ಒಬ್ಬರನ್ನೊಬ್ಬರು ಮಾತಾಡಿದರು
– ಬರೆಹ: ಮಿಲಾಪ್
ಓದಿದವರು: ಬಾಲಿವುಡ್ ನಟ ಮನೋಜ್ ಬಾಜ್ಪಯಿ
ಈ ಮಂದಿರ ಮತ್ತು ಆ ಮಸೀದಿಯ
ನಡುವಿನ ಕೂಡುರಸ್ತೆಯಲ್ಲಿ
ಭಗವಂತ ಮತ್ತು ಅಲ್ಲಾಹು
ಒಮ್ಮೆ ಭೇಟಿಯಾದರು,
ಒಬ್ಬರೊಡನೊಬ್ಬರು ಮಾತನಾಡಿದರು..
ಕೈ ಜೋಡಿಸುವ ನಮಸ್ಕಾರವಿರಲಿ,
ಕೈ ಎತ್ತಿ ಪ್ರಾರ್ಥಿಸುವ ರಿವಾಜೇ ಇರಲಿ
ಅಂಥ ವ್ಯತ್ಯಾಸವೇನೂ ಇಲ್ಲ ಇಲ್ಲಿ,
ಒಬ್ಬ ಮಂತ್ರ ಪಠಿಸುತ್ತಾನೆ
ಇನ್ನೊಬ್ಬ ನಮಾಜು ಓದುತ್ತಾನೆ
ಬಂದೂಕಿನಿಂದ ಹೊರಟ ಗುಂಡಿಗೆ
ಈದ್ ಗೊತ್ತಿಲ್ಲ, ಹೋಳಿ ಗೊತ್ತಿಲ್ಲ,
ಅದಕ್ಕೆ ಬೀದಿ ಬೀದಿಗಳಲ್ಲಿ ರಕ್ತ ಹರಿಸುವುದಷ್ಟೇ ಗೊತ್ತು..
ಬಂದೂಕು ತೋರಿಸಿ
‘ಯಾವುದು ನಿನ್ನ ಧರ್ಮ’
ಎಂದು ಕೇಳುವಾಗಲೆಲ್ಲ
ಈ ಮನುಷ್ಯನಿಗೇಕೆ ನಾಚಿಕೆ ಆಗುವುದಿಲ್ಲ?
#BhagwanAurKhuda written and conceptualised by me in 2020 and performed so brilliantly by the legendary @BajpayeeManoj whose presence, performance, narration still gives me goosebumps. An important message for our nation. For all Indians and all humans🙏 @TSeries pic.twitter.com/b23NuGjo6C
— Milap (@MassZaveri) April 19, 2022
ಈ ಮಂದಿರ ಮತ್ತು ಆ ಮಸೀದಿಯ
ನಡುವಿನ ಕೂಡುರಸ್ತೆಯಲ್ಲಿ
ಭಗವಂತ ಮತ್ತು ಅಲ್ಲಾಹು
ಒಮ್ಮೆ ಭೇಟಿಯಾದರು,
ಒಬ್ಬರೊಡನೊಬ್ಬರು ಮಾತನಾಡಿದರು..
ಎಲ್ಲರನ್ನೂ ನಾವು
ಇದೇ ಮಣ್ಣಿನಿಂದ ಸೃಷ್ಟಿಸಿದೆವು
ಒಬ್ಬಾತ ಅಮ್ಮಿಯ ಗರ್ಭದಿಂದ ಜನಿಸಿದ
ಮತ್ತೊಬ್ಬ ಅಮ್ಮನ ಮಡಿಲಿಗೆ
ಅಳುತ್ತ ಬಂದ
ಹೀಗಿರುವಾಗ ಯಾರಿರಬಹುದು
ಆ ದ್ರೋಹಿ..
ಇವರಿಗೆ ದ್ವೇಷದ ಪಾಠ ಹೇಳಿಕೊಟ್ಟವನು..?
ಒಬ್ಬ ಅಕ್ಬರನಿಗೆ ‘ಅಮ್ಮ’ನನ್ನು ಹೊಡಿ ಎಂದ
ಮತ್ತೊಬ್ಬ ‘ಅಮರ್’ನ ಕೈಯಲ್ಲಿ ‘ಅಮ್ಮಿ’ಯ ಕೊಲ್ಲಿಸಿದ
ಮಮತೆಯ ಕತ್ತು ಕೊಯ್ಯುವ ಈ ಮೂರ್ಖರಿಗೆ
ಯಾರಾದರೂ ಅರ್ಥ ಮಾಡಿಸಿರಿ..
ಕೋಮುದಳ್ಳುರಿಯ ಈ ಯುದ್ದದಲ್ಲಿ
ನೀವು ಮನುಷ್ಯತ್ವವನ್ನು ಹೂತು ಹಾಕುತ್ತಿದ್ದೀರಿ
ಈ ಮಂದಿರ ಮತ್ತು ಆ ಮಸೀದಿಯ
ನಡುವಿನ ಕೂಡುರಸ್ತೆಯಲ್ಲಿ
ಭಗವಂತ ಮತ್ತು ಅಲ್ಲಾಹು
ಒಮ್ಮೆ ಭೇಟಿಯಾದರು,
ಒಬ್ಬರೊಡನೊಬ್ಬರು ಮಾತನಾಡಿದರು..
- ಕನ್ನಡ ಅನುವಾದ : ಗುರುರಾಜ ಕೊಡ್ಕಣಿ


