ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರವೂ ಏಪ್ರಿಲ್ 20ರಂದು ಬುಧವಾರ ಬೆಳಿಗ್ಗೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಕಾರ್ಯಾಚರಣೆ ನಡೆದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, “ಯಥಾಸ್ಥಿತಿ ಆದೇಶವನ್ನು ಅನುಸರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ತಿಳಿಸಬೇಕು” ಎಂದು ಕೋರ್ಟ್ ರಿಜಿಸ್ಟ್ರಿಗೆ ತಿಳಿಸಿದ್ದಾರೆ.
“ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವೀಕರಿಸಿದ ತಕ್ಷಣ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗುವುದು” ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೆಲವು ನಿಮಿಷಗಳ ಹಿಂದೆ, “ನಾವು ನಮ್ಮ ಕೆಲಸವನ್ನು (ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆ) ನಿಲ್ಲಿಸಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
An encroachment removal drive being carried out on alleged illegal constructions in #Delhi's #Jahangirpuri, days after violence broke out in northwest Delhi during a Hanuman Jayanti procession. @hey_eshwar reports from the ground. pic.twitter.com/klwiLG8MmQ
— The Quint (@TheQuint) April 20, 2022
ಜಹಾಂಗೀರ್‌ಪುರಿಯಲ್ಲಿರುವ ವಿಶೇಷ ಪೊಲೀಸ್ ಕಮಿಷನರ್ ದೇಪೇಂದ್ರ ಪಾಠಕ್, “ನಾಗರಿಕ ಸಂಸ್ಥೆ (ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ನಿರ್ಧಾರ ತೆಗೆದುಕೊಳ್ಳಲಿ. ನಾವು ನಾಗರಿಕ ಸಂಸ್ಥೆಗೆ ಬೆಂಬಲ ಮತ್ತು ರಕ್ಷಣೆ ನೀಡಲು ಇಲ್ಲಿದ್ದೇವೆ” ಎಂದು ಹೇಳಿದ್ದರು.
Gate of a mosque in Delhi's #Jahangirpuri demolished by MCD in crackdown against alleged illegal structures. SC ordered MCD to maintain status quo around 11 am, but the drive continued till around 12.15 pm. Action days after communal clashes on 16 April. @TheQuint @QuintHindi pic.twitter.com/4SBVb5Jwo0
— Eshwar (@hey_eshwar) April 20, 2022
ಬುಧವಾರ ನಡೆದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಕೆಲವು ಬುಲ್ಡೋಜರ್‌ಗಳನ್ನು ಬಳಸಲಾಯಿತು. ಕೆಲವು ಮಾರಾಟದ ಬಂಡಿಗಳು, ಅಂಗಡಿಗಳು ಮತ್ತು ಇತರ ಕಟ್ಟಗಳನ್ನು ನಾಶಪಡಿಸಲಾಯಿತು.
Woman weeps & begs before the authorities as a JCB demolishes part of her house/shop in Delhi's #Jahangirpuri. Citing 'illegal construction', MCD demolished several structures days after communal clases on 16 April. The SC has ordered to maintain status quo @TheQuint @QuintHindi pic.twitter.com/wfWLatwacx
— Eshwar (@hey_eshwar) April 20, 2022
ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ವಾಯುವ್ಯ ದೆಹಲಿಯಲ್ಲಿ ಘರ್ಷಣೆ ಸಂಭವಿಸಿದ ನಂತರ ಅತಿಕ್ರಮಣ ವಿರೋಧಿ ಅಭಿಯಾನದ ಹೆಸರಲ್ಲಿ ಮುಸ್ಲಿಂ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಲಾಗುತ್ತಿದೆ.
ಕಳೆದ ವಾರದ ಕೋಮು ಘರ್ಷಣೆಯ ನಂತರ ಉದ್ವಿಗ್ನಗೊಂಡ ದೆಹಲಿಯ ಜಹಾಂಗೀರಪುರಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ಆರಂಭಿಸಲಾಗಿದ್ದು ಇಂದು ಸುಪ್ರೀಂ ಕೋರ್ಟ್ ಆದೇಶದ ನಂತರ ನಿಲ್ಲಿಸಲಾಗಿದೆ. ಆದರೆ ಮಸೀದಿಯ ಬಳಿ ಇರುವ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆದರೆ ನ್ಯಾಯಾಲಯದ ಆದೇಶದ ನಂತರವೂ ಕೆಡವುವ ಕಾರ್ಯ ಮುಂದುವರಿದಿತ್ತು. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ರಾಜಾ ಇಕ್ಬಾಲ್ ಸಿಂಗ್, ಕೋರ್ಟ್ ಆದೇಶ ಇನ್ನೂ ಸ್ವೀಕರಿಸಲಾಗಿಲ್ಲ. ಹೀಗಾಗಿ ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವ ಕೆಲಸವನ್ನು ಮುಂದುವರಿಸಲಾಗುವುದು” ಎಂದಿದ್ದರು.
Update at 11.36 am: Almost half an hour since Supreme Court asked the MCD to maintain status quo, demolition of 'illegal structures' (as claimed by #MCD ) continues in Delhi's #Jahangirpuri. Communal clashes had erupted here between two groups on 16 April. @TheQuint @QuintHindi pic.twitter.com/NFcp4hSymL
— Eshwar (@hey_eshwar) April 20, 2022
ಇದನ್ನೂ ಓದಿರಿ: ಲವ್ ಜಿಹಾದ್ ಆರೋಪಕ್ಕೆ ಟ್ವಿಸ್ಟ್: ಒಪ್ಪಿತ ಮದುವೆಯಲ್ಲಿ ಮಧ್ಯಪ್ರವೇಶ ಅಸಾಧ್ಯ ಎಂದ ಕೇರಳ ಹೈಕೋರ್ಟ್
ತೆರವು ಕಾರ್ಯಾಚರಣೆ ಚಾಲನೆಗೆ ಮುನ್ನ ಯಾವುದೇ ಸೂಚನೆ ನೀಡಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಎರಡು ದಿನಗಳ ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ಕನಿಷ್ಠ 400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಮುನ್ಸಿಪಲ್ ಕೇಳಿಕೊಂಡಿತ್ತು.
ಅನುಮತಿ ಪಡೆಯದೆ ಹನುಮ ಜಯಂತಿ ಮೆರವಣಿಗೆಯನ್ನು ಮಸೀದಿಯೊಂದರ ಪಕ್ಕದಲ್ಲಿ ನಡೆಸಿದಾಗ ಶನಿವಾರ ಗಲಭೆ ನಡೆಯಿತು. ಕೋಮು ಘರ್ಷಣೆಯಿಂದ ಜಹಾಂಗೀರ್ಪುರಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದವು. ಗುಂಡು ಹಾರಿಸಲಾಯಿತು. ಎಂಟು ಪೊಲೀಸರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 25 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಆರೋಪ ಹೊರಿಸಲಾಗಿದೆ.


