ತನ್ನ ತಾಯಿ ಮಾಡಿರುವ ಕೆಲಸಕ್ಕೆ ಕೂಲಿ ಕೇಳಲು ಹೋಗಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಸವರ್ಣೀಯ ಸಮುದಾಯದ ದುಷ್ಕರ್ಮಿಗಳು ಹಲ್ಲೆ ನಡೆಸಿ, ವ್ಯಕ್ತಿಯೊಬ್ಬನ ಕಾಲು ನೆಕ್ಕುವಂತೆ ಮಾಡಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ದಲಿತ ಬಾಲಕ ತಮ್ಮ ಕಿವಿಯ ಮೇಲೆ ಕೈಯಿಟ್ಟು ನೆಲದ ಮೇಲೆ ಕುಳಿತಿರುವುದು ಕಾಣುತ್ತದೆ. ಆರೋಪಿಗಳು ಬೈಕ್ ಮೇಲೆ ಕುಳಿತು ಸಂತ್ರಸ್ತ ಬಾಲಕ ಭಯದಿಂದ ನಡುಗುತ್ತಿರುವಾಗ ನಗುತ್ತಾ ವಿಕೃತ ಆನಂದಪಟ್ಟಿದ್ದಾರೆ. ಒಬ್ಬ ಆರೋಪಿಯು ಸಂತ್ರಸ್ತ ಬಾಲಕನಿಗೆ ನಿಂದಿಸುತ್ತಾ, “ಮತ್ತೆ ಇಂತಹ ತಪ್ಪು ಮಾಡುತ್ತಿಯಾ?” ಎಂದು ಕೇಳುತ್ತಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂತ್ರಸ್ತ ದಲಿತ ಬಾಲಕ ಗಾಂಜಾ ಮಾರಾಟ ಮಾಡಿದ ಆರೋಪವನ್ನು ಒಪ್ಪಿಕೊಳ್ಳುವಂತೆ ದುಷ್ಕರ್ಮಿಗಳು ವಿಡಿಯೊದಲ್ಲಿ ಒತ್ತಾಯಿಸುತ್ತಾರೆ. ಬಾಲಕ ದೌರ್ಜನ್ಯಕ್ಕೆ ಹೆದರಿ ಅದನ್ನು ಒಪ್ಪಿಕೊಂಡಂತೆ ಕಾಣುತ್ತದೆ.
#Update The boy's father had died 10 years ago, his mother works as a laborer to educate her son and family, The family is very poor, they are scared.
Raibareli police have arrested six people including accused Hrithik Singh.#DalitLivesMatter pic.twitter.com/8rsEJhL9ZO
— The Dalit Voice (@ambedkariteIND) April 19, 2022
ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಮುಖ ಆರೋಪಿ ಹೃತಿಕ್ ಸಿಂಗ್ ಸಹಿತ ಏಳು ಮಂದಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಘಟನೆ ಏಪ್ರಿಲ್ 10 ರಂದು ನಡೆದಿದ್ದು, ಸಂತ್ರಸ್ತ ಬಾಲಕನ ಲಿಖಿತ ದೂರಿನ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಕೆಲವು ಆರೋಪಿಗಳು ಸವರ್ಣೀಯ ಸಮುದಾಯದವರಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ನಾನು ದಲಿತ ಎಂಬ ಕಾರಣಕ್ಕೆ ದೇವಾಯಲದ ಹೊರಗೆ ನಿಲ್ಲಿಸಿ ಮಂಗಳಾರತಿ ತರುತ್ತಾರೆ: ಡಾ.ಜಿ. ಪರಮೇಶ್ವರ್ ಆಕ್ರೋಶ
“ನೊಂದ ವಿದ್ಯಾರ್ಥಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಆತನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಯುಪಿ ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಸಿಂಗ್ ಹೇಳಿದ್ದಾರೆ.
ಸಂತ್ರಸ್ತ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ತನ್ನ ವಿಧವೆಯಾದ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಸಂತ್ರಸ್ತೆಯ ತಾಯಿ ಆರೋಪಿಗಳ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕನು ತಾಯಿ ಮಾಡಿರುವ ಕೆಲಸದ ಕೂಲಿ ನೀಡುವಂತೆ ಅವರ ಬಳಿ ಹೋಗಿ ಕೇಳಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು ಬಾಲಕನನ್ನು ಹಿಡಿದು, ನಿಂದಿಸಿ, ಹಲ್ಲೆ ನಡೆಸಿ, ಆರೋಪಿಗಳಲ್ಲಿ ಒಬ್ಬನ ಪಾದಗಳನ್ನು ನೆಕ್ಕುವಂತೆ ಮಾಡಿದ್ದಾರೆ. ಆದರೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಈ ನಿರ್ದಿಷ್ಟ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.


