದಾರೆ. ತಂಡವನ್ನು ಕೋಸ್ಟ್ ಗಾರ್ಡ್ ರಕ್ಷಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು: ಕಾಗದದ ಕೊರತೆಯಿಂದಾಗಿ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ!

ಶ್ರೀಲಂಕಾದಲ್ಲಿ ತೀವ್ರ ಆಹಾರದ ಕೊರತೆ, ನಿರುದ್ಯೋಗ, ಉದ್ಯೋಗದ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಬಿಕ್ಕಟ್ಟು ಹೆಚ್ಚುತ್ತಿದೆ. ಶ್ರೀಲಂಕಾದ ಉತ್ತರದಲ್ಲಿ ತಮಿಳು ಪ್ರಾಬಲ್ಯದ ಪ್ರದೇಶಗಳಿಂದ ಹೆಚ್ಚಿನ ನಿರಾಶ್ರಿತರ ವಲಸೆ ಆರಂಭವಾಗಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 2000 ನಿರಾಶ್ರಿತರು ತಮಿಳುನಾಡಿನ ತೀರವನ್ನು ತಲುಪುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.

ಮೊದಲು ಬಂದ ಆರು ಮಂದಿ ವಲಸಿಗರು, ತಾವು ಹಲವು ವಾರಗಳಿಂದ ಆಹಾರಕ್ಕಾಗಿ ಪರದಾಡುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಭಾರತೀಯ ಜಲಪ್ರದೇಶವಾದ ಅರಿಚಲ್ ಮುನೈ ದ್ವೀಪದಲ್ಲಿ ಅವರನ್ನು ಇಳಿಸಲು ತಾವು ಮೀನುಗಾರರಿಗೆ ಸುಮಾರು 50,000 ರೂಪಾಯಿಗಳನ್ನು ಪಾವತಿಸಿದ್ದಾಗಿ ಅವರು ಹೇಳಿದ್ದಾರೆ.

ನಿರಾಶ್ರಿತರ ಮಾತುಗಳನ್ನು ಆಲಿಸಿದ ಅಧಿಕಾರಿಯೊಬ್ಬರ ಮಾತಿನ ಪ್ರಕಾರ, ಇನ್ನೂ ಹಲವು ಕುಟುಂಬಗಳು ಭಾರತಕ್ಕೆ ಪಲಾಯನ ಮಾಡುವ ದಾರಿಯನ್ನು ಹುಡುಕುತ್ತಿವೆ. ಭಾರತೀಯ ಜಲಪ್ರದೇಶದಿಂದ ಅವರನ್ನು ರಕ್ಷಿಸಿದ ಅಧಿಕಾರಿಗಳು ಅವರಿಗೆ ಆಹಾರ ನೀಡಿ ರಾಮೇಶ್ವರಂ ಬಳಿಯ ಮಂಟಪಂ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಶ್ರೀಲಂಕಾ ಮೇಲೆ ವಾಣಿಜ್ಯ ನಿರ್ಬಂಧ ಹೇರಲು ಮುಂದಾದ ಯುರೋಪಿಯನ್‌ ಸಂಸತ್ತು

ತಮಿಳನಾಡು ತಲುಪಿದ ಎರಡನೇ ಗುಂಪು ಫೈಬರ್ ಬೋಟ್‌ನಲ್ಲಿ ಬಂದಿದ್ದು, ತಮ್ಮ ಪ್ರಯಾಣಕ್ಕಾಗಿ 3 ಲಕ್ಷ ರೂ. ಪಾವತಿದ್ದಾಗಿ ಹೇಳಿದ್ದಾರೆ. ಪ್ರಯಾಣದ ಮಧ್ಯೆ ದೋಣಿಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡದ್ದರಿಂದ, ಸುಮಾರು ಒಂದು ದಿನವನ್ನು ಸಮುದ್ರದ ಮಧ್ಯದಲ್ಲಿ ಕಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರು ರಾತ್ರಿ 9 ರ ಸುಮಾರಿಗೆ ರಾಮೇಶ್ವರಂನ ಪಂಬನ್ ಸೇತುವೆಯನ್ನು ತಲುಪಿದ್ದಾರೆ.

ತನಗೆ ತಿಳಿದಿರುವ ಅನೇಕರು ಶ್ರೀಲಂಕಾವನ್ನು ತೊರೆಯಲು ಯೋಜಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಿ.ಎಸ್. ಶಿವಕರನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ದೇಶದಲ್ಲಿ ಭಯ ಮತ್ತು ಆತಂಕವಿದ್ದು, ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ ಇನ್ನೊಂದು ವಾರದಲ್ಲಿ ಅಕ್ಕಿ 500/ಕೆಜಿಗೆ ತಲುಪುತ್ತದೆ” ಎಂದು ಅವರು ತರ್ಕಿಸಿದ್ದಾರೆ. “ಅಲ್ಲಿ ಇಂದು ಕೆಜಿಗೆ 290 ರೂ.ಗೆ ಮಾರಾಟವಾಗುತ್ತಿದೆ ಮತ್ತು ಸಕ್ಕರೆಗೆ ಅದೇ ಬೆಲೆ ಇದೆ. 400 ಗ್ರಾಂ ಹಾಲಿನ ಪುಡಿ 790 ರೂ. ಇದೆ” ಎಂದು ಅವರು ಹೇಳಿದ್ದಾರೆ.

ಪೇಪರ್ ಕೊರತೆಯಿಂದಾಗಿ ಶ್ರೀಲಂಕಾ ಸರ್ಕಾರ ಶಾಲಾ ಪರೀಕ್ಷೆಗಳನ್ನು ಇತ್ತೀಚೆಗೆ ಮುಂದೂಡಿದೆ. ಈಳಂ ಪೀಪಲ್ಸ್ ರೆವಲ್ಯೂಷನರಿ ಲಿಬರೇಶನ್ ಫ್ರಂಟ್ (ಇಪಿಆರ್‌ಎಲ್‌ಎಫ್) ಸುರೇಶ್ ಪ್ರೇಮಚಂದ್ರನ್ ಪ್ರಕಾರ, “ಕಾರ್ಮಿಕ ವರ್ಗವು ತೀವ್ರ ಸಂಕಷ್ಟ ಎದುರಿಸುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸುಸ್ಥಿರ ಅಭಿವೃದ್ಧಿ ಪಟ್ಟಿಯಲ್ಲಿ ಮತ್ತೆರಡು ಸ್ಥಾನ ಕುಸಿದ ಭಾರತ: ಬಾಂಗ್ಲಾ, ನೇಪಾಳ ಶ್ರೀಲಂಕಾ, ಭೂತಾನ್‍ಗಳಿಗಿಂತ ಹಿಂದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...