Homeಮುಖಪುಟಬಿಜೆಪಿ ಸರ್ಕಾರ ಪ್ರಾಯೋಜಿತ ದ್ವೇಷ ರಾಜಕಾರಣದ ಮಧ್ಯೆ ‘ಸೌಹಾರ್ದ ಯುಗಾದಿ’ ಆಚರಿಸಿದ ರಾಜ್ಯದ ಜನತೆ

ಬಿಜೆಪಿ ಸರ್ಕಾರ ಪ್ರಾಯೋಜಿತ ದ್ವೇಷ ರಾಜಕಾರಣದ ಮಧ್ಯೆ ‘ಸೌಹಾರ್ದ ಯುಗಾದಿ’ ಆಚರಿಸಿದ ರಾಜ್ಯದ ಜನತೆ

- Advertisement -
- Advertisement -

ರಾಜ್ಯದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ನಾಡಿನಾದ್ಯಂತ ಕೋಮು ಸಾಮರಸ್ಯ ಹಾಳುಗೆಡವುತ್ತಿರುವ ಮಧ್ಯೆ, ‘ಸೌಹಾರ್ದ ಕರ್ನಾಟಕ’ ಹಾಗೂ ಇನ್ನಿತರ ಜನಪರ ಸಂಘಟನೆಗಳ ನೇತೃತ್ವದಲ್ಲಿ ಎಲ್ಲಾ ಸಮುದಾಯಗಳ ಜನರು ಒಟ್ಟು ಸೇರಿ ರಾಜ್ಯದಾದ್ಯಂತ ಉಗಾದಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಿದ್ದಾರೆ.

‘ಸೌಹಾರ್ದ ಕರ್ನಾಟಕ’ ಹಾಗೂ ಜನಪರ ಸಂಘಟನೆಗಳು ಮತ್ತು ಸಿಪಿಐಎಂ ‘ಸೌಹಾರ್ದ ಯುಗಾದಿ’ಯನ್ನು ರಾಜ್ಯದಾದ್ಯಂತ ಆಚರಿಸಲು ಕರೆ ನೀಡಿತ್ತು. ಈ ಕರೆಗೆ ರಾಜ್ಯವ್ಯಾಪಿ ಉತ್ತಮ ಸ್ಪಂದನೆ ದೊರೆತಿದ್ದು, ಎಲ್ಲಾ ಸಮುದಾಯದ ಜನರು ಒಟ್ಟು ಸೇರಿ ಉಗಾದಿ ಹಬ್ಬವನ್ನು ಆಚರಿಸಿ ಸೌಹಾರ್ದ ಮೆರೆದಿದ್ದಾರೆ. ರಾಜ್ಯದ ಕಲಬುರಗಿ, ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ಬೆಂಗಳೂರು, ಹಾಸನ, ಬೀದರ್‌, ವಿಜಯಪುರ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಲಾ ಸಮುದಾಯದ ಜನರು ಸೇರಿ ಬೇವು-ಬೆಲ್ಲ ಹಂಚಿ ತಿನ್ನುವ ಮೂಲಕ ಬಿಜೆಪಿಯ ದ್ವೇಷ ರಾಜಕೀಯಕ್ಕೆ ಸೆಡ್ಡುಹೊಡೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ‌ ಸಿಪಿಎಂ ಪಕ್ಷದ ವತಿಯಿಂದ ಮುಸಲ್ಮಾನರೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿದೆ.‌ ವಿವಿಧ ಸಮುದಾಯಗಳ, ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಪಕ್ಷವು ಹೇಳಿದೆ.

ಇದನ್ನೂ ಓದಿ: ಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ…!

“ತೀರಾ ಭಾವನಾತ್ಮಕವಾಗಿ ಕಾರ್ಯಕ್ರಮ ನಡೆಯಿತು. ಬೇವು ಬೆಲ್ಲವನ್ನು ಮುಸ್ಲಿಮರೊಂದಿಗೆ ಹಿಂದುಗಳು ಹಂಚಿಕೊಂಡರು. ಸರಕಾರವೇ ನಿಂತು ಮುಸಲ್ಮಾನರನ್ನು ಪ್ರತ್ಯೇಕಿಸುವ, ಬಹಿಷ್ಕಾರ ಹಾಕುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವಾಗ ಇದೊಂದು ಪ್ರಾಯೋಗಿಕವಾದ ಮಾದರಿ ಉತ್ತರ. ದುಡಿದುಣ್ಣುವ ಜನರ ಮಧ್ಯೆ ಗೋಡೆ ಕಟ್ಟುವ ಪ್ರಯತ್ನ ನಡೆದಷ್ಟು ನಾವು ಬೆಸೆಯುವ ಕಾರ್ಯವನ್ನು ಮತ್ತಷ್ಟು ಹುರುಪಿ‌ನಿಂದ ನಡೆಸುವೆವು. ಇಂದು ಬಹಳಷ್ಟು ಕಡೆ ಸೌಹಾರ್ದ ಯುಗಾದಿ ಕಾರ್ಯಕ್ರಮ ನಡೆದಿದೆ. ಮುಸ್ಲಿಮರು ಏಕಾಂಗಿಗಳಲ್ಲ. ಅವರೊಂದಿಗೆ ಸೌಹಾರ್ದ ಪ್ರಿಯ ಹಿಂದುಗಳು ಸದಾ ಇರುತ್ತಾರೆ” ಎಂದು ಮಳವಳ್ಳಿ ಸಿಪಿಐಎಂ ಪಕ್ಷದ ಪದಾದಿಕಾರಿಗಳು ಹೇಳಿದ್ದಾರೆ.

ಕಲಬುರಗಿಯ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಆವರಣದಲ್ಲಿ ಹಿಂದೂ,ಮುಸ್ಲಿಂ, ಕ್ರಿಶ್ಚಿಯನ್ ಬೌದ್ಧ ಧರ್ಮಿಯರು ಸೇರಿದಂತೆ ಹಲವಾರು ಜನರು ಸೇರಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.

ಮೈಸೂರಿನಲ್ಲಿ ‘ಸೌಹಾರ್ದ ಕರ್ನಾಟಕ’ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸೌಹಾರ್ದ ಯುಗಾದಿ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಹಿಂದೂ ಧರ್ಮಿಯರು ಮುಸ್ಲಿಂ, ಕ್ರಿಶ್ಚಿಯನ್ ಧರ್ಮಿಯರೊಂದಿಗೆ ಹಬ್ಬ ಆಚರಿಸಿ ಬೇವು-ಬೆಲ್ಲ, ಹೋಳಿಗೆಯನ್ನು ಪರಸ್ಪರ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ 

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಪಟ್ಟಣದಲ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ, ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಕೋಲಾರ, ಶ್ರೀನಿವಾಸಪುರ, ಹಾಸನ, ಬೀದರ, ಬಳ್ಳಾರಿ, ವಿಜಯಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹಬ್ಬವನ್ನು ಎಲ್ಲಾ ಸಮುದಾಯಗಳ ಜನರೊಂದಿಗೆ ಸೇರಿ ಆಚರಿಸಲಾಗಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ರಾಜ್ಯ ರೈತ ಪ್ರಾಂತ ಸಂಘದ ಕಾರ್ಯದರ್ಶಿ ಬಸವರಾಜ್ ಅವರು, “ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಹಿಂದೂ ಮುಸ್ಲಿಮರ ನಡುವೆ ತಾರತಮ್ಯ ಮಾಡುವುದು, ದ್ವೇಷ ಹರಡುವುದನ್ನು ಸರ್ಕಾರವೇ ಮಾಡುತ್ತಿವೆ. ಅದನ್ನು ಮೀರಿ ಈ ಸಂದರ್ಭದಲ್ಲಿ ಭಾವೈಕ್ಯತೆಯನ್ನು ಮರೆಯುವ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ನಾವು ತೀರ್ಮಾನ ಮಾಡಿ, ರಾಜ್ಯದಾದ್ಯಂತ ಸೌಹಾರ್ದ ಯುಗಾದಿ ಎಂದು ಆಚರಿಸಲು ಕರೆ ನೀಡಿದ್ದೆವು” ಎಂದು ಹೇಳಿದ್ದಾರೆ.

“ಕಾರ್ಯಕ್ರಮದಲ್ಲಿ, ಸೌಹಾರ್ದತೆಯ ಪರವಾಗಿ ಇರುವ ಎಲ್ಲಾ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದೆವು. ರಾಜ್ಯದಾದ್ಯಂತ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಎಲ್ಲಾ ಸಮುದಾಯದ ಜನರು ಕೈ ಕೈ ಹಿಡಿದು ನಾವೆಲ್ಲರೂ ಒಂದೇ ಎಂದು ಸಾರಿ ಸಾಮರಸ್ಯ, ಸೌಹಾರ್ದತೆ ಮತ್ತು ಸಂವಿಧಾನವನ್ನು ಉಳಿಸುವ ಪ್ರತಿಜ್ಞೆ ಮಾಡಿದ್ದಾರೆ” ಎಂದು ಬಸವರಾಜ್ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...