ತಮಗಾದ ಲೈಂಗಿಕ ದೌರ್ಜನ್ಯದ ಕುರಿತು ದೂರು ಹೇಳಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ‘ಮರೆತುಬಿಡಿ, ಸುಮ್ಮನಿರಿ’ ಎನ್ನುವ ಮೂಲಕ ಪ್ರಕರಣ ಮುಚ್ಚು ಹಾಕಲು ಯತ್ನಿಸಿದ ಘಟನೆ ದೆಹಲಿಯ ಮುನಿಸಿಪಲ್ ಶಾಲೆಯಲ್ಲಿ ಜರುಗಿದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಆರೋಪಿಸಿದ್ದಾರೆ.
ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಆಯುಕ್ತರಿಗೆ ಸಮನ್ಸ ಕಳಿಸಿರುವ ಅವರು, “ಆಯುಕ್ತರು ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಮತ್ತು ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ಏಪ್ರಿಲ್ 30 ರಂದು ಶಿಕ್ಷಕರು ಬರುವ ಮುನ್ನವೇ ಅಪರಿಚಿತ ವ್ಯಕ್ತಿಯೊಬ್ಬ ತರಗತಿ ಕೊಠಡಿಯೊಳಕ್ಕೆ ಬಂದು ಬಾಗಿಲು ಹಾಕಿ ಇಬ್ಬರು ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿದ್ದಾನೆ. ಅವರ ಮುಂದೆಯೇ ಮೂತ್ರ ವಿಸರ್ಜನೆ ಮಾಡುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆ ವಿದ್ಯಾರ್ಥಿಗಳು ಈ ಕುರಿತು ಪ್ರಾಂಶುಪಾಲರ ಬಳಿ ದೂರು ನೀಡಲು ಹೋದರೆ ಅವರು, ಇದನ್ನೆಲ್ಲ ಮರೆತುಬಿಡಿ, ಸುಮ್ಮನೆ ಇರಿ ಎಂದು ಹೇಳುವ ಮೂಲಕ ಉಡಾಫೆಯಾಗಿ ವರ್ತಿಸಿದ್ದಾರೆ ಎಂದು ಸ್ವಾತಿ ಮಾಲಿವಾಲ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
दिल्ली के MCD स्कूल में आदमी घुस आया & 2 लड़कियों के कपड़े उतारे, फिर पूरी क्लास के सामने शौच किया! लड़कियों ने प्रिन्सिपल & टीचर को बताया तो उन्होंने कहा ‘भूल जाओ’! मैंने पुलिस को नोटिस इशू करा है – आरोपी तुरंत अरेस्ट हो।MCD कमिशनर को भी तलब किया है। जवाबदेही निश्चित होनी चाहिए! pic.twitter.com/qRUqfgXOOw
— Swati Maliwal (@SwatiJaiHind) May 4, 2022
ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಇದೇ ರೀತಿ ಅತ್ಯಾಚಾರದ ವಿರುದ್ಧ ದೂರು ನೀಡಲು ಹೋದ 13 ವರ್ಷದ ಬಾಲಕಿ ಮೇಲೆ ಪೊಲೀಸ್ ಅಧಿಕಾರಿಯೇ ಮತ್ತೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನಡೆದಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಅತ್ಯಾಚಾರದ ದೂರು ನೀಡಲು ಹೋದ 13 ವರ್ಷದ ಬಾಲಕಿ ಮೇಲೆ ಮತ್ತೆ ಪೊಲೀಸ್‌ನಿಂದಲೇ ಅತ್ಯಾಚಾರ ಆರೋಪ
ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿಯು ತನ್ನ ಸಂಬಂಧಿಕರೊಂದಿಗೆ ದೂರು ನೀಡಲು ಲಲಿತ್‌ಪುರ್ ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಅಲ್ಲಿನ ಸ್ಟೇಷನ್ ಹೌಸ್ ಆಫೀಸರ್ ತಿಲಕ್‌ಧಾರಿ ಸರೋಜ್ ಎಂಬಾತ ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯ ದೂರಿನ ಆಧಾರದಲ್ಲಿ ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ, ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.


