Homeಮುಖಪುಟನಿಮ್ಮಂಥವರಿಂದ ಕಾಂಗ್ರೆಸ್ ದುಸ್ಥಿತಿಗಿಳಿದಿದೆ: ಪಿ.ಚಿದಂಬರಂ ವಿರುದ್ಧ ಕಾಂಗ್ರೆಸ್‌ ವಕೀಲರ ಆಕ್ರೋಶ

ನಿಮ್ಮಂಥವರಿಂದ ಕಾಂಗ್ರೆಸ್ ದುಸ್ಥಿತಿಗಿಳಿದಿದೆ: ಪಿ.ಚಿದಂಬರಂ ವಿರುದ್ಧ ಕಾಂಗ್ರೆಸ್‌ ವಕೀಲರ ಆಕ್ರೋಶ

ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಅಧ್ಯಕ್ಷರು ಕಂಪನಿಯೊಂದರ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ಚಿದಂಬರಂ ಕಂಪನಿಯ ಪರವಾಗಿ ವಕೀಲರಾಗಿ ಹಾಜರಾಗಿದ್ದಾರೆ!

- Advertisement -
- Advertisement -

ಕಾಂಗ್ರೆಸ್ ನಾಯಕ, ರಾಜ್ಯ ಸಭಾ ಸದಸ್ಯ ಪಿ.ಚಿದಂಬರಂ ಅವರು ಪ್ರಕರಣವೊಂದರಲ್ಲಿ ವಕೀಲರಾಗಿ ಬುಧವಾರ ಕಲ್ಕತ್ತಾ ಹೈಕೋರ್ಟ್‌ಗೆ ಭೇಟಿ ನೀಡಿದಾಗ ಪಕ್ಷದ ಕಾರ್ಯಕರ್ತರು ಹಾಗೂ ವಕೀಲರು ಪ್ರತಿಭಟನೆ ಚಿದಂಬರಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ನ್ಯಾಯಾಲಯದಿಂದ ಹೊರಬರಲು ಹೊರಟಿದ್ದ ಚಿದಂಬರಂ ಅವರಿಗೆ ಕಾಂಗ್ರೆಸ್ ಕಾನೂನು ಘಟಕಕ್ಕೆ ಸೇರಿದ್ದ ವಕೀಲರ ಗುಂಪು ಕಪ್ಪು ವಸ್ತ್ರ ಮತ್ತು ಧ್ವಜಗಳನ್ನು ತೋರಿಸಿ ಪ್ರತಿಭಟನೆ ನಡೆಸಿದೆ. “ನೀವು ಮಮತಾ ಬ್ಯಾನರ್ಜಿ ಅವರ ಪರ ಸಹಾನುಭೂತಿ ಹೊಂದಿದ್ದೀರಿ. ಅವರ ಏಜೆಂಟ್ ಆಗಿದ್ದೀರಿ. ನಿಮ್ಮಂಥವರ ನಾಯಕತ್ವದಿಂದಾಗಿ ಕಾಂಗ್ರೆಸ್ ಈ ದುಸ್ಥಿತಿಗೆ ಇಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೃಷಿ ಸಂಸ್ಕರಣಾ ಸಂಸ್ಥೆ ಕೆವೆಂಟರ್‌ನ ವಕೀಲರಾಗಿ ಚಿದಂಬರಂ ಪ್ರತಿನಿಧಿಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಅವರು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹೀಗಿರುವ ಕಾಂಗ್ರೆಸ್ ನಾಯಕ ಚಿದಂಬರಂ ಆ ಕಂಪನಿಯನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂದು ಪ್ರತಿಭಟನಾನಿರತ ವಕೀಲರು ಪ್ರಶ್ನಿಸಿದ್ದಾರೆ. ಮೆಟ್ರೋ ಡೈರಿಯ ಷೇರುಗಳನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಟಿಎಂಸಿ ಸರ್ಕಾರದ ನಿರ್ಧಾರವನ್ನು ಚೌಧರಿ ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರಲ್ಲಿ ಒಬ್ಬರಾದ ವಕೀಲ ಕೌಸ್ತವ್ ಬಾಗ್ಚಿ, “ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರು ಯಾವ ಶೇರುಗಳ ಖರೀದಿಯನ್ನು ಆಕ್ಷೇಪಿಸುತ್ತಿದ್ದಾರೋ ಅದರ ವಿರುದ್ಧ ಚಿದಂಬರಂ ಹಾಜರಾಗಿದ್ದಾರೆ” ಎಂದು ಟೀಕಿಸಿದ್ದಾರೆ. ಚಿದಂಬರಂ ಅವರು ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸದಸ್ಯರಾಗಿದ್ದಾರೆ ಹಾಗೂ ಪ್ರಮುಖ ನಾಯಕರಾಗಿದ್ದಾರೆ ಎಂದು ಬಾಗ್ಚಿ ಉಲ್ಲೇಖಿಸಿದ್ದಾರೆ.

“ಕಾಂಗ್ರೆಸ್ ಕಾರ್ಯಕರ್ತರಾಗಿ ಪ್ರತಿಭಟನೆಯನ್ನು ನಡೆಸಿದ್ದೇನೆ. ವಕೀಲರಾಗಿ ಅಲ್ಲ. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುವ ಯಾವುದೇ ನಾಯಕನ ವಿರುದ್ಧ ಪಕ್ಷದ ಕಾರ್ಯಕರ್ತರು ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಸರ್ಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಅಮಿತ್ ಶಾ ಅಧಿಕೃತ ಒಪ್ಪಿಗೆ: ಸಿದ್ದರಾಮಯ್ಯ ಟೀಕೆ

ಘಟನೆಯ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಚೌದರಿ ಮಾತನಾಡಿದ್ದು, “ಕಾಂಗ್ರೆಸ್ ಬೆಂಬಲಿಗರಿಂದ ಪ್ರತಿಭಟನೆಗಳು ಸ್ವಾಭಾವಿಕವಾಗಿ ನಡೆಯುತ್ತವೆ. ಪ್ರತಿಭಟನೆಗಳು ಕಾಂಗ್ರೆಸ್‌ನ ಸ್ವಭಾವ” ಎಂದಿದ್ದಾರೆ.

“ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹಾಜರಿದ್ದ ಕೆಲವು ಕಾಂಗ್ರೆಸ್ ಬೆಂಬಲಿಗರು ಪ್ರತಿಭಟಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ಅವರ ಸಹಜ ಪ್ರತಿಕ್ರಿಯೆ ಎಂದು ನಾನು ನಂಬುತ್ತೇನೆ” ಎಂದು ಚೌಧರಿ ತಿಳಿಸಿದ್ದಾರೆ.

ಚಿದಂಬರಂ ಅವರು ಪ್ರಕರಣದಲ್ಲಿ ವಕೀಲರಾಗಿ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಧ, “ವೃತ್ತಿಪರ ಜಗತ್ತಿನಲ್ಲಿ ತಮ್ಮ ಆಯ್ಕೆಗಳನ್ನು ಆಯ್ಕೆ ಮಾಡುವ ಹಕ್ಕನ್ನು ಅವರು ಹೊಂದಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಇದು ವೃತ್ತಿಪರ ಜಗತ್ತು. ಇದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ … ಯಾರು ಯಾರಿಗೂ ನಿರ್ದೇಶಿಸಲು ಸಾಧ್ಯವಿಲ್ಲ” ಎಂದು ಚೌದರಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು | Naanu Gauri

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು

0
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆ, ಅವರಿಗೆ ಸ್ವಾಗತ ಕೋರಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹಾಕಿರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾನರ್‌ನಲ್ಲಿ ಮುರ್ಮು ಅವರನ್ನು ‘ದೇಶದ...