ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರವನ್ನು ಮತ್ತೇ ಟೀಕಿಸಿದ್ದಾರೆ. 8 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ವಿಫಲರಾಗಿದ್ದಾರೆ ಎಂದು ಅವರು ಮಂಗಳವಾರ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೆ ಬಂದಿದ್ದಾರೆ. ನಿನ್ನೆ ಟ್ವೀಟ್ ಮಾಡಿರುವ ಅವರು, “8 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ವಿಫಲರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 2016 ರಿಂದ ವಾರ್ಷಿಕವಾಗಿ ಬೆಳವಣಿಗೆಯ ದರವು ಕುಸಿಯುತ್ತಿದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ರಾಷ್ಟ್ರೀಯ ಭದ್ರತೆಯು ತೀವ್ರವಾಗಿ ದುರ್ಬಲಗೊಂಡಿದೆ. ಚೀನಾದ ಬಗ್ಗೆ ಮೋದಿಗೆ ಯಾವುದೇ ಅರಿವು ಇಲ್ಲ. ಚೇತರಿಸಿಕೊಳ್ಳಲು ಅವಕಾಶವಿದೆ ಆದರೆ ಅದು ಹೇಗೆ ಎಂದು ಅವರಿಗೆ ತಿಳಿದಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ಪ್ರಧಾನಿ ಮೋದಿಗೆ ನಿಮ್ಮ ಸಲಹೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸುಬ್ರಮಣಿಯನ್ ಸ್ವಾಮಿ, “ನಮ್ಮ ಪ್ರಾಚೀನ ಕಾಲದ ಋಷಿಗಳು, ‘ಜ್ಞಾನವನ್ನು ಪಡೆಯಲು ಶ್ರದ್ಧೆ ಇರುವವರಿಗೆ ಅದನ್ನು ನೀಡಬೇಕು’ ಎಂದು ಸಲಹೆ ನೀಡಿದ್ದಾರೆ” ಎಂದು ವ್ಯಂಗ್ಯವಾಗಡಿದ್ದಾರೆ.
Ancient rishis have advised that knowledge should be parted to those who have shradhha to receive it.
— Subramanian Swamy (@Swamy39) April 19, 2022
ಮತ್ತೊಬ್ಬ ಟ್ವಿಟರ್ ಬಳಕೆದಾರ, “ಆರ್ಥಿಕತೆಯ ಬಗ್ಗೆ ನಿಮ್ಮ ಜ್ಞಾನಕ್ಕೆ ಸಾಟಿಯಿಲ್ಲ ಮತ್ತು ಯಾವುದೇ ಸಂದೇಹವಿಲ್ಲ. ಪ್ರಸ್ತುತ ಸನ್ನಿವೇಶ ಮುಂದುವರಿದರೆ 5 ವರ್ಷಗಳ ನಂತರ ಆರ್ಥಿಕವಾಗಿ ಭಾರತವನ್ನು ಎಲ್ಲಿ ನೋಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, “ಭಾರತದ ಆರ್ಥಿಕ ನೀತಿಯಲ್ಲಿ ಇನ್ನೂ ಐದು ವರ್ಷ ಅದೇ ಜಡತ್ವವನ್ನು ಬಯಸಬೇಡಿ. ಊಹಿಸಲು ತುಂಬಾ ದುಃಖವಾಗುತ್ತದೆ. ನಿಜವಾದ ಇಂಟಲಿಜೆಂಟ್ ನೀತಿಯನ್ನು ಅಳವಡಿಸಿಕೊಳ್ಳಲಾಗುವುದು ಮತ್ತು ನಾವು ದೇಶವನ್ನು ಪ್ರಪಾತದಿಂದ ರಕ್ಷಿಸುತ್ತೇವೆ ಎಂದು ನಾವು ಭಾವಿಸೋಣ” ಎಂದು ಹೇಳಿದ್ದಾರೆ.



ಅಂತೂ ಇಂತೂಅವರದೇ ಪಕ್ಷದವರಿಗೆ ಮೋದಿಯ ಬಗ್ಗೆ ಗೊತ್ತಗ್ತಾ ಇದೆಯಲ್ಲಾ…..ಇನ್ನು ಭಾರತದ ಪ್ರಜೆಗಳಿಗೆ ಯಾವಾಗ ಅರ್ಥ ಆಗುತ್ತೋ ಏನೋ…