ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸತ್ಯವನ್ನು ಮಾತನಾಡುವುದಿಲ್ಲ, ಜೊತೆಗೆ ಸತ್ಯವನ್ನು ಮಾತನಾಡುಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ. ಕೊರೊನಾದಿಂದ ಭಾರತದಲ್ಲಿ ಸುಮಾರು 40 ಲಕ್ಷ ಸಾವು ಸಂಭವಿಸಿದ್ದು, ಆದರೆ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಯತ್ನಕ್ಕೆ ಭಾರತವು ತಡೆಯೊಡ್ಡುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯ ಪ್ರಧಾನಿಯ ವಿರುದ್ದ ಕಿಡಿ ಕಾರಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಶನಿವಾರ ಮಾಡಿದ ವರದಿಯಲ್ಲಿ, “ಭಾರತದಲ್ಲಿ ಕೊರೊನಾದಿಂದ ಸುಮಾರು 40 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿದೆ. ಅದರೆ ಈ ವರದಿ ವಿಳಂಬವಾಗಲು ಭಾರತ ಪ್ರಯತ್ನಿಸುತ್ತಿದೆ” ಎಂದು ಹೇಳಿದೆ. ಸರ್ಕಾರದ ಅಧೀಕೃತ ಲೆಕ್ಕಾಚಾರದ ಪ್ರಕಾರ ಕೊರೊನಾದಿಂದ ದೇಶದಲ್ಲಿ ಮೃತಪಟ್ಟವರು ಐದು ಲಕ್ಷ ಎಂದು ಹೇಳುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಟೈಮ್ಸ್ ತನ್ನ ವರದಿಯಲ್ಲಿ “ಕೊರೊನಾದಿಂದಾಗಿ ಈ ಹಿಂದೆ ನಂಬಿದ್ದಕ್ಕಿಂತ ಹೆಚ್ಚಿನ ಜನರು ಎಂದು WHO ಕಂಡುಹಿಡಿದಿದೆ. ಆದರೆ ಭಾರತದ ಆಕ್ಷೇಪಣೆಯಿಂದಾಗಿ ಈ ವರದಿ ವಿಳಂಬವಾಗುತ್ತಿದ್ದು, ಎಷ್ಟು ನಾಗರೀಕರು ಸತ್ತರು ಎಂಬ ಲೆಕ್ಕಾಚಾರವನ್ನು ನೀಡಲು ಭಾರತ ವಿವಾದ ಮಾಡುತ್ತಿದ್ದು, ಅದನ್ನು ಸಾರ್ವಜನಿಕವಾಗದಂತೆ ಇರಿಸಲು ಪ್ರಯತ್ನಿಸಿದೆ” ಎಂದು ಹೇಳಿದೆ.
ಇದನ್ನೂ ಓದಿ: ಕೊರೊನಾದಿಂದ ಭಾರತದಲ್ಲಿ ಮೃತಪಟ್ಟವರು 40 ಲಕ್ಷ; ಮೋದಿ ಸರ್ಕಾರದ ಲೆಕ್ಕ 5 ಲಕ್ಷ!
ನ್ಯೂಯಾರ್ಕ್ ಟೈಮ್ಸ್‌ನ ಈ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು, “ಪ್ರಧಾನಿ ಮೋದಿ ಅವರು ಸತ್ಯವನ್ನು ಮಾತನಾಡುವುದಿಲ್ಲ ಅಥವಾ ಮಾತನಾಡಲು ಬಿಡುವುದಿಲ್ಲ. ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಅವರು ಇನ್ನೂ ಸುಳ್ಳು ಹೇಳುತ್ತಲೇ ಇದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಕೋವಿಡ್‌ನಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 5 ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ನೀಡಿ, ಕರ್ತವ್ಯವನ್ನು ನಿಭಾಯಿಸಿ ಮೋದಿಯವರೇ” ಎಂದು ಅವರು ಒತ್ತಾಯಿಸಿದ್ದಾರೆ.
मोदी जी ना सच बोलते हैं, ना बोलने देते हैं।
वो तो अब भी झूठ बोलते हैं कि oxygen shortage से कोई नहीं मरा!
मैंने पहले भी कहा था – कोविड में सरकार की लापरवाहियों से 5 लाख नहीं, 40 लाख भारतीयों की मौत हुई।
फ़र्ज़ निभाईये, मोदी जी – हर पीड़ित परिवार को ₹4 लाख का मुआवज़ा दीजिए। pic.twitter.com/ZYKiSK2XMJ
— Rahul Gandhi (@RahulGandhi) April 17, 2022
2021ರ ಅಂತ್ಯಕ್ಕೆ ಪ್ರತಿಯೊಂದು ದೇಶಗಳು ವೈಯಕ್ತಿವಾಗಿ ನೀಡಿರುವ ಮಾಹಿತಿಯಂತೆ ಕೊರೊನಾ ಸಾವಿನ ಸಂಖ್ಯೆ 60 ಲಕ್ಷ ಎಂದು ನಂಬಲಾಗಿತ್ತು. ಆದರೆ ಕೊರೊನಾದಿಂದಾದ ಸಾವು 1.5 ಕೋಟಿಗೂ ಹೆಚ್ಚು ಎಂದು WHO ಇದೀಗ ಕಂಡು ಹಿಡಿದಿದೆ. ಪ್ರಪಂಚದಾದ್ಯಂತ ಇರುವ ತಜ್ಞರ ಒಂದು ವರ್ಷಕ್ಕೂ ಹೆಚ್ಚು ಸಂಶೋಧನೆ ಹಾಗೂ ವಿಶ್ಲೇಷಣೆಯ ಫಲಿತಾಂಶ ಮತ್ತು ಇಲ್ಲಿಯವರೆಗಿನ ಸಾಂಕ್ರಾಮಿಕ ರೋಗದ ಭೀಕರತೆಯ ಬಗ್ಗೆ ಅತ್ಯಂತ ಸಮಗ್ರವಾದ ನೋಟದ ವರದಿಯು ಭಾರತದ ಆಕ್ಷೇಪಣೆಯಿಂದಾಗಿ ತಿಂಗಳುಗಟ್ಟಲೆ ವಿಳಂಬವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
ಹೆಚ್ಚುವರಿ 90 ಲಕ್ಷ ಸಾವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿದೆ ಎಂದು WHO ಅಂದಾಜಿಸಿದೆ. ಆದರೆ ಮೋದಿ ನೇತೃತ್ವದ ಸರ್ಕಾರವು ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಕೇವಲ 5,20,000(ಐದು ಲಕ್ಷದ ಇಪ್ಪತ್ತು ಸಾವಿರ) ಎಂದು ಹೇಳುತ್ತಿದೆ. ದೇಶದಲ್ಲಿ ಕೊರೊನಾದಿಂದ ಸಾವಿಗೀಡಾದವರ ನಿಜವಾರ ಸಂಖ್ಯೆ ಕನಿಷ್ಠ 40 ಲಕ್ಷ ಎಂದು WHO ಹೇಳುತ್ತದೆ.
ಇದನ್ನೂ ಓದಿ: ಎರಡು ವರ್ಷಗಳ ನಂತರ ಕೊರೊನಾ ನಿರ್ಬಂಧಗಳನ್ನು ಕೊನೆಗೊಳಿಸಿದ ಭಾರತ
WHO ಲೆಕ್ಕಕ್ಕೆ ಸಿಗದ ಸಾವುಗಳನ್ನು ಕಂಡುಹಿಡಿಯುವುದಕ್ಕಾಗಿ ಕೇಂದ್ರೀಕೃತ ರಾಷ್ಟ್ರೀಯ ಡೇಟಾದ ಜೊತೆಗೆ ಸ್ಥಳೀಯ ಮತ್ತು ಮನೆ-ಮನೆ ಸರ್ವೆಗಳ ಹಾಗೂ ಸಂಖ್ಯಾಶಾಸ್ತ್ರೀಯ ಮಾದರಿಗಳ ಮೂಲಕ ಹೊಸ ಮಾಹಿತಿಯನ್ನು ಪಡೆಯುತ್ತಿದೆ.
ಅಂಕಿಅಂಶಗಳನ್ನು ಬಿಡುಗಡೆ ಮಾಡುವಲ್ಲಿನ ವಿಳಂಬವು ಗಂಭೀರ ವಿಷಯವಾಗಿದ್ದು, ಯಾಕೆಂದರೆ ಸಾಂಕ್ರಾಮಿಕ ರೋಗವು ಹೇಗೆ ಹೊರಹೊಮ್ಮಿದೆ ಮತ್ತು ಯಾವ ಕ್ರಮಗಳು ಇದೇ ರೀತಿಯ ಬಿಕ್ಕಟ್ಟನ್ನು ತಗ್ಗಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಜಾಗತಿಕ ಅಂಕಿಅಂಶ ಅತ್ಯಗತ್ಯವಾಗಿದೆ. ಆದರೆ ಭಾರತವು ಇದಕ್ಕೆ ಸಹಕರಿಸುತ್ತಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿದೆ.


